ಇವರೇನಾ ನಮ್ಮ ಜನಪ್ರತಿನಿಧಿಗಳು… ಮಾದರಿಯಾಗಬೇಕಾದವರೇ ಸಲ್ಲಿಸಲಿಲ್ಲವಾ ಆಸ್ತಿ ವಿವರ

ಇವರೇನಾ ನಮ್ಮ ಜನಪ್ರತಿನಿಧಿಗಳು…

ಮಾದರಿಯಾಗಬೇಕಾದವರೇ ಸಲ್ಲಿಸಲಿಲ್ಲವಾ ಆಸ್ತಿ ವಿವರ.

ಸುಮಾರು 75 ಶಾಸಕರು‌ ಇದುವರೆವಿಗೂ ತಮ್ಮ ಆಸ್ತಿಯನ್ನು ಘೋಷಿಸಿಯೇ ಇಲ್ಲ.

ಪ್ರತೀ ವರ್ಷ ಲೋಕಾಯುಕ್ತರಿಗೆ ಚುನಾಯಿತ ಜನಪ್ರತಿನಿಧಿಗಳು ತಮ್ಮ ಆಸ್ತಿ ವಿವರವನ್ನು ನೀಡಲೇಬೇಕು.

2018 ರಲ್ಲಿ ಆಯ್ಕೆ ಗೊಂಡ ಸುಮಾರು 75 ಶಾಸಕರು.

ಅನರ್ಹಗೊಂಡ ಶಾಸಕರೂ ಸಹ ಸಲ್ಲಿಸಿಲ್ಲ ಆಸ್ತಿ ವಿವರ.

ಅನರ್ಹಗೊಂಡವರಲ್ಲಿ ಡಾಕ್ಟರ್ ಕೆ ಸುಧಾಕರ್. ಮುನಿರತ್ನ. ಗೋಪಾಲಯ್ಯ. ಅಡಗೂರು ಎಚ್ ವಿಶ್ವನಾಥ್. ಆರ್ ಶಂಕರ್.ಪ್ರತಾಪಗೌಡ ಪಾಟೀಲ್ ಸಲ್ಲಿಸಿಲ್ಲ ಆಸ್ತಿ ವಿವರ.

ಶಾಸಕರಾದ ಶ್ರೀಮಂತ ಬಾಳಾಸಾಹೇಬ ಪಾಟೀಲ .ಮಹೇಶ್ ಈರಣ್ಣಗೌಡ ಕಮ್ಮತ್ತಹಳ್ಳಿ . ಮತ್ತು ಜೆಡಿಎಸ್ ನ ರಾಜ್ಯಾಧ್ಯಕ್ಷ ರಾದ H K ಕುಮಾರಸ್ವಾಮಿ. ಎಚ್ ಡಿ ರೇವಣ್ಣ.ಸಾರಾ ಮಹೇಶ್ ಕೂಡಾ ಸಲ್ಲಿಸಿಲ್ಲ ಆಸ್ತಿ ವಿವರ.

ಕಾಂಗ್ರೆಸ್ಸಿನ ಮುಖಂಡರಾದ ಈಶ್ವರ ಖಂಡ್ರೆ .ಬಿಜೆಪಿಯ ಶ್ರೀರಾಮುಲು, ರೇಣುಕಾಚಾರ್ಯ. ರಾಮದಾಸ್, ಶಿವನಗೌಡ ನಾಯಕ. ಬಿಎಸ್ಪಿಯ ಎನ್ ಮಹೇಶ್ ಮತ್ತು ಪಕ್ಷೇತರ ಸದಸ್ಯರಾದ ನಾಗೇಶ್ ಸೇರಿದಂತೆ ಸುಮಾರು ಎಪ್ಪತ್ತೈದಕ್ಕೂ ಹೆಚ್ಚು ಜನಪ್ರತಿನಿಧಿಗಳುಜೂನ್ ತಿಂಗಳ ಅಂತ್ಯದ ವರೆಗೂ ಲೋಕಾಯುಕ್ತಕ್ಕೆ ಯಾವುದೇ ರೀತಿಯ ತಮ್ಮ ಆಸ್ತಿ ಘೋಷಣೆಯನ್ನು ಮಾಡಿಲ್ಲ.

ಲೋಕಾಯುಕ್ತ ಕಾಯಿದೆಯ ಪ್ರಕಾರ ಈ ಜನಪ್ರತಿನಿಧಿಗಳು ಜೂನ್ ಮೂವತ್ತು ರ ಒಳಗೆ ಆಸ್ತಿ ಘೋಷಣೆ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

ಲೋಕಾಯುಕ್ತ ಕಾಯ್ದೆಯನ್ನೇ ಜನಪ್ರತಿನಿಧಿಗಳೇ ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ.

ವಿಧಾನಪರಿಷತ್ ಸದಸ್ಯರಾದ ತೇಜಸ್ವಿನಿ ಗೌಡ. ಆಯನೂರು ಮಂಜುನಾಥ್. ಸಿಎಂ ಇಬ್ರಾಹಿಮ್. ಐವಾನ್ ಡಿಸೋಜಾ. ಕೆಪಿ ನಂಜುಂಡಿ ಸೇರಿದಂತೆ 39 MLC ಗಳು ಜೂನ್ ತಿಂಗಳ ಅಂತ್ಯದವರೆಗೂ ತಮ್ಮ ಆಸ್ತಿ ಘೋಷಣೆಯನ್ನು ಮಾಡಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ