ಮೈಸೂರು, ಸೆ.6- ಕಾವೇರಿ ನದಿ ಉಳಿವಿಗಾಗಿ ಪಣ ತೊಟ್ಟಿರುವ ಜಗ್ಗಿ ವಾಸುದೇವ್ ಅವರು ಇಂದು ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಕಾವೇರಿ ಕೂಗು ಅಭಿಯಾನ ಹಮ್ಮಿಕೊಂಡರು.
ಈ ಅಭಿಯಾನದ ಅಂಗವಾಗಿ ಇಂದು ಆಯೋಜಿಸಲಾಗಿದ್ದ ಬೈಕ್ ರ್ಯಾಲಿಗೆ ನಗರದ ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ರಾಜವಂಶಸ್ಥ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸದ್ಗುರು ಜಗ್ಗಿ ವಾಸುದೇವ್ ಅವರು ಕಾವೇರಿ ನದಿ ಉಳಿವಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಈಶ ಫೌಂಡೇಷನ್ ವತಿಯಿಂದ ಕಾವೇರಿ ಉಳಿವಿಗಾಗಿ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಕಾವೇರಿ ಉಗಮ ಸ್ಥಾನ ತಲಕಾವೇರಿಯಿಂದ ಅಂತ್ಯದವರೆಗೆ ಜಾಗೃತಿ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ಸರ್ಕಾರ ಮರ ಬೆಳೆಸಲು ಸಬ್ಸಿಡಿ ಕೊಡಲು ಮುಂದೆ ಬಂದಿದೆ. ಇನ್ನೆರಡು ವಾರಗಳಲ್ಲಿ ಇದರ ಘೋಷಣೆಯಾಗಲಿದೆ. ಇದರಿಂದ ಮರ ಬೆಳೆಯಲು ಹೆಚ್ಚು ಅನುಕೂಲವಾಗಲಿದೆ. ಮರ ಬೆಳೆದವರಿಗೆ ಅದರ ಹಕ್ಕು ಸಿಕ್ಕಾಗ ಮಾತ್ರ ಹೆಚ್ಚು ಹೆಚ್ಚು ಮರ ಬೆಳೆಸಲು ಜನರು ನಿಲ್ಲುತ್ತಾರೆ ಎಂದರು.
ಬೈಕ್ ರ್ಯಾಲಿಯಲ್ಲಿ ನೂರಾರು ಮಂದಿ ಭಾಗಿಯಾಗಿದ್ದು, ರ್ಯಾಲಿಯು ಅರಮನೆ, ಗನ್ಹೌಸ್ ವೃತ್ತ, ರಾಮಸ್ವಾಮಿ ವೃತ್ತ, ರೈಲ್ವೆ ನಿಲ್ದಾಣ, ದೊಡ್ಡಗಡಿಯಾರ ವೃತ್ತ ಸೇರಿ 5ಕಿ.ಮೀ. ಜಾಥಾ ನಡೆಯಿತು.