ಅಮೆರಿಕಾಗೆ ಬಂದಿಳಿದ ಟೀಮ್ಇಂಡಿಯಾ

ಭಾರತ ಕ್ರಿಕೆಟ್ ತಂಡ ಒಂದು ತಿಂಗಳ ಅಮೆರಿಕ ಹಾಗೂ ವೆಸ್ಟ್ಇಂಡೀಸ್ ಪ್ರವಾಸಕ್ಕೆ ಸೋಮವಾರ ತಡರಾತ್ರಿ ಪ್ರಯಾಣ ಬೆಳೆಸಿತು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರರೊಂದಿಗೆ ವಿಮಾನ ನಿಲ್ದಾಣದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

 

 

 

 

 

 

 

 

 

 

 

ಭಾರತ ತಂಡ ಮೊದಲು ಅಮೆರಿಕದ ಫ್ಲೋರಿಡಾದಲ್ಲಿ 2 ಟಿ20 ಪಂದ್ಯಗಳನ್ನು ಆಡಲಿದೆ. ಆ.3ರಿಂದ ಟಿ20 ಸರಣಿ ಆರಂಭಗೊಳ್ಳಲಿದ್ದು, ಆ.8ಕ್ಕೆ ಏಕದಿನ ಸರಣಿ ಶುರುವಾಗಲಿದೆ. ಆ.22ರಿಂದ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ವ್ಯಾಪ್ತಿಗೆ ಸೇರಿರುವ 2 ಪಂದ್ಯಗಳ ಸರಣಿಯಲ್ಲಿ ಭಾರತ-ವಿಂಡೀಸ್ ಮುಖಾಮುಖಿಯಾಗಲಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ