ಬಿಜೆಪಿ ಸುಪರ್ದಿಯಲ್ಲಿ ಪಕ್ಷೇತರ ಶಾಸಕ; ಆರ್. ಅಶೋಕ್ ರಕ್ಷಣೆಯಲ್ಲಿ ಸದನಕ್ಕೆ ಆಗಮಿಸಿದ ಹೆಚ್. ನಾಗೇಶ್!

ಬೆಂಗಳೂರು; ಇಂದು ವಿಧಾನಮಂಡಲ ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸುವ ಹಿನ್ನೆಲೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿ ಹೆಚ್. ನಾಗೇಶ್ ಅವರನ್ನು ಬಿಜೆಪಿ ನಾಯಕ ಆರ್. ಅಶೋಕ್ ಸಂಪೂರ್ಣ ರಕ್ಷಣೆ ನೀಡಿ ವಿಧಾನಸೌಧಕ್ಕೆ ಕರೆತಂದಿದ್ದಾರೆ.

ಇಂದು ಬಿಜೆಪಿ ಬಹುಮತ ನಿರ್ಣಯ ಮಂಡನೆ ಮಾಡಲಿದ್ದು, ಇದಕ್ಕೆ ಕೋಲಾರದ ಮುಳಬಾಗಿಲು ಕ್ಷೇತ್ರದ ಸ್ವತಂತ್ರ್ಯ ಅಭ್ಯರ್ಥ ಹೆಚ್. ನಾಗೇಶ್ ಆಗಮಿಸಬೇಕಿರುವುದು ಖಡ್ಡಾಯ. ಹೀಗಾಗಿ ಬಿಜೆಪಿ ನಾಯಕ ಆರ್. ಅಶೋಕ್ ಹೆಚ್. ನಾಗೇಶ್​ಗೆ ಸಂಪೂರ್ಣ ರಕ್ಷಣೆ ನೀಡಿ ವಿಧಾನಸೌಧಕ್ಕೆ ಕರೆ ತಂದಿದ್ದಾರೆ.

ಮೈತ್ರಿ ಸರ್ಕಾರದ 18 ರೆಬೆಲ್ ಶಾಸಕರು ಪೈಕಿ 17 ಜನರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದಾರೆ. ಆದರೆ, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಮುಳಬಾಗಿಲು ಶಾಸಕ ಹೆಚ್. ನಾಗೇಶ್ ಸ್ವತಂತ್ರ್ಯ ಅಭ್ಯರ್ಥಿಯಾದ ಕಾರಣ ಅವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ