ಗೋಪೇಶ್ವರ, ಆ.12-ಉತ್ತರಾಖಂಡ್ನ ಚಿಮೋಲಿ ಜಿಲ್ಲೆಯ ಮಂದಾಕಿನಿ ನದಿಯ ಉಪನದಿ ಚುಫ್ಲಗಡ್ ಹರಿಯುವ ಪ್ರದೇಶದಲ್ಲಿ ಭಾರೀ ಮಳೆಯಿಂದ ಇಂದು ಮುಂಜಾನೆ ಭೂಕುಸಿತಗಳಾಗಿ ಸಾವು-ನೋವು ಸಂಭವಿಸಿದೆ.
ಈ ದುರ್ಘಟನೆಯಲ್ಲಿ ಮಹಿಳೆಯೊಬ್ಬರು ಜೀವಂತ ಸಮಾಧಿಯಾಗಿದ್ದು, ಐವರು ಮಣ್ಣಿನ ಭಗ್ನಾವಶೇಷಗಳಡಿ ಸಿಲುಕಿದ್ದಾರೆ. ಭೂ ಕುಸಿತದಿಂದ ಕೆಲವರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ.
ಚಿಮೋಲಿ ಜಿಲ್ಲೆಯ ಘಟ್ಟ ಪ್ರದೇಶಗಳಲ್ಲಿನ ಬಂಜಾಬ್ಗಡ್ ಮತ್ತು ಕಂಖಿ ಗ್ರಾಮಗಳಲ್ಲಿ ಪ್ರತ್ಯೇಕ ಭೂಕುಸಿತಗಳು ಸಂಭವಿಸಿ, ಗುಡ್ಡವೊಂದು ಸಡಿಲವಾಗಿ ಮನೆಗಳ ಮೇಲೆ ಉರುಳಿ ಸಾವು-ನೋವು ಸಂಭವಿಸಿವೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಎನ್.ಕೆ.ಜೋಷಿ ತಿಳಿಸಿದ್ದಾರೆ.