ಹೊಸ ಅಪಾಚೆ ಎಎಚ್-64ಇ ಹೆಲಿಕಾಪ್ಟರ್‍ಗಳ ಸೇರ್ಪಡೆ ಹಿನ್ನಲೆ-ಹೆಚ್ಚಾದ ಐಎಎಫ್‍ನ ದಾಳಿಸಾಮಥ್ರ್ಯ

ಪಠಾಣ್‍ಕೋಟ್, ಸೆ.3- ಅತ್ಯಾಧುನಿಕ ತಂತ್ರಜ್ಞಾನದ ಹೊಸ ಅಪಾಚೆ ಎಎಚ್-64ಇ ಹೆಲಿಕಾಪ್ಟರ್‍ಗಳ ಸೇರ್ಪಡೆಯಿಂದ ಭಾರತೀಯ ವಾಯು ಪಡೆ(ಐಎಎಫ್) ಕಾರ್ಯನಿರ್ವಹಣೆ ದಾಳಿಸಾಮಥ್ರ್ಯ ಹೆಚ್ಚಾಗಲಿದೆ ಎಂದು ಐಎಎಫ್ ಮುಖ್ಯಸ್ಥ ಬೀರೇಂದ್ರ ಸಿಂಗ್ ಧನೋವಾ ಹೇಳಿದ್ದಾರೆ.

ಭಾರತೀಯ ವಾಯು ಪಡೆಗೆ ಅಮೆರಿಕ ನಿರ್ಮಿತ ಎಂಟು ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‍ಗಳ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಅವರು,ಹಳೆಯ ಎಂಐ-35 ಹೆಲಿಕಾಪ್ಟ್‍ರ್‍ಗಳ ಬದಲು ಹೊಸ ಅಪಾಚೆಗಳು ಕಾರ್ಯನಿರ್ವಹಿಸಲಿವೆ ಎಂದರು.

ಈವರೆಗೆ ಐಎಎಫ್‍ಗೆ ಒಟ್ಟು 22 ಅಪಾಚೆ ಹೆಲಿಕಾಪ್ಟರ್‍ಗಳು ಪೂರೈಕೆಯಾಗಿವೆ. ಕೊನೆಯ ಬ್ಯಾಚ್‍ನ ಹೆಲಿಕಾಪ್ಟರ್‍ಗಳು ಮುಂದಿನ ವರ್ಷ ಮಾರ್ಚ್ ವೇಳೆಗೆ ಪೂರೈಕೆಯಾಗಲಿದೆ ಎಂದು ಬಿ.ಎಸ್.ಧನೋವಾ ತಿಳಿಸಿದರು.

ಈ ಹೆಲಿಕಾಪ್ಟರ್‍ಗಳ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಪಶ್ಚಿಮ ವಲಯದಲ್ಲಿ ಕಾರ್ಯಾಚರಣೆಗೆ ನಿಯೋಜನೆಯಾಗಲಿವೆ. ಇದರಿಂದ ನಮ್ಮ ಸೇನೆಯ ಕಾರ್ಯನಿರ್ವಹಣೆ ಮತ್ತು ದಾಳಿ ಸಾಮಥ್ರ್ಯ ವೃದ್ಧಿಯಾಗಲಿವೆ ಎಂದು ಅವರು ಹೇಳಿದರು.

ಇದು ಸರ್ವಋತುಗಳಲ್ಲೂ ದಿನದ 24 ತಾಸು ಕಾರ್ಯನಿರ್ವಹಿಸುವ ಅಗಾಧ ಸಾಮಥ್ರ್ಯ ಹೊಂದಿವೆ. ಇದು ಅತ್ಯಂತ ಕಠಿಣ ಪ್ರದೇಶಗಳಲ್ಲೂ ಕಾರ್ಯನಿರ್ವಹಣೆಗೆ ಯೋಗ್ಯವಾಗಿವೆ. ವೈರಿಗಳ ನೆಲೆಗಳನ್ನು ಧ್ವಂಸಗೊಳಿಸುವ, ಶತ್ರುಗಳ ಚಲನವಲನಗಳ ಮೇಲೆ ಕಣ್ಗಾವಲಿಡುವ ಕಾರ್ಯಗಳಿಗೆ ಇದನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಬಹುದು ಎಂದು ಧನೋವಾ ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ