ಲಡಾಖ್ ಗಡಿಯಲ್ಲಿ ಭಾರತ- ಚೀನಾ ಸೈನಿಕರ ನಡುವೆ ಸಂಘರ್ಷ; ಪರಿಸ್ಥಿತಿ ಉದ್ವಿಘ್ನ

ಹೊಸದಿಲ್ಲಿಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಸಂಘರ್ಷ ಶುರುವಾಗಿದೆ. ಪೂರ್ವ ಲಡಾಖ್​​ನ್​​​ ಹಾಗೂ ಟಿಬೇಟ್ನಡುವಿನ 134 ಕಿಲೋಮೀಟರ್ ಉದ್ದದ ಪಾಂಗಾಂಗ್ ಸೋ ಸರೋವರದ ಉತ್ತರ ದಂಡೆಯಲ್ಲಿ ಬುಧವಾರವೇ ಕಾಳಗ ಆರಂಭವಾಗಿದೆ ಎನ್ನಲಾಗಿದೆ.

ಪಾಂಗಾಂಗ್​​​ ಸೋ ಸರೋವರದ ದಂಡೆ ಪ್ರದೇಶದಲ್ಲಿ ಭಾರತೀಯ ಸೈನಿಕರು ತಿರುಗುತ್ತಿದ್ದರು. ಈ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿರುವ ಪೀಪಲ್ಸ್ ಲಿಬರೇಶನ್ ಆರ್ಮಿಯೂ, ಭಾರತ ಸೈನಿಕರ ಜೊತೆಗೆ ಕ್ಯಾತೆ ತೆಗೆದಿದೆ. ಇದೀಗ ಉಭಯ ದೇಶಗಳ ನಡುವೆ ಯುದ್ಧಕ್ಕೆ ಕಾರಣವಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ.

ಉಭಯ ದೇಶಗಳ ನಡುವಿನ ಉದ್ವಿಗ್ನತೆ ಶಮನಕ್ಕಾಗಿ ದ್ವಿಪಕ್ಷೀಯ ವ್ಯವಸ್ಥೆಯಡಿ ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿಗಳ ನೇತೃತ್ವದ ನಿಯೋಗ ಮುಂದಾಗಿದೆ. ಹೀಗಾಗಿ ಭಾರತ ಮತ್ತು ಚೀನಾ ಮಧ್ಯೆ ಮಾತುಕತೆ ನಡೆಸಲು ಯತ್ನಿಸುತ್ತಿದೆ ಎಂದು ಸೇನೆಯ ಮೂಲಗಳು ಸ್ಪಷ್ಟಪಡಿಸಿವೆ.

ಎರಡು ದೇಶಗಳ ನಡುವಿನ ನಿಯಂತ್ರಣ ರೇಖೆ ಎಲ್ಲಿದೆ ಎಂಬುದ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಇಲ್ಲ. ಇದರಿಂದ ಸಹಜವಾಗಿ ನಮ್ಮ ನಡುವೆ ಭಿನ್ನಾಭಿಪ್ರಾಯ ಇರುವುದು ಸತ್ಯ. ಆದ್ದರಿಂದಲೇ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ವಿಚಾರಕ್ಕೆ ಪಾಕಿಸ್ತಾನ ಅಪಸ್ವರ ಎತ್ತಿತ್ತು. ಈ ಬೆನ್ನಲ್ಲೇ ಇಂದು ವಿಶ್ವಸಂಸ್ಥೆಯಲ್ಲಿ ವಿಶೇಷ ಸಭೆ ನಡೆದಿತ್ತು. ಈ ವಿಚಾರದಲ್ಲಿ ಪಾಕಿಸ್ತಾನಕ್ಕೆ ಸಹಾಯಹಸ್ತ ಚಾಚಿದ ಮಿತ್ರ ರಾಷ್ಟ್ರ ಚೀನಾ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಗುಪ್ತ ಸಮಾಲೋಚನೆ(Closed Consultations) ನಡೆಸುವಂತೆ ಮನವಿ ಮಾಡಿತ್ತು. ಯುಎನ್​ಎಸ್​ಸಿಯಲ್ಲಿ ಖಾಯಂ ಸದಸ್ಯನಾಗಿರುವ ಚೀನಾದ ಮನವಿಗೆ ಒಪ್ಪಿರುವ ಮಂಡಳಿಯು ಇಂದು ಚರ್ಚೆ ನಡೆಸಲು ತೀರ್ಮಾನಿಸಿತ್ತು

ಇನ್ನು 370ನೇ ರದ್ದು ಭಾರತ ಮತ್ತು ಪಾಕಿಸ್ತಾನ ಮಧ್ಯೆ ದ್ವಿಪಕ್ಷೀಯ ವಿಚಾರ ವಾಗಿದೆ. ಮೂರನೇ ಪಕ್ಷದ ಮಧ್ಯಪ್ರವೇಶದ ಅಗತ್ಯವಿಲ್ಲ. 370ನೇ ವಿಧಿಯನ್ನು ರದ್ದು ಮಾಡಿದ್ದು ನಮ್ಮ ಆಂತರಿಕ ವಿಚಾರವಾಗಿದೆ ಎಂಬುದು ಭಾರತದ ನಿಲುವು. ಆದರೆ, ಅಮೆರಿಕ, ಚೀನಾ ಸೇರಿದಂತೆ ಹೊರಗಿನ ದೇಶಗಳನ್ನು ಕಾಶ್ಮೀರದ ವಿಚಾರಕ್ಕೆ ಭಾಗಿಯಾಗಿಸಲು ಚೀನಾ ಮೊದಲಿಂದಲೂ ಪ್ರಯತ್ನಿಸುತ್ತಲೇ ಇದೆ. ಕಾಶ್ಮೀರದಲ್ಲಿ ಭಾರತ ಸರ್ಕಾರದಿಂದ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಧ್ವನಿ ಎತ್ತಲು ಪಾಕಿಸ್ತಾನ ಯತ್ನಿಸುತ್ತಿದ್ದರೂ ಅದು ನಿರೀಕ್ಷಿಸಿದಷ್ಟು ಬೆಂಬಲ ಸಿಕ್ಕಿಲ್ಲ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ