ಜಮ್ಮು,ಜು.26– ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಮೂಲಕ ಅಮರನಾಥ ಯಾತ್ರಿಗಳ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ 300 ಕಿ.ಮೀವರೆಗೆ ಹವಾಮಾನ ವೈಪರಿತದಿಂದಾಗಿ ರಸ್ತೆಯಲ್ಲಿ ಯಾತ್ರಾತ್ರಿಗಳ ಯಾವುದೇ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ವಲಯದಲ್ಲಿ ಜು.29ರವರೆಗೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಮುನ್ಸೂಚನೆ ನೀಡಿದೆ. ನಿನ್ನೆ 7,021 ಯಾತ್ರಿಗಳು ಅಮರನಾಥ ಗೃಹೆಯನ್ನು ತಲುಪಿ ನಮನ ಸಲ್ಲಿಸಿ ಬಂದಿದ್ದಾರೆ. ಈ ವರ್ಷದಲ್ಲಿ ಜು.1ರಿಂದ ಆರಂಭವಾಗಿ ಒಟ್ಟು 3,08,839 ಯಾತ್ರಿಗಳು ಯಾತ್ರೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಹಿಮಾಲಯದ ಶ್ರೇಣಿ ವ್ಯಾಪ್ತಿಯಲ್ಲಿ ಬರುವ ಕಾಶ್ಮೀರದ ಅಮರನಾಥ ಗುಹೆಯು ಹಿಮಶಂಕರನ ಶಕ್ತಿ ಇದೆ ಎಂದು ಭಕ್ತರ ನಂಬಿಕೆಯಾಗಿದೆ. ಜು.1ರಿಂದ ಪ್ರಾರಂಭವಾಗಿರುವ ಅಮರನಾಥ ಯಾತ್ರೆಯು ಆ.15ರಂದು ಶ್ರವಣ ಪೂರ್ಣಿಮಾ ಹಬ್ಬದಂದು ಪೂರ್ಣಗೊಳ್ಳಲಿದೆ.