ಇಂದು ಚುನಾವಣಾ ಆಯೋಗದ ಸಭೆ; ಮಹಾರಾಷ್ಟ್ರ-ಹರಿಯಾಣ-ಜಾರ್ಖಂಡ್ ಚುನಾವಣೆ ಬಗ್ಗೆ ಚರ್ಚೆ ಸಾಧ್ಯತೆ

ನವದೆಹಲಿಇಂದು ಚುನಾವಣಾ ಆಯೋಗ(Election Commission) ದ ಮಹತ್ವದ ಸಭೆ ನಡೆಯಲಿದ್ದು, ಮುಂಬರುವ ಮಹಾರಾಷ್ಟ್ರ (Maharashtra), ಹರಿಯಾಣ (Haryana)  ಮತ್ತು ಜಾರ್ಖಂಡ್ (Jharkhand) ವಿಧಾನಸಭಾ ಚುನಾವಣೆಯ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಯಬಹುದು ಎನ್ನಲಾಗಿದೆ. ಈ ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ. ಮೊದಲು ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ನಂತರ ಜಾರ್ಖಂಡ್‌ನಲ್ಲಿ ಚುನಾವಣೆ ನಡೆಯಲಿದೆ. ಕೆಲವು ದಿನಗಳ ಹಿಂದೆ ಚುನಾವಣಾ ಆಯೋಗದ ತಂಡ ಮಹಾರಾಷ್ಟ್ರ ಮತ್ತು ಹರಿಯಾಣ ಪ್ರವಾಸ ಕೈಗೊಂಡಿತ್ತು.

ವಾಸ್ತವವಾಗಿ, ಈಗಿರುವ ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್‌ನ ಅಸೆಂಬ್ಲಿಗಳ ಅಧಿಕಾರಾವಧಿಯು ಕೆಲವೇ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ಈ ಕಾರಣದಿಂದಾಗಿ, ಈ ಮೂರು ರಾಜ್ಯಗಳಲ್ಲಿ ಚುನಾವಣೆ ವರ್ಷಾಂತ್ಯದ ಮೊದಲು ನಡೆಯಲಿದೆ. ಪ್ರಸ್ತುತ, ಎಲ್ಲಾ ಮೂರು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವಿದೆ.

ಮಹಾರಾಷ್ಟ್ರಕ್ಕೆ 288 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದ್ದರೆ, ಹರಿಯಾಣ 90 ಮತ್ತು ಜಾರ್ಖಂಡ್‌ 81 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಈ ವರ್ಷದ ಅಂತ್ಯದ ವೇಳೆಗೆ ಈ ಮೂರು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಈ ಮೂರು ರಾಜ್ಯಗಳಲ್ಲಿ 2014 ರ ಅಕ್ಟೋಬರ್‌ನಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದು, ಅಕ್ಟೋಬರ್ 19 ರಂದು ಚುನಾವಣಾ ಫಲಿತಾಂಶ ಪ್ರಕಟವಾಯಿತು. ಆದ್ದರಿಂದ, ಈ ಮೂರು ರಾಜ್ಯಗಳ ವಿಧಾನಸಭೆಯ ಅಧಿಕಾರಾವಧಿ ಶೀಘ್ರದಲ್ಲೇ ಕೊನೆಗೊಳ್ಳಲಿದೆ.

ಈ ಮೂರು ರಾಜ್ಯಗಳಲ್ಲಿ  2014 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಚನೆಯಾಯಿತು. ಮಹಾರಾಷ್ಟ್ರ ವಿಧಾನಸಭೆಯ ಬಗ್ಗೆ ಮಾತನಾಡುವುದಾದರೆ, ಬಿಜೆಪಿಗೆ ಇಲ್ಲಿ 288 ಸ್ಥಾನಗಳಲ್ಲಿ 122 ಸ್ಥಾನಗಳು ದೊರೆತಿವೆ. ಅದೇ ಸಮಯದಲ್ಲಿ, ಹರಿಯಾಣದ 90 ಸ್ಥಾನಗಳಲ್ಲಿ ಬಿಜೆಪಿಯಲ್ಲಿ 47 ಸ್ಥಾನಗಳಿದ್ದು, ನಂತರ ಮನೋಹರ್ ಲಾಲ್ ಖಟ್ಟರ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾಯಿತು. ಜಾರ್ಖಂಡ್‌ನ ವಿಧಾನಸಭೆಯಲ್ಲೂ 81 ಸ್ಥಾನಗಳಲ್ಲಿ 37 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು, ನಂತರ ರಘುಬರ್ ದಾಸ್ ಅಲ್ಲಿ ಮುಖ್ಯಮಂತ್ರಿಯಾದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ