ಇನ್ಮುಂದೆ ರೈತರಿಗೂ ಸಿಗಲಿದೆ ಪಿಂಚಣಿ: ಪ್ರಧಾನಿ ಮೋದಿಯಿಂದ ಇಂದು ಕಿಸಾನ್‌ ಮನ್‌ ಧನ್‌ ಯೋಜನೆಗೆ ಚಾಲನೆ

ಹೊಸದಿಲ್ಲಿ: ಪ್ರಧಾನ ಮಂತ್ರಿ ಇಂದು ಕಿಸಾನ್‌ ಮನ್‌ ಧನ್‌ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ವರ್ಷದ ಅಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಜಾರ್ಖಂಡ್‌ನ ರಾಂಚಿಯಲ್ಲಿ ಗುರುವಾರ ಮೋದಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಅಲ್ಲದೆ, ನೂತನ ವಿಧಾನಸಭೆ ಕಟ್ಟಡ ಹಾಗೂ ರಾಂಚಿಯಲ್ಲಿ ನಿರ್ಮಾಣವಾಗಲಿರುವ ನೂತನ ಸೆಕ್ರೆಟರಿಯಟ್‌ ಕಟ್ಟಡದ ಶಂಕು ಸ್ಥಾಪನೆಯನ್ನೂ ಮೋದಿ ನೆರವೇರಿಸಲಿದ್ದಾರೆ.

ರೈತರಿಗೆ ಸಾಮಾಜಿಕ ಭದ್ರತೆ ನೀಡಲು ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಇತ್ತೀಚೆಗೆ ಜಾರ್ಖಂಡ್‌ ಸಿಎಂ ರಘುಬರ್ ದಾಸ್‌ ಹೇಳಿಕೆ ನೀಡಿದ್ದರು. ಅಲ್ಲದೆ, ಒಂದು ದಿನದ ರಾಂಚಿ ಭೇಟಿ ವೇಳೆ ಪ್ರಧಾನ ಮಂತ್ರಿ ಲಘು ವ್ಯಾಪಾರಿ ಮನ್‌ ಧನ್‌ ಯೋಜನೆ ಹಾಗೂ ಸ್ವರೋಜ್‌ಗಾರ್‌ ಪಿಂಚಣಿ ಯೋಜನೆಗಳಿಗೂ ಮೋದಿ ದೇಶಾದ್ಯಂತ ನಿರ್ಮಾಣವಾಗಲಿರುವ 462 ಏಕಲವ್ಯ ಮಾದರಿ ಶಾಲೆಗಳಿಗೂ ಪ್ರಧಾನಿ ಮೋದಿ ಆನ್‌ಲೈನ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜಾರ್ಖಂಡ್‌ನಲ್ಲಿರುವ 24 ಜಿಲ್ಲೆಗಳ ಪೈಕಿ 13 ಜಿಲ್ಲೆಗಳಲ್ಲೇ 69 ಶಾಲೆಗಳು ಸ್ಥಾಪನೆಯಾಗಲಿವೆ.
ಪ್ರಧಾನಿ ಮೋದಿ ಜಾರ್ಖಂಡ್‌ನ ನೂತನ ವಿಧಾನಸಭೆ ಕಟ್ಟಡಕ್ಕೆ ಹಾಗೂ ಸಾಹಿಬ್‌ಗಂಜ್‌ನಲ್ಲಿ ಬಹು ಮಾದರಿಯ ಟರ್ಮಿನಲ್‌ ಉದ್ಘಾಟಿಸಲಿದ್ದಾರೆ ಎಂದು ಜಾರ್ಖಂಡ್‌ ಸಿಎಂ ರಘುಬರ್‌ ದಾಸ್‌ ಇತ್ತೀಚೆಗೆ ಮಾಹಿತಿ ನೀಡಿದ್ದರು.
ಬಹು ಮಾದರಿಯ ಟರ್ಮಿನಲ್‌ನಿಂದ ಸ್ಥಳೀಯ ಜನರಿಗೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗ ದೊರೆಯಲಿದೆ ಎಂದೂ ಜಾರ್ಖಂಡ್‌ ಸಿಎಂ ಮಾಹಿತಿ ನೀಡಿದರು. ಸಾಹೇಬ್‌ಗಂಜ್‌ನಲ್ಲಿ ಗಂಗಾ ನದಿಯ ದಡದಲ್ಲಿ ನಿರ್ಮಿಸಲಾದ ಬಹು-ಮಾದರಿ ಹಡಗು ಟರ್ಮಿನಲ್ ಅನ್ನೂ ಪ್ರಧಾನಿ ಉದ್ಘಾಟಿಸಲಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲೇ ಪ್ರಧಾನಿ ಮೋದಿ ರಾಂಚಿಯಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಗೂ ಚಾಲನೆ ನೀಡಿದ್ದರು.

ಏನಿದು ಪ್ರಧಾನ ಮಂತ್ರಿ ಕಿಸಾನ್ಮನ್ಧನ್ಯೋಜನೆ?
ಪ್ರಧಾನ್ ಮಂತ್ರಿ ಕಿಸಾನ್ ಮನ್‌ ಧನ್‌ ಯೋಜನೆಯಡಿ 60 ವರ್ಷ ದಾಟಿದವರಿಗೆ ತಿಂಗಳಿಗೆ ಕನಿಷ್ಠ 3,000 ರೂ.ಗಳ ಪಿಂಚಣಿ ನೀಡುವ ಮೂಲಕ 5 ಕೋಟಿ ಸಣ್ಣ ಮತ್ತು ಅಲ್ಪ ರೈತರ ಜೀವನವನ್ನು ಭದ್ರಪಡಿಸುತ್ತದೆ. ಈ ಯೋಜನೆಗೆ ಮುಂದಿನ ಮೂರು ವರ್ಷಗಳಿಗೆ 10,774 ಕೋಟಿ ರೂ. ಗಳನ್ನು ಕೇಂದ್ರ ಸರಕಾರ ವಿನಿಯೋಗ ಮಾಡಿದೆ. ಪ್ರಸ್ತುತ 18 ರಿಂದ 40 ವರ್ಷದೊಳಗಿನ ಎಲ್ಲ ಸಣ್ಣ ಮತ್ತು ಅತಿಸಣ್ಣ ರೈತರು ಈ ಯೋಜನೆಗಳ ಲಾಭ ಪಡೆಯಲು ಅರ್ಹರಾಗಿದ್ದು, ಅವರಿಗೆ 60 ವರ್ಷ ದಾಟಿದ ಬಳಿಕ ತಿಂಗಳಿಗೆ ಕನಿಷ್ಠ 3,000 ರೂ.ಗಳ ಪಿಂಚಣಿ ಪಡೆದುಕೊಳ್ಳಲಿದ್ದಾರೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ