ನಗರದಲ್ಲಿ ಮತ್ತೆ ಸದ್ದು ಮಾಡಿದ ಪೊಲೀಸ್ ರಿವಾಲ್ವರ್

ಬೆಂಗಳೂರು,ಜು.22- ಸಿಲಿಕಾನ್ ಸಿಟಿಯಲ್ಲಿ ಪೆÇಲೀಸರ ರಿವಾಲ್ವರ್ ಮತ್ತೆ ಸದ್ದು ಮಾಡಿದ್ದು, ಕೊಲೆಯತ್ನ ಪ್ರಕರಣದ ಆರೋಪಿ ಹಾಗೂ ರೌಡಿ ಶೀಟರ್ ಪೆÇಲೀಸರು ಹಾರಿಸಿದ ಗುಂಡೇಟಿನಿಂದ ಗಾಯಗೊಂಡಿದ್ದಾನೆ.
ಕಾಟನ್‍ಪೇಟೆ ಮತ್ತು ಚಾಮರಾಜಪೇಟೆ ಪೆÇಲೀಸ್ ಠಾಣೆಗಳ ರೌಡಿ ಶೀಟರ್ ಅನಿಲ್‍ಕುಮಾರ್ ಅಲಿಯಾಸ್ ಅನಿಲ್ ಅಲಿಯಾಸ್ ಚಾಂಡಾಲ್(32) ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ.

ಈತನ ವಿರುದ್ಧ ಕೊಲೆ, ಕೊಲೆ ಯತ್ನ, ಡಕಾಯಿತಿಗೆ ಸಂಚು ಸೇರಿದಂತೆ 14 ಪ್ರಕರಣಗಳು ವಿವಿಧ ಪೆÇಲೀಸ್ ಠಾಣೆಗಳಲ್ಲಿ ದಾಖಲಾಗಿವೆ.
ಸಿಟಿ ಮಾರ್ಕೆಟ್‍ನಲ್ಲಿ ಸೊಪ್ಪು ಮತ್ತು ತರಕಾರಿ ವ್ಯಾಪಾರಿಗಳಿಗೆ ಬೆದರಿಸಿ ಹಫ್ತಾ ವಸೂಲಿ ಮಾಡುತ್ತಿದ್ದ ಈತ, ಹಣ ಕೊಡದಿದ್ದರೆ ಹಲ್ಲೆ ನಡೆಸುತ್ತಿದ್ದನು. ಯಾವಾಗಲೂ ಜೊತೆಯಲ್ಲೇ ಡ್ರಾಗರ್ ಹಿಡಿದುಕೊಂಡು ಓಡಾಡುತ್ತಾನೆ.

ಕಳೆದ ಜೂನ್ ತಿಂಗಳಿನಲ್ಲಿ ಸೇಠ್ ಎಂಬುವರನ್ನು ಅಡ್ಡಗಟ್ಟಿ ಹಣಕ್ಕೆ ಒತ್ತಾಯಿಸಿದ್ದು, ಹಣ ಕೊಡದಿದ್ದಾಗ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಆರೋಪಿ ವಿರುದ್ಧ ಚಾಮರಾಜಪೇಟೆ ಪೆÇಲೀಸ್ ಠಾಣೆಯಲ್ಲಿ ಕೊಲೆ ಯತ್ನದ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಕಳೆದೊಂದು ತಿಂಗಳಿನಿಂದ ಪೆÇಲೀಸರು ಹುಡುಕುತ್ತಿದ್ದರು.ಆದರೆ ಪೆÇಲೀಸರ ಕೈಗೆ ಸಿಗದೆ ಆರೋಪಿ ತಲೆಮರೆಸಿಕೊಂಡಿದ್ದನು.
ರಾತ್ರಿ 12.55ರ ಸುಮಾರಿನಲ್ಲಿ ಆರೋಪಿ ಅನಿಲ್ ಕಾಟನ್‍ಪೇಟೆ ವ್ಯಾಪ್ತಿಯಲ್ಲಿನ ಆನಂದಪುರದ ಪಶುವೈದ್ಯ ಆಸ್ಪತ್ರೆಯ ಕಾಂಪೌಂಡ್ ಒಳಗೆ ಇರುವ ಬಗ್ಗೆ ಚಾಮರಾಜಪೇಟೆ ಠಾಣೆ ಇನ್‍ಸ್ಪೆಕ್ಟರ್ ಕುಮಾರಸ್ವಾಮಿ ಅವರಿಗೆ ಮಾಹಿತಿ ಬಂದಿದೆ.

ಮಾಹಿತಿ ಆಧಾರದ ಮೇಲೆ ಕಾನ್‍ಸ್ಟೆಬಲ್ ಚಂದ್ರಶೇಖರ್ ಪಾಟೀಲ್ ಮತ್ತಿತರ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಕಾನ್‍ಸ್ಟೆಬಲ್ ಚಂದ್ರಶೇಖರ ಪಾಟೀಲ್ ಅವರು ಆರೋಪಿ ಅನಿಲ್‍ನನ್ನು ಹಿಡಿಯಲು ಮುಂದಾಗುತ್ತಿದ್ದಂತೆ ಡ್ರಾಗರ್‍ನಿಂದ ಕಾನ್‍ಸ್ಟೆಬಲ್ ಎಡಗೈಗೆ ಹಲ್ಲೆ ನಡೆಸಿದ್ದಾನೆ.
ತಕ್ಷಣ ಇನ್‍ಸ್ಪೆಕ್ಟರ್ ಕುಮಾರಸ್ವಾಮಿ ಅವರು ಆರೋಪಿಗೆ ಶರಣಾಗುವಂತೆ ಸೂಚಿಸಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಸಿದರಾದರೂ ಹಲ್ಲೆಗೆ ಮುಂದಾದಾಗ ಆತ್ಮ ರಕ್ಷಣೆಗಾಗಿ ಹಾರಿಸಿದ ಗುಂಡು ಆರೋಪಿ ಅನಿಲ್ ಎಡಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.
ತಕ್ಷಣ ಪೆÇಲೀಸರು ಈತನನ್ನು ಸುತ್ತುವರೆದು ವಶಕ್ಕೆ ಪಡೆದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಆರೋಪಿಯಿಂದ ಹಲ್ಲೆಗೊಳಗಾದ ಕಾನ್‍ಸ್ಟೆಬಲ್ ಚಂದ್ರಶೇಖರ್ ಪಾಟೀಲ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ