ನಕಲಿ ಜನನ ಪ್ರಮಾಣಪತ್ರ-ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ ಹಿನ್ನಲೆ-ಅಮಿತ್ ಜೋಗಿ ಬಂಧನ

ಬಿಲಾಸ್ಪುರ,ಸೆ.3- ಚುನಾವಣಾ ನಾಮಪತ್ರದ ಅಫಿಡೆವಿಟ್‍ನಲ್ಲಿ ಸುಳ್ಳು ಮಾಹಿತಿಗಳನ್ನು ನೀಡಿ ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಛತ್ತೀಸ್‍ಘಡದ ಮಾಜಿ ಮುಖ್ಯಮಂತ್ರಿ ಅಜಿತ್‍ಜೋಗಿ ಅವರ ಪುತ್ರ ಹಾಗೂ ಜನತಾ ಕಾಂಗ್ರೆಸ್ ಛತ್ತೀಸ್‍ಘಡ(ಜೆ) ಮುಖ್ಯಸ್ಥ ಅಮಿತ್ ಜೋಗಿ ಅವರನ್ನು ಬಂಧಿಸಲಾಗಿದೆ.

ಪೊಲೀಸರು ಮೊದಲಿಗೆ ಅಮಿತ್ ಜೋಗಿ ಅವರನ್ನು ಮನೆಯನ್ನು ಸುತ್ತುವರೆದು ನಂತರ ಅವರನ್ನು ಬಂಧಿಸಿದ್ದಾರೆ.

ಅಮಿತ್ ತಮ್ಮ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಸೆಕ್ಷನ್ 420 (ವಂಚನೆ) ಅಡಿ ಪ್ರಕರಣ ಅವರ ವಿರುದ್ಧ ದೂರು ದಾಖಲಾಗಿತ್ತು.

2013ರಂದು ಮೀಸಲು ಕ್ಷೇತ್ರ ಮರ್ವಾಹಿಯಿಂದ ಅಮಿತ್ ಜೋಗಿ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ನಾಯಕಿ ಮತ್ತು ಅಭ್ಯರ್ಥಿಯಾಗಿದ್ದ ಸಮೀರಾ ಪೋಕ್ರ ಅವರು, ತಮ್ಮ ಜನ್ಮಸ್ಥಳ ಮತ್ತು ಜಾತಿ ಕುರಿತು ಸುಳ್ಳು ದಾಖಲೆಗಳನ್ನು ಸಲ್ಲಿಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂದು ದೂರು ನೀಡಿ ಆರೋಪಿಸಿದ್ದರು.

ಅವರು ಅಮೆರಿಕದಲ್ಲಿ ಜನಿಸಿದ್ದರೂ ಬಿಲಾಸ್ಪುರದ ಗ್ರಾಮವೊಂದರಲ್ಲಿ ಜನಿಸಿದ್ದಾಗಿ ನಕಲಿ ಜನನ ಪ್ರಮಾಣಪತ್ರ ಸಲ್ಲಿಸಿದ್ದಾರೆ ಅಲ್ಲದೆ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಜೋಗಿ ವಿರುದ್ದ ದೂರು ದಾಖಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ