ದೇಶದ ವಿವಿಧೆಡೆ ಕುಂಭದ್ರೋಣ ಮಳೆ-ಜನಜೀವನ ಅಸ್ತವ್ಯಸ್ತ

ಮುಂಬೈ/ವಡೋದರಾ/ಜೈಪುರ, ಆ. 3- ದೇಶದ ವಿವಿಧೆಡೆ ಕುಂಭದ್ರೋಣ ಮಳೆಯಿಂದಾಗಿ ಸಾವು-ನೋವು ಸಂಭವಿಸಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ವರುಣನ ಆರ್ಭಟದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಮಹಾರಾಷ್ಟ್ರ, ಗುಜರಾತ, ರಾಜಸ್ತಾನ ಮತ್ತು ಈಶ್ಯಾನ ಪ್ರಾಂತ್ಯದ ರಾಜ್ಯಗಳಲ್ಲಿ ಮಳೆ ಅವಾಂತರದಿಂದ ಸಾವು-ನೋವು ಸಂಭವಿಸಿದೆ.
ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಿಂದ ತತ್ತರಿಸಿರುವ ದೇಶದ ವಾಣಿಜ್ಯ ರಾಜಧಾನಿ ಮುಂಬೈ, ಥಾಣೆ, ಪುಣೆ ಸೇರಿದಂತೆ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳು ಜಲಪ್ರಳಯದಿಂದ ಸಂಕಷ್ಟಕ್ಕಿಡಾಗಿವೆ. ಈ ಜಿಲ್ಲೆಗಳು ರಸ್ತೆಗಳು ಜಲಾವೃತ್ತವಾಗಿದ್ದು, ವಾಹನ ಮತ್ತು ಜನ ಸಂಚಾರಕ್ಕೆ ಅಡ್ಡಿಯಾಗಿದೆ. ರೈಲು ಮತ್ತು ವಿಮಾನ ಸಂಚಾರದಲ್ಲೂ ಏರುಪೇರಾಗಿದೆ.

ಮುಂಬೈ ಸೇರಿದಂತೆ ವಿವಿಧೆಡೆ ಇಂದು ಮತ್ತು ನಾಳೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದ್ದ ಮುನ್ಸೂಚನೆಯಂತೆ ಬೆಳಿಗ್ಗೆಯಿಂದಲೇ ವರ್ಷಧಾರೆಯಾಗುತ್ತಿದ್ದು ಜನತೆ ಹೈರಾಣಾಗಿದ್ದಾರೆ.

ಗುಜರಾತನ ವಡೋದರಾದಲ್ಲಿ ಮಳೆರಾಯನ ಕಾಟ ಮುಂದುವರೆದಿದ್ದು, ಅಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೇರಿದೆ. ದಾಖಲೆ ಮಳೆಯಿಂದಾಗಿ ವಡೋದರಾದಲ್ಲಿ ಜನಜೀವನ ಬಹುತೇಖ ಸ್ಥಗಿತಗೊಂಡಿದ್ದು, ಸಂಚಾರ ವ್ಯವಸ್ಥೇ ಏರುಪೇರಾಗಿದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.

ಮರುಭೂಮಿ ರಾಜ್ಯ ರಾಜಸ್ತಾನದ ರಾಜಧಾನಿ ಜೈಪುರ, ಜೈಸಲ್ಮೇರ್, ಉದಯಪುರ, ಬ್ರಹಮರ್ ಜಿಲ್ಲೆಗಳಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದು, ಸಾಮಾನ್ಯ ಜನಜೀವನಕ್ಕೆ ಧಕ್ಕೆಯಾಗಿದೆ.

ಈಶಾನ್ಯ ರಾಜ್ಯ ಆಸ್ಸಾಂನಲ್ಲಿ ಕೆಲದಿನಗಳ ಕಾಲ ಬಿಡುವ ನೀಡಿದ್ದ ಮಳೆ ಮತ್ತೆ ಆರ್ಭಟಿಸುತ್ತಿದೆ. ಅರುಣಚಲಪ್ರದೇಶ ಮತ್ತು ತ್ರಿಪುರದಲ್ಲೂ ಭಾರೀ ಮಳೆ ಸುರಿದ ವರದಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ