ಬಿಜೆಪಿ ಸೇರ್ಪಡೆಯಾದ ಕುಸ್ತಿಪಟು ಮಹಾವೀರ್ ಸಿಂಗ್ ಮತ್ತು ಪುತ್ರಿ ಬಬಿತಾಪೋಗೆಟ್

ಚಂಡೀಘಡ್, ಆ.12- ಸೂಪರ್‍ಹಿಟ್ ದಂಗಲ್ ಸಿನಿಮಾಗೆ ಪ್ರೇರಣೆಯಾದ ಪಂಜಾಬ್‍ನ ಕುಸ್ತಿಪಟು ಮಹಾವೀರ್ ಸಿಂಗ್ ಮತ್ತು ಅವರ ಪದಕ ವಿಜೇತ ಪುತ್ರಿ ಬಬಿತಾಪೋಗಟ್ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಜನನಾಯಕ ಜನತಾ ಪಕ್ಷ (ಜೆಜೆಪಿ)ದ ಕ್ರೀಡಾ ಘಟಕದ ಮುಖ್ಯಸ್ಥರಾಗಿದ್ದ ಮಹಾವೀರ್ ಮತ್ತು ಅವರ ಪುತ್ರಿ ಬಬಿತಾ ಬಿಜೆಪಿ ನಾಯಕರ ಸಮ್ಮುಖದಲ್ಲಿ ಇಂದು ಕೇಸರಿ ಪಕ್ಷಕ್ಕೆ ಸೇರ್ಪಡೆಯಾದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತತ್ವಾದರ್ಶಗಳು ಹಾಗೂ ಅವರ ಜನಪರ ಕಾರ್ಯಕ್ರಮಗಳಿಗೆ ಮೆಚ್ಚಿ ತಮ್ಮ ಪುತ್ರಿಯೊಂದಿಗೆ ಬಿಜೆಪಿ ಸೇರಿರುವುದಾಗಿ ಮಹಾವೀರ್ ಸಿಂಗ್ ಪೋಗಟ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ