ಬೆಂಗಳೂರು, ಜು.25- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮತ್ತು ಖಜಾಂಚಿ ಹುದ್ದೆಗಳಿಗೆ ಆ.7ರಂದು ನಡೆಯುವ ಚುನಾವಣೆ ಪ್ರಕ್ರಿಯೆಯಲ್ಲಿ ಆವಿರೊಧ ಅಯ್ಕೆಗೆ ಸಹಕರಿಸುವಂತೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಚ್ .ಕೆ.ರಾಮು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು 5.40 ಲಕ್ಷ ಸದಸ್ಯರನ್ನು ಹೊಂದಿದೆ. 2019 ರಿಂದ 2024ರ ಅವಧಿಯ ಚುನಾವಣೆಗಳು ಮೇ 24 ರಿಂದ ಪ್ರಾರಂಭವಾಗಿ ಈವರೆಗೂ ಮೂರು ಹಂತಗಳಲ್ಲಿ ತಾಲ್ಲೂಕು ಯೋಜನಾ ಸಮಿತಿ, ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗೂ ಬೆಂಗಳೂರಿನ 84 ಇಲಾಖೆಯ 100 ರಾಜ್ಯ ಪರಿಷತ್ ಸದಸ್ಯರ ಚುನಾವಣೆ ಪೂರ್ಣಗೊಂಡಿದೆ ಎಂದು ತಳಿಸಿದರು.
ಆ.7ರಂದು ನಡೆಯುವ ಅಧ್ಯಕ್ಷ ಮತ್ತು ಖಜಾಂಚಿ ಸಮಿತಿ ಹುದ್ದೆಗಳಿಗೆ ಚುನಾವಣೆ ನಡೆಯಲಿದ್ದು, ತಾಲ್ಲೂಕು ಯೋಜನಾ ಸಮಿತಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಪದಾಧಿಕಾರಿಗಳು ಹಾಗೂ ಬೆಂಗಳೂರಿನ ರಾಜ್ಯ ಪರಿಷತ್ ಸದಸ್ಯರಿಂದ ಕೂಡಿದ 551 ಮತದಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಈ ಹಿಂದಿನಿಂದಲೂ ಅವಿರೋಧ ಆಯ್ಕೆ ಮಾಡಲಾಗುತ್ತಿದೆ. ಸದಸ್ಯರಲ್ಲಿ ಸಾಮರಸ್ಯ ಹಾಗೂ ಸಾಮಾಜಿಕ ನ್ಯಾಯ ಮೂಡಿಸುವ ನಿಟ್ಟಿನಲ್ಲಿ ಮತ್ತು ಆರ್ಥಿಕ ವೆಚ್ಚಕ್ಕೆ ಕಡಿವಾಣ ಹಾಕುವುದಕ್ಕಾಗಿ ಅವಿರೋಧ ಆಯ್ಕೆ ಒಳ್ಳೆಯದೇ ಆಗಿದೆ. ಹಾಗಾಗಿ ಆಧ್ಯಕ್ಷ ಹಾಗೂ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುವುದಕ್ಕೆ ಸಹಕರಿಸಬೇಕೆಂದು ಮತದಾರರಲ್ಲಿ ಹಾಲಿ ಅಧ್ಯಕ್ಷರಾಗಿರುವ ಎಚ್ .ಕೆ.ರಾಮು ಮನವಿ ಮಾಡಿದರು.