ನಾನು ಭ್ರಷ್ಟಚಾರಿ ಅಲ್ಲ-ಸಚಿವ ಸಾ.ರಾ.ಮಹೇಶ್

ಮೈಸೂರು,ಜು.20-ನಾನು ಭ್ರಷ್ಟಾಚಾರಿ ಅಲ್ಲ. 30 ವರ್ಷದ ರಾಜಕೀಯ ಜೀವನದಲ್ಲಿ ವೈಯಕ್ತಿಕ ಟೀಕೆ ಮಾಡಿಲ್ಲ. ನನ್ನ ಮೇಲೆ ಆರೋಪವಿದ್ದರೆ ಸದನದಲ್ಲಿ ಬಹಿರಂಗಪಡಿಸಲಿ, ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಎಚ್.ವಿಶ್ವನಾಥ್ ವಿರುದ್ಧ ಗುಡುಗಿದ್ದಾರೆ.

ಕಾಂಗ್ರೆಸ್‍ನಿಂದ ಹೊರಬಂದ ವಿಶ್ವನಾಥ್ ಅವರಿಗೆ ಹಿರಿಯರೆಂಬ ಕಾರಣಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿ ಅವರ ಹಿಂಬಾಲಕರಿಗೆ ಸೀಟು ಕೊಟ್ಟು ಗೆಲ್ಲಿಸಿದ್ದೆವು. ಹುಣಸೂರು ಕ್ಷೇತ್ರದ ಮತದಾರರು ನಿಮಗೆ ರಾಜಕೀಯದಲ್ಲಿ ಪುನರ್ಜನ್ಮ ನೀಡಿದ್ದಾರೆ ಎಂದರು.

ನಾನು ಅವರನ್ನು ತಿರಸ್ಕರಿಸಿದ್ದರೆ ಎಂದೋ ಅವರ ರಾಜಕೀಯ ಜೀವನ ಕೊನೆಯಾಗುತ್ತಿತ್ತು.ನಮ್ಮ ನಾಯಕರಿಗೆ ಇಂದು ಇಂತಹ ಸ್ಥಿತಿ ಬರುತ್ತಿರಲಿಲ್ಲ. ನಾನು ಜಾತಿವಾದಿಯೇ ಎಂದು ಪ್ರಶ್ನಿಸಿದರು.
ನಮಗೆ ಇನ್ನೇನು ಆಸೆಯಿಲ್ಲ. ಕೇವಲ ಶಾಸಕನಾದರೆ ಸಾಕು ಎಂದಿದ್ದು ಮರೆತು ಹೋಯಿತೇ?ಅಧಿಕಾರ ಬೇಡ, ಹಣ ಬೇಡ ಎಂದವರು ಮುಂಬೈಗೆ ಹೋಗಿ ಏಕೆ ಕೂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ