ಬೆಂಗಳೂರು,ಅ.2-ಐಎಂಎ ಪ್ರಕರಣ, ಟೆಲಿಫೆÇೀನ್ ಕದ್ದಾಲಿಕೆ, ಆಂಬಿಡೆಂಟ್ ಚಿಟ್ ಫಂಡ್ ಹಗರಣ ಸೇರಿದಂತೆ ಕೆಲವು ಪ್ರಕರಣಗಳನ್ನು ಸೂಕ್ತ ರೀತಿ ನಿರ್ವಹಿಸುವಲ್ಲಿ ವಿಫಲರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಪೆÇಲೀಸ್ ಮಹಾನಿರ್ದೇಶಕರಾದ ನೀಲಮಣಿ ಎಂ.ರಾಜು ಅವರನ್ನು ಎತ್ತಂಗಡಿ ಮಾಡಲು ಸರ್ಕಾರ ತೀರ್ಮಾನಿಸಿದೆ.
ಕೆಲವು ಪ್ರಕರಣಗಳಲ್ಲಿ ಇಲಾಖೆಯ ಅಧಿಕಾರಿಗಳೇ ನೇರವಾಗಿ ಶಾಮೀಲಾಗಿ ವಿಚಾರಣೆ ಎದುರಿಸುತ್ತಿದ್ದರೂ ಸಹ ಇಂತಹ ಪ್ರಕರಣವನ್ನು ತಡೆಗಟ್ಟಲು ನೀಲಮಣಿ ರಾಜು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಹೀಗಾಗಿ ಶೀಘ್ರದಲ್ಲೇ ಅವರನ್ನು ಬೇರೊಂದು ಸ್ಥಳಕ್ಕೆ ವರ್ಗಾವಣೆ ಮಾಡಿ ದಕ್ಷ ಅಧಿಕಾರಿಯನ್ನು ಉನ್ನತ ಸ್ಥಾನಕ್ಕೆ ತರಲು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರೇ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ ಪ್ರಥಮ ಮಹಿಳಾ ಡಿಐಜಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ನೀಲಮಣಿ ರಾಜು ಅವರು ಪ್ರಾರಂಭದಲ್ಲಿ ಜನರ ನಿರೀಕ್ಷೆಗೆ ತಕ್ಕಂತೆಯೇ ಒಂದಿಷ್ಟು ಕೆಲಸ ಮಾಡಿದ್ದರು. ಆದರೆ ಬರಬರುತ್ತಾ ಸರ್ಕಾರಕ್ಕೆ ಮುಜುಗರ ಉಂಟು ಮಾಡುವಂತಹ ಪ್ರಕರಣಗಳು ನಡೆದರೂ ಅದರ ಬಗ್ಗೆ ಗಮನವಹಿಸದಿರುವುದು ಅವರ ಕಾರ್ಯ ವೈಫಲ್ಯವನ್ನು ಎತ್ತಿತೋರಿಸುತ್ತದೆ.
ಐಎಂಎ ವಂಚನೆ ಪ್ರಕರಣದಲ್ಲಿ ಪೆÇಲೀಸ್ ಇಲಾಖೆಯ ಅನೇಕ ಅಧಿಕಾರಿಗಳು ಶಾಮೀಲಾಗಿರುವುದು ಈಗಾಗಲೇ ತನಿಖೆಯಿಂದ ಬಹಿರಂಗಗೊಂಡಿದೆ.
ಮನ್ಸೂರ್ ಅಲಿ ಖಾನ್ ಸಂಸ್ಥೆ ಮೇಲೆ ಹದ್ದಿನ ಕಣ್ಣಿಡುವಂತೆ ಖುದ್ದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ಬಿಐ) ಪತ್ರ ಬರೆದಿತ್ತು.
ಮನ್ಸೂರ್ ಅಲಿಖಾನ್ನ ವಹಿವಾಟುಗಳು ಸಂಶಯಕ್ಕೆ ಎಡೆ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಆತನ ಚಲನವಲನಗಳ ಮೇಲೆ ನಿಗಾವಹಿಸುವುದು ಹಾಗೂ ಷೇರುದಾರರಿಗೆ ಹೆಚ್ಚಿನ ಬಂಡವಾಳ ಹೂಡದಂತೆ ನಿರ್ದೇಶನ ನೀಡಬೇಕೆಂದು ಆರ್ಬಿಐ ಅಧಿಕಾರಿಗಳು ಪತ್ರದಲ್ಲಿ ಗೃಹ ಇಲಾಖೆಗೆ ಸೂಚನೆ ಕೊಟ್ಟಿದ್ದರು.
ಆದರೆ ಈ ಬಗ್ಗೆ ನೀಲಮಣಿ ರಾಜು ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪವಿದೆ.ತಮ್ಮ ಕೆಳಹಂತದ ಅಧಿಕಾರಿಗಳು ಶಾಮೀಲಾಗಿದ್ದರೂ ಅವರಿಗೆ ಒಂದಿಷ್ಟು ಮಾಹಿತಿಯೂ ಇರಲಿಲ್ಲ ಎನ್ನಲಾಗಿದೆ.
ಇದೆಲ್ಲದಕ್ಕಿಂತ ಹೆಚ್ಚಾಗಿ ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿರುವ ಟೆಲಿಫೆÇೀನ್ ಕದ್ದಾಲಿಕೆ ಪ್ರಕರಣ ನಡೆದಿರುವುದು ಇವರ ಅಧಿಕಾರದ ಅವಧಿಯಲ್ಲಿಯೇ.
ಸಾಮಾನ್ಯವಾಗಿ ಟೆಲಿಫೆÇೀನ್ ಕದ್ದಾಲಿಸಲು ಸರ್ಕಾರದ ಮುಖ್ಯಸ್ಥರು ಗೃಹ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆಯಬೇಕು.ನಂತರ ಈ ಬಗ್ಗೆ ಡಿಐಜಿಗೂ ಗೌಪ್ಯವಾಗಿ ಮಾಹಿತಿ ನೀಡಬೇಕು. ಇಲ್ಲಿ 600ಕ್ಕೂ ಹೆಚ್ಚು ವ್ಯಕ್ತಿಗಳ ದೂರವಾಣಿ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು ಇಲ್ಲಿಯೂ ಕೂಡ ನೀಲಮಣಿ ರಾಜು ಅವರ ನಿರ್ಲಕ್ಷ್ಯತೆ ಹಾಗೂ ಕಾರ್ಯವೈಫಲ್ಯವೇ ಎದ್ದು ಕಾಣುತ್ತಿದೆ.
ಏಕೆಂದರೆ ಒಂದು ಬಾರಿ ಮುಖ್ಯಮಂತ್ರಿ ಯಡಿಯೂರಪ್ಪ, ನೀಲಮಣಿ ರಾಜು ಅವರನ್ನು ಮನೆಗೆ ಕರೆಸಿಕೊಂಡು ಅನೌಪಚಾರಿಕವಾಗಿ ಇದರಲ್ಲಿ ಯಾರು?ಯಾರು ?ಶಾಮೀಲಾಗಿದ್ದಾರೆ, ಎಲ್ಲಿಂದ ಎಲ್ಲಿಯವರೆಗೆ ಕದ್ದಾಲಿಕೆ ಮಾಡಲಾಗಿತ್ತು?ಯಾರ ದೂರವಾಣಿಗಳನ್ನು ಟ್ರ್ಯಾಪ್ ಮಾಡಲಾಗಿದೆ ಎಂಬುದರ ಮಾಹಿತಿ ಕೇಳಿದ್ದರು.
ಆಶ್ಚರ್ಯವೆಂದರೆ ನೀಲಮಣಿ ರಾಜು ಅವರಿಗೆ ಶೇ.1ರಷ್ಟು ಮಾಹಿತಿಯೂ ಇರಲಿಲ್ಲ ಎನ್ನಲಾಗಿದೆ.ನಾನು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ವಿವರ ನೀಡುತ್ತೇನೆ ಎಂದು ಸಿಎಂ ಮುಂದೆ ಹೇಳಿದಾಗ ಯಡಿಯೂರಪ್ಪ ತುಂಬಾ ಕೋಪಿಸಿಕೊಂಡಿದ್ದರು.
ಅದಾದ ನಂತರವೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಮುಂದಾದರು. ಹೀಗೆ ಇಲಾಖೆಯಲ್ಲಿ ಎಡವುತ್ತಲೇ ಬಂದಿರುವ ನೀಲಮಣಿ ರಾಜು ಮುಂದಿನ ತಿಂಗಳು ರಾಜ್ಯದ ಪೆÇಲೀಸ್ ಮಹಾನಿರ್ದೇಶಕರಾಗಿ ಎರಡು ವರ್ಷ ಪೂರೈಸುತ್ತಾರೆ. 2020, ಜನವರಿ ತಿಂಗಳಿನಲ್ಲಿ ಅವರು ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಈಗ ಸಾಮಾನ್ಯವಾಗಿ ಬೆಂಗಳೂರು ನಗರ ಪೆÇಲೀಸ್ ಆಯುಕ್ತ ಮತ್ತು ರಾಜ್ಯ ಪೆÇಲೀಸ್ ಮಹಾನಿರ್ದೇಶಕರ ಹುದ್ದೆಯಲ್ಲಿ ಯಾರೊಬ್ಬರನ್ನು ಹೆಚ್ಚು ದಿನ ಮುಂದುವರೆಸಲು ಸರ್ಕಾರ ಒಪ್ಪುವುದಿಲ್ಲ.
ಈಗಾಗಲೇ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನೀಲಮಣಿ ರಾಜು ಎತ್ತಂಗಡಿಯಾಗುವುದು ಖಚಿತ ಎನ್ನಲಾಗುತ್ತಿದೆ.
ತೆರವಾಗಲಿರುವ ಈ ಹುದ್ದೆಗೆ ಈಗಾಗಲೇ ಭರ್ಜರಿ ಲಾಬಿ ಆರಂಭವಾಗಿದೆ. ಹಿರಿಯ ಪೆÇಲೀಸ್ ಅಧಿಕಾರಿ ಪ್ರವೀಣ್ಸೂದ್ ಅವರ ಹೆಸರು ಡಿಐಜಿ ಹುದ್ದೆಗೆ ಪ್ರಬಲವಾಗಿ ಕೇಳಿಬರುತ್ತಿದೆ.