ಬೆಂಗಳೂರು : ಸುಪ್ರೀಂ ಕೋರ್ಟ್ನಲ್ಲಿ ಇಂದು ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ನಡೆಯಲಿದೆ. ಮುಖ್ಯ ನ್ಯಾಯಮೂರ್ತಿ ಮುಕುಲ್ ರೋಹ್ಟಗಿ ನೇತೃ್ತ್ವದ ಪೀಠ ಈ ಅರ್ಜಿ ವಿಚಾರಣೆ ಮಾಡಲಿದೆ.
ನಮ್ಮ ಮೇಲೆ ದಿನೇ ದಿನೆ ಒತ್ತಡ ಹೆಚ್ಚುತ್ತಿದೆ. ಹಾಗಾಗಿ ಶೀಘ್ರವೇ ವಿಶ್ವಾಸಮತಕ್ಕೆ ಸೂಚನೆ ನೀಡಬೇಕು. ಅಲ್ಲದೆ, ವಿಶ್ವಾಸ ಮತಕ್ಕೆ ಡೆಡ್ಲೈನ್ ನೀಡಬೇಕು ಎಂದು ಪಕ್ಷೇತರ ಶಾಸಕರ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಅರ್ಜಿ ಸಲ್ಲಿಸಿದ್ದಾರೆ.
“ಸಿಎಂಗೆ ವಿಶ್ವಾಸಮತ ಕೋರಲು ಡೆಡ್ ಲೈನ್ ನಿಗದಿಪಡಿಸಿ. 2018ರ ಮೇ 18ರಂದು ಸುಪ್ರೀಂಕೋರ್ಟ್ ಇದೇ ರೀತಿ ಡೆಡ್ಲೈನ್ ಕೊಟ್ಟಿತ್ತು. ಈಗಲೂ ಅದೇ ರೀತಿಯ ಅದೇ ರೀತಿಯ ಡೆಡ್ಲೈನ್ ನೀಡಿ,” ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ನಿನ್ನೆ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು. ಮಂಗಳವಾರಕ್ಕೆ ವಿಚಾರಣೆ ಮುಂದೂಡಲಾಗಿತ್ತು. ಇದೇ ವೇಳೆ ಎಚ್ಡಿ ಕುಮಾರಸ್ವಾಮಿ, ದಿನೇಶ್ ಗುಂಡೂರಾವ್ ಪರ ವಕೀಲರು ಅರ್ಜಿ ಕೂಡ ವಿಚಾರಣೆಗೆ ಬರುವ ಸಾಧ್ಯತೆ ಇದೆ. ವಿಪ್ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯ ಕುರಿತಾದ ಸ್ಪಷ್ಟ ವಿವರಣೆ ಕೇಳಿ ಇವರು ಅರ್ಜಿ ಸಲ್ಲಿಸಿದ್ದರು.