ಬೆಂಗಳೂರು,ಜು.27- ರಾಜ್ಯದ ಧನವಿನಿಯೋಗ ವಿಧೇಯಕಕ್ಕೆ ಬೆಂಬಲ ನೀಡಲು ಜೆಡಿಎಸ್ ತೀರ್ಮಾನಿಸಿದೆ.
ಸೋಮವಾರ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರ ಮಂಡಿಸುವ ಧನವಿನಿಯೋಗ ವಿಧೇಯಕಕ್ಕೆ ಸಹಮತ ವ್ಯಕ್ತಪಡಿಸಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಳಿಸಿದರು.
ಹಣಕಾಸು ವಿಧೇಯಕಕ್ಕೆ ನಮ್ಮ ಪಕ್ಷ ತಕರಾರು ಮಾಡುವುದಿಲ್ಲ. ಜುಲೈ 31ರವರೆಗೆ ಲೇಖಾನುದಾನವನ್ನು ಪಡೆಯಲಾಗಿದೆ. ಆಗಸ್ಟ್ನಿಂದ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳಿಗೆ ವೇತನ, ಸರ್ಕಾರದ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆಯಾಗಬೇಕಿದ್ದರೆ ಧನವಿನಿಯೋಗ ವಿಧೇಯಕಕ್ಕೆ ಒಪ್ಪಿಗೆ ದೊರೆಯಬೇಕು.
ಇಲ್ಲದಿದ್ದರೆ ಸರ್ಕಾರ ಕಷ್ಟವಾಗುತ್ತದೆ. ಜನರಿಗೂ ಕೂಡ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಬೆಂಬಲ ನೀಡಲು ಜೆಡಿಎಸ್ ನಿರ್ಧರಿಸಿದೆ ಎಂದು ಅವರು ಹೇಳಿದರು.