ನವದೆಹಲಿ,ಸೆ.17-ಭಾರತದ ಏಕತೆಗೆ ಮತ್ತು ರಾಷ್ಟ್ರ ಒಕ್ಕೂಟದ ವ್ಯವಸ್ಥೆಗೆ ಮಾರಕವಾದ ಹಿಂದಿ ಹೇರಿಕೆ ಕೈಬಿಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಇಂದು ಟೌನ್‍ಹಾಲ್ ಮುಂಭಾಗ ಬೃಹತ್ ಪ್ರತಿಭಟನಾ ಧರಣಿ ನಡೆಸಿತು.
ಕನ್ನಡಪರ ಹೋರಾಟಗಾರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಂಗನಹಳ್ಳಿ ಶಿವಶಂಕರ್ ಡಾ.ಬೈರಮಂಗಲ ರಾಮೇಗೌಡ ಡಾ.ಮುಖ್ಯಮಂತ್ರಿ ಚಂದ್ರು, ಪ್ರೋ.ಜಿ.ಎಸ್.ಸಿದ್ದರಾಮಯ್ಯ ಮತ್ತಿತರರು ಪಾಲ್ಗೊಂಡು ಕರ್ನಾಟಕ ನೈರುತ್ಯ ರೈಲ್ವೆ ವಲಯದ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ವಿರೋಧಿಸಿ, ಕೇಂದ್ರ ಸರ್ಕಾರದ ಉದ್ದಿಮೆ, ಕಚೇರಿಗಳಲಿ ರಾಷ್ಟ್ರೀಕೃತ ಬ್ಯಾಂಕ್‍ಗಳ ಸ್ಪರ್ಧಾತ್ಮಕ ಪರೀಕ್ಷೆಗಳು ಆಯಾ ರಾಜ್ಯ ಭಾಷೆಗಳಲ್ಲಿ ನಡೆಸುವಂತೆ ಹಾಗೂ ರಾಜ್ಯದ ನೆರೆ ಪ್ರದೇಶಗಳಲ್ಲಿ ಉಂಟಾಗಿರುವ ಜನಜಾನುವಾರುಗಳ ಪ್ರಾಣಹಾನಿ, ಅಪಾರ ಪ್ರಮಾಣದ ಆಸ್ತಿ, ನಷ್ಟ ಮತ್ತು ಅಪಾರ ಪ್ರಮಾಣದ ಜನ ಕಷ್ಟ ಅನುಭವಿಸುತ್ತಿದ್ದು, ಕೇಂದ್ರ ಮಲತಾಯಿ ಧೋರಣೆ ತೋರದೆ ನೆರೆ ಪರಿಹಾರ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ದ ಘೋಷಣೆಗಳನ್ನು ಕೂಗಲಾಯಿತು.
ಈ ಕೂಡಲೆ ಕೇಂದ್ರ ಸರ್ಕಾರ ತನ್ನ ತಾರತಮ್ಯ ಕೈಬಿಟ್ಟಿದ್ದು ರಾಜ್ಯಕ್ಕೆ ಪರಿಹಾರ ಒದಿಗಸಬೇಕು, ನೆರೆ ಪೀಡಿತ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.