
ಬೆಂಗಳೂರು,ಜು.30- ಸಿದ್ದಾರ್ಥ್ ಅವರು ದುರ್ಬಲ ಮನಸ್ಸಿನ ವ್ಯಕ್ತಿ ಅಲ್ಲ. ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಪತ್ರದ ಬಗ್ಗೆ ಸಂಶಯವಿದ್ದು, ತನಿಖೆಯಾಗಬೇಕೆಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಎಸ್.ಎಮ್.ಕೃಷ್ಣ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದಾರ್ಥ್ ಅವರು ಬರೆದಿದ್ದಾರೆನ್ನಲಾದ ಪತ್ರದಲ್ಲಿ ಜುಲೈ 27ರ ದಿನಾಂಕ ನಮೂದಾಗಿದೆ. ಆದರೆ ಅವರು ಜುಲೈ 28ರಂದು ನನಗೆ ಪೋನ್ ಮಾಡಿ ನಿಮ್ಮನ್ನು ಭೇಟಿಯಾಗಬೇಕೆಂದು ಕೇಳಿದ್ದರು. ಅವರು ಹೆದರುವ ವ್ಯಕ್ತಿಯ ಅಲ್ಲ. ಈ ಪತ್ರದ ಬಗ್ಗೆ ತನಿಖೆಯಾಗಬೇಕೆಂದು ಹೇಳಿದರು.
ಸಿದ್ದಾರ್ಥ್ ಅವರ ಸಾಲಕ್ಕಿಂತ ಅವರ ಆಸ್ತಿಯೇ ಹೆಚ್ಚಾಗಿದೆ. ಅವರನ್ನು ಯಾರಾದರೂ ಕರೆದುಕೊಂಡು ಹೋಗಿರಬಹುದಲ್ಲವೇ ಎಂದು ಡಿಕೆಶಿ ಅನುಮಾನ ವ್ಯಕ್ತಪಡಿಸಿದ್ದಾರೆ.