ಜು.28ರಂದು ವಾಹನಗಳ ಹರಾಜು

ಬೆಂಗಳೂರು,ಜು.25- ಬ್ಯಾಟರಾಯನಪುರ ಪೆÇಲೀಸ್ ಠಾಣೆಯಲ್ಲಿ ವಾರಸುದಾರರಿಲ್ಲದ ಅಮಾನತ್ತುಪಡಿಸಿಕೊಂಡಿರುವ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಿತ್ರ ವಾಹನಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಜು.28ರಂದು ಬೆಳಗ್ಗೆ 11 ಗಂಟೆಗೆ ಬ್ಯಾಟರಾಯನಪುರ ಪೆÇಲೀಸ್ ಠಾಣೆ ಆವರಣದಲ್ಲಿ ಸಾರ್ವಜನಿಕವಾಗಿ ಬಹಿರಂಗ ಹರಾಜು ಮಾಡಲಾಗುವುದು.
ಇಚ್ಛೆಯುಳ್ಳ ಸಾರ್ವಜನಿಕರು ಬಹಿರಂಗ ಹರಾಜಿನಲ್ಲಿ ಭಾಗವಹಿಸ ಬಹುದಾಗಿರುತ್ತದೆ.
ಮಲ್ಲೇಶ್ವರಂ ಠಾಣೆ:
ಮಲ್ಲೇಶ್ವರ ಪೆÇಲೀಸ್ ಠಾಣೆ ಎನ್‍ಸಿಆರ್ ಪ್ರಕರಣಗಳಲ್ಲಿ ದ್ವಿಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡು ವಾರಸುದಾರರ ಪತ್ತೆಗಾಗಿ ಸರ್ವ ಪ್ರಯತ್ನ ಮಾಡಿದ್ದರೂ ಸಹ ಪತ್ತೆಯಾಗದೆ ಇದ್ದುದ್ದರಿಂದ ನ್ಯಾಯಾಲಯದ ಆದೇಶದ ಮೇರೆಗೆ 15 ದ್ವಿಚಕ್ರ ವಾಃನಗಳನ್ನು ಜು.30ರಂದು ಸಾರ್ವಜನಿಕವಾಗಿ ಬಹಿರಂಗ ಹರಾಜು ಮಾಡಲಾಗುತ್ತದೆ.
ವಾರಸುದಾರರಿಲ್ಲದ ಈ ದ್ವಿಚಕ್ರ ವಾಹನಗಳನ್ನು ಮಲ್ಲೇಶ್ವರಂ ಆವರಣದಲ್ಲಿ ಅಂದು ಬೆಳಗ್ಗೆ ಬಹಿರಂಗ ಹರಾಜು ಮಾಡಲಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ