ಸ್ಕೂಬಾ ಡೈವಿಂಗ್ ಬೋಟ್‍ಗೆ ಬೆಂಕಿ ತಗುಲಿ ಎಂಟು ಮಂದಿ ಸಾವು

ಆಕ್ಸ್‍ನಾರ್ಡ್(ಅಮೆರಿಕ), ಸೆ.3-ಕ್ಯಾಲಿಪೋರ್ನಿಯಾ ಕರಾವಳಿಯಲ್ಲಿ ಜಲಸಾಹಸ ಘೋರ ದುರಂತವಾದ ಘಟನೆ ಸಂಭವಿಸಿದೆ. ಸ್ಕೂಬಾ ಡೈವಿಂಗ್ ಬೋಟ್‍ಗೆ ಬೆಂಕಿ ತಗುಲಿ ಎಂಟು ಮಂದಿ ಮೃತಪಟ್ಟು, ಇತರ 26 ಮಂದಿ ನಾಪತ್ತೆಯಾದ ಅಥವಾ ಜನಸಮಾಧಿಯಾಗಿದ್ದಾರೆಂದು ಶಂಕಿಸಲಾಗಿದೆ.

ದಕ್ಷಿಣ ಕ್ಯಾಲಿಪೋರ್ನಿಯಾದ ಸಂತಾ ಬಾರ್ಬಾರ ಕರಾವಳಿ ಪಟ್ಟಣದ ಸಂತಾ ಕ್ರೂಜ್ ದ್ವೀಪದಲ್ಲಿ ಈ ದುರ್ಘಟನೆ ಸಂಭವಿಸಿದೆ. 75 ಅಡಿಗಳ ಸ್ಕೂಬಾ ಡೈವಿಂಗ್ ಬೋಟ್‍ನಲ್ಲಿ ಸಾಹಸಿ ಪ್ರಯಾಣಿಕರು ಮೋಜಿನ ಜಲಕ್ರೀಡೆಗೆ ತೆರಳುತ್ತಿದ್ದಾಗ ದೋಣಿಗೆ ಬೆಂಕಿ ತಗುಲಿ ಧಗ ಧಗ ಹೊತ್ತಿ ಉರಿಯಿತು. ಈ ದುರಂತದಲ್ಲಿ ಎಂಟು ಮಂದಿ ಸುಟ್ಟು ಕರಕಲಾದರೆ. ಎರಡು ಡಜನ್‍ಗೂ ಹೆಚ್ಚು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಅಥವಾ ನಾಪತ್ತೆಯಾಗಿರಬಹುದೆಂದು ಶಂಖಿಸಲಾಗಿದೆ.

ಹೆಲಿಕಾಪ್ಟರ್‍ಗಳು ಮತ್ತು ದೋಣಿಗಳ ಮೂಲಕ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗೆ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ