ಉತ್ತರಾಖಂಡ್‍ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ-ಬಿಜೆಪಿಯಿಂದ 40 ಮುಖಂಡರು ಮತ್ತು ಕಾರ್ಯಕರ್ತರ ಉಚ್ಛಾಟನೆ

ಡೆಹ್ರಾಡೂನ್, ಸೆ.30- ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಉತ್ತರಾಖಂಡ್‍ನ ಬಿಜೆಪಿ 40 ಮುಖಂಡರು ಮತ್ತು ಕಾರ್ಯಕರ್ತರನ್ನು ಉಚ್ಛಾಟನೆ ಮಾಡಲಾಗಿದೆ.

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಿಜೆಪಿ ಈ ಕ್ರಮ ಕೈಗೊಂಡಿದೆ. ರಜನೀಶ್ ಶರ್ಮಾ, ಮೀರಾ ರತುರಿ, ಮೋಹನ್ ಸಿಂಗ್ ಬಿಶ್ತ್, ಮಹೇಶ್ ಬಾಗ್ರಿ, ಪ್ರಮೀಲಾ ಯುನಿಯಲ್, ಭವನ್ ಸಿಂಗ್ ಉಚ್ಛಾಟನೆಗೊಂಡಿರುವ ಪ್ರಮುಖ ಮುಖಂಡರು ಮತ್ತು ಸದಸ್ಯರಾಗಿದ್ದಾರೆ.

ಜುಲೈ ತಿಂಗಳಲ್ಲಿ ಉತ್ತರಾಖಂಡ್‍ನ ಶಾಸಕ ಕುನ್ವರ್ ಪ್ರಣವ್ ಸಿಂಗ್‍ನ್ನು ರಿವಾಲ್ವರ್ ಹಿಡಿದು ನೃತ್ಯ ಮಾಡಿದ್ದಕ್ಕಾಗಿ ಪಕ್ಷದಿಂದ ಕಿತ್ತೊಗೆಯಲಾಗಿತ್ತು.

ಈಗ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಜನಪ್ರತಿನಿಧಿಗಳ ಜತೆ ನಡೆಸಿದ್ದ ಮಹತ್ವದ ಸಭೆಯ ಒಂದು ತಿಂಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ