ಬೆಂಗಳೂರು, ಸೆ.29-ಸರ್ಕಾರಿ ಹುದ್ದೆಗಳಲ್ಲಿ ರಾಷ್ಟ್ರೀಯ ಕೆಡಿಟ್ ಕಾಪ್ರ್ಸ್ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಬೇಕೆಂದು ಕರ್ನಾಟಕ ಸ್ಟೇಟ್ ನ್ಯಾಷನಲ್ ಎನ್ಸಿಸಿ ಎಕ್ಸ್ ಅಸೋಸಿಯೇಷನ್ ಒತ್ತಾಯಿಸಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಎಮ್.ಬಕ್ಕೇಶ್, ಸರ್ಕಾರಿ ಉದ್ಯೋಗಗಳಲ್ಲಿ ಈ ಹಿಂದೆ ಎನ್ಸಿಸಿ ಪೂರೈಸಿರುವವರಿಗೆ ಮೀಸಲಾತಿ ಇತ್ತು. ಆದರೆ, ಈಗ ಅದನ್ನು 2008ರಲ್ಲಿ ರದ್ದುಪಡಿಸಲಾಗಿದೆ. ಕ್ರೀಡಾಪಟುಗಳಿಗೆ ನೀಡುವಂತೆ, ಎನ್ಸಿಸಿ ವಿದ್ಯಾರ್ಥಿಗಳಿಗೂ ಉದ್ಯೋಗಗಳಲ್ಲಿ ಮೀಸಲಾತಿಯನ್ನು ನೀಡಬೇಕು, ಅದನ್ನು ಮರಳಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಉತ್ತಮ ಪ್ರಜಾಪ್ರಭುತ್ವ ಕಟ್ಟಲು ಅಸೋಸಿಯೇಷನ್ಯನ್ನು ಪ್ರಾರಂಭಿಸಿದ್ದು ಎನ್ಸಿಸಿ ತರಬೇತಿಯನ್ನು ಪಡೆದು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳುವುದಾಗಿ ಮನವಿ ಮಾಡಿದರು.
ನೋಂದಣಿ ಉಚಿತವಾಗಿ ಮಾಡಿಕೊಳ್ಳಲಾಗುವುದಾಗಿ ತಿಳಿಸಿದರು.