ವಿದೇಶಾಂಗ ಸಚಿವ ರಾಗಿದ್ದ ಸುಷ್ಮಾ ಸ್ವರಾಜ್ ನೆನಪು

ಇಟಲಿಯ ಸಮುದ್ರದಲ್ಲಿನ ನೌಕೆಯೊಂದರಲ್ಲಿ ಮೀನು ಹಿಡಿಯುತ್ತಾ ಕುಳಿತಿದ್ದ ಅನುಪಮ್ ಶರ್ಮಾನಿಗೊಂದು ಕಾಲ್ ಬಂದಿತ್ತು, ಸಾಮಾನ್ಯವಾಗಿ ಅಂತ ಕರೆಗಳನ್ನು ಇಗ್ನೋರ್ ಮಾಡಿಯೇ ಅಭ್ಯಾಸವಾದರೂ, ತೀರಾ ಎಮರ್ಜೆನ್ಸಿಯಲ್ಲಿ ಮಾತ್ರಾ ಬಳಸೋ ಹೈ ಫ್ರೀಕ್ವೆನ್ಸಿಯ ಸ್ಯಾಟಲೈಟ್ ಫೋನ್ ಕಾಲ್ ಅದಾಗಿದ್ದ ಕಾರಣ ರಿಸೀವ್ ಮಾಡಿದವನಿಗೆ ಆ ಕಡೆಯಿಂದ ಒಂದೇ ಸಮನೆ ಅಳೋ ಸದ್ದು. ಅದು ಆತನ ಕಾಲೇಜ್ ಮೇಟ್ ಹಾಗೂ ಈತನಂತೆಯೇ ಇಟಲಿಯ ಬೋಟೊಂದರಲ್ಲಿ ಕೆಲಸಕ್ಕಿದ್ದಾತನ ಕಾಲ್ ಆಗಿತ್ತದು.

ಊರಿಗೆ ಹೊರಡೋ ಸಿದ್ಧತೆಯಲ್ಲಿದ್ದಾಗ ಶಿಪ್ ಏಜೆಂಟ್ ಜೊತೆಗೆ ಅದೇನೋ ಕಿತ್ತಾಟವಾಗಿದೆ, ಅದೇ ಕೋಪದಲ್ಲಿ ಆತ ಈತನ ಪಾಸ್ ಪೋರ್ಟೇ ಕಳ್ದೋಗಿದೆ ಅಂದುಬಿಟ್ಟಿದ್ದಾನೆ… ಈಗ ಫಾರ್ಮಾಲಿಟೀಸ್ ಎಲ್ಲಾ ಮುಗಿದು ಡುಪ್ಲಿಕೇಟ್ ಪಾಸ್ ಪೋರ್ಟ್ ಸಿಗೋಕೆ ತಿಂಗಳುಗಳೇ ಬೇಕು, ಅಲ್ಲಿಯವರೆಗೂ ಪೋರ್ಟಿನ ಕೋಣೆಯಲ್ಲಿ ಬಂಧಿಯಾಗಿರಬೇಕು, ಇಂತಹದ್ದೊಂದು ಪರಿಸ್ಥಿತಿಯಲ್ಲಿ ದಾರಿ ಕಾಣದೆ ಈತನಿಗೆ ಕಾಲ್ ಮಾಡಿದ್ದ. ತಾನೇನೂ ಖುದ್ದಾಗಿ ಮಾಡೋಕ್ ಸಾಧ್ಯವಾಗದಿದ್ರೂ ತನ್ನೀ ಸಲಹೆಯಿಂದ ಖಂಡಿತಾ ಏನಾದ್ರೂ ಆಗಿಯೇ ತೀರುತ್ತೆ ಅನ್ನೋದ್ ಗೊತ್ತಿದ್ದ ಆತ ಹೇಳಿದ್ದ, ವಿದೇಶಾಂಗಮಂತ್ರಿಯ ಟ್ವಿಟರ್ ಅಕೌಂಟಿಗೊಂದು ಟ್ವೀಟ್ ಮಾಡು ನಿಂಗ್ ಖಂಡಿತವಾಗಿ ಹೆಲ್ಪಾಗುತ್ತೆ. ಒಂದೇ ವಾರದಲ್ಲಿ ಆತನ ಮಿತ್ರ ಪಾಸ್‌ಪೋರ್ಟ್ ಸಮಸ್ಯೆ ಬಗೆಹರಿದು ತನ್ನ ಊರು ಸೇರಿಕೊಂಡಿದ್ದ…

ಯೆಮೆನ್ ‌ನಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ನಿಂತಿತ್ತು.

ಭಾರತ ಸೇರಿದಂತೆ ನಲವತ್ತಕ್ಕೂ ಹೆಚ್ಚು ದೇಶಗಳ ಜನ ಹೊತ್ತಿ ಉರಿಯುತ್ತಿದ್ದ ದೇಶದ ಬೀದಿಯಲ್ಲಿ ಅನಾಥರಾಗಿ ನಿಂತು ಬಿಟ್ಟಿದ್ರು, ಅಮೆರಿಕಾದಂತ ಅಮೆರಿಕಾವೇ ಏನೂ ಕಾಡಲಾಗದೆ ಕೈಚೆಲ್ಲಿ ಕುಳಿತುಬಿಟ್ಟಿತ್ತು ಅಂದ್ರೆ ಊಹಿಸಿ ಪರಿಸ್ಥಿತಿ ಅದಿನ್ನೆಂತ ಗಂಭೀರವಾಗಿದ್ದಿರಬಹುದೋ. ಆ ಸಮಯದಲ್ಲಿ RTE ನ್ಯೂಸ್ ಚಾನಲ್ಲಿನ MD ಜಾನ್ ವಿಲಿಯಮ್ಸ್ ಒಂದು ಟ್ವೀಟ್ ಮಾಡ್ತಾನೆ… “ಪ್ರೀತಿಯ ಅಮೆರಿಕನ್ನರೇ ಅಮೆರಿಕಾ ಭಾರತಕ್ಕಿಂತ ಹತ್ತು ಪಟ್ಟು ಹೆಚ್ಚು ಸೈನ್ಯವನ್ನೇ ಬಳಸಿದ್ರೂ ಕೂಡಾ ಏನೂ ಆಗೋದಿಲ್ಲ. ಈ ಸಮಯದಲ್ಲಿ ಯೆಮನ್‌ನಲ್ಲಿ ಸಿಲುಕಿಕೊಂಡಿರೋ ನಿಮ್ಮ ಆತ್ಮೀಯರು ಸುರಕ್ಷಿತವಾಗಿ ಬರಬೇಕು ಅನ್ನೋ ಆಸೆ ನಿಮಗಿದ್ರೆ ಅವ್ರಿಗೆಲ್ಲಾ ಭಾರತಕ್ಕೆ ಕಾಲ್ ಮಾಡಿ ರಕ್ಷಿಸೋಕ್ ಹೇಳಿ”.

ಆತನ ಮಾತಲ್ಲೇನೂ ಉತ್ಪ್ರೇಕ್ಷೆ ಇರಲಿಲ್ಲ, ಯಾಕೆಂದರೆ ಆತನ ಊಹೆ ಸುಳ್ಳಾಗದಂತೆ ಇಡೀ ವಿಶ್ವವೇ ನಿಬ್ಬೆರಗಾಗುವ ರೀತಿಯಲ್ಲಿ “ಆಪರೇಶನ್ ರಾಹತ್” ಎಂಬ ಕಾರ್ಯಾಚರಣೆಯ ಮೂಲಕ ಭಾರತ ಸೇರಿದಂತೆ ನಲವತ್ತೊಂದು ದೇಶಗಳ 6700+ ಜನರನ್ನು ಅಲ್ಲಿಂದ ಹೊತ್ತು ತಂದು ಸುರಕ್ಷಿತವಾಗಿ ಮನೆ ಸೇರಿಸಿತ್ತು ಭಾರತ.

ಇವೆಲ್ಲ ಟಿಪ್ ಆಫ್ ದ ಐಸ್ ಬರ್ಗ್ ತರಹ ನೆಪಮಾತ್ರದ ಉದಾಹರಣೆಗಳಷ್ಟೇ.
ಇಂತಹ ನೂರಾರು ಪ್ರಕರಣಗಳಲ್ಲಿ ಕೇವಲ ಟ್ವೀಟ್ ಒಂದನ್ನೇ ಆಧಾರವಾಗಿಟ್ಟು ಅದೆಷ್ಟೋ ಸಾವಿರ ಕುಟುಂಬಗಳ ನೆರವಿಗೆ ಧಾವಿಸಿದ್ದ, ಇಲಾಖೆಯೊಂದನ್ನು ಈ ರೀತಿಯೂ ನಿಭಾಯಿಸಬಹುದು ಎಂಬುದಷ್ಟೇ ಅಲ್ಲದೆ ಈ ರೀತಿಯೂ ನಿಭಾಯಿಸಬಹುದಾ! ಎಂದು ಆಶ್ಚರ್ಯ ಪಡುವ ರೀತಿಯಲ್ಲಿ ಈ ಎಲ್ಲಾ ಪ್ರಕರಣಗಳಲ್ಲೂ ಖುದ್ದಾಗಿ ಅಖಾಡಕ್ಕಿಳಿದು ಅದ್ಭುತವಾಗಿ ಕಾರ್ಯ ನಿರ್ವಹಿಸಿದ ಖ್ಯಾತಿ ಸಲ್ಲಬೇಕಾದ್ದು ಸುಷ್ಮಾ ಸ್ವರಾಜ್ ಎಂಬ ಮಹಾನ್ ವ್ಯಕ್ತಿತ್ವಕ್ಕೆ.

ನಿಮ್ಮನ್ನು ಕಳೆದುಕೊಂಡ ದುಃಖ,
ನಿಮ್ಮ ನೆನಪು ನಿರಂತರವಾಗಿರುತ್ತದೆ ನಮ್ಮ ಮನದಲ್ಲಿ.
ಹೋಗಿ ಬನ್ನಿ. ❤

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ