ಬೆಂಗಳೂರು,ಜು.31- ಹೆಸರಾಂತ ಉದ್ಯಮಿ ಸಿದ್ದಾರ್ಥ್ ಅವರ ದಾರುಣ ಸಾವಿನ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಒತ್ತಾಯಿಸಿದ್ದಾರೆ.
ಸಿದ್ದಾರ್ಥ್ ನಿಧನದ ಸುದ್ದಿಯಿಂದ ತೀವ್ರ ಆಘಾತವಾಗಿದ್ದು, ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಗೌಡರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸಿದ್ದಾರ್ಥ್ ಅವರು ಸಾವಿರಾರು ಜನಕ್ಕೆ ಸ್ವಾಭಿಮಾನದಿಂದ ಬದುಕಲು ದಾರಿ ಮಾಡಿಕೊಟ್ಟಿದ್ದ ನಂದದೀಪ. ಆ ನಂದದೀಪ ಹಾರಿಹೋದ ಸುದ್ದಿ ಕೇಳಿ ನಮ್ಮಗೆಲ್ಲ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಡೀ ದೇಶಕ್ಕೆ ಕಗ್ಗತ್ತಲು ಆವರಿಸಿದೆ.
ಸುಮಾರು 35 ವರ್ಷಗಳಿಂದ ಸಿದ್ದಾರ್ಥ್ ಅವರ ಪರಿಚಯವಿದ್ದು, ಸಜ್ಜನ ವ್ಯಕ್ತಿ ಇಂದಿಲ್ಲ ಎಂದರೆ ನಂಬಲು ಅಸಾಧ್ಯವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬ ಹಾಗೂ ನಾಡಿನ ಅಸಂಖ್ಯಾತ ಕಾರ್ಮಿಕ ಬಂಧುಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.