ಬೆಂಗಳೂರು, ಆ.4- ಯಮಹಾ ಇಂಡಿಯಾ ಮೋಟಾರ್ಸ್ ಕಂಪೆನಿಯು ದೇಶಾದ್ಯಂತ ದಿ ಕಾಲ್ ಆಫ್ ದಿ ಬ್ಲೂ -2.0 ವಿಶೇಷ ಗ್ರಾಹಕ ಸಂಪರ್ಕ ಮಾರಾಟ ಯೋಜನೆಯನ್ನು ಆರಂಭಿಸಿದೆ.
ತನ್ನ ಹೊಸ ವಿನ್ಯಾಸದಲ್ಲಿರುವ ಸ್ಪೋರ್ಟಿ ಮತ್ತು ಸ್ಟೈಲಿಶ್ ಅನುಭವದೊಂದಿಗೆ ಜಿ.ಪಿ. ಹೆಸರಿನ ದ್ವಿಚಕ್ರ ವಾಹನಗಳನ್ನು ಪರಿಚಯಿಸಿದೆ.ವೈಝಯ್ಎಫ್ಆರ್ (155 ಸಿಸಿ) ಮತ್ತು ಎಫ್ಝಡ್(249ಸಿಸಿ) ಹಾಗೂ ರೆಝಡ್ಆರ್(113 ಸಿಸಿ) ಮಾನ್ಸ್ಟರ್ ಎನರ್ಜಿ ವಾಹನಗಳು ಪರಿಚಯಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಯಮಹಾ ಗ್ರೂಪ್ ಇಂಡಿಯಾ ಅಧ್ಯಕ್ಷ ಮೊಟೋ ಪುಮಿ ಈ ಹೊಸ ಬೈಕ್ಗಳು ಭಾರತೀಯ ರಸ್ತೆಯನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆ ಮಾಡಲಾಗಿದೆ.
2019ರಲ್ಲಿ ಕಂಪೆನಿ ಬಿಡುಗಡೆ ಮಾಡುತ್ತಿರುವ ಇದು ಯುವ ಸಮುದಾಯಗಳಿಗೆ ಅಚ್ಚುಮೆಚ್ಚಾಗಲಿದೆ ಎಂದು ಅವರು ಕಂಪೆನಿಯ ಆಧುನಿಕ ತಂತ್ರಜ್ಞಾನ ಹಾಗೂ ಚಾಲನಾ ಸ್ನೇಹಿ ಸಾಧನಗಳು ಮೆಚ್ಚುಗೆಯಾಗಲಿದೆ ಎಂದು ಹೇಳಿದರು.