ಸಂವಿಧಾನ ಮತ್ತು ಸಂವಿಧಾನ ಸಂಸ್ಥೆಗಳಿಗೆ ಬೆಲೆ ಕೊಡದ ಮುಖ್ಯಮಂತ್ರಿ-ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ

ಹುಬ್ಬಳ್ಳಿ,ಜು.20- ವಿಶ್ವಾಸಮತಯಾಚನೆ ಮಾಡ್ತೀನಿ ಅಂತಾ ಕುಮಾರಸ್ವಾಮಿಯವರೇ ತೀರ್ಮಾನ ಮಾಡಿದ್ದು, ಆದರೆ ಮುಖ್ಯಮಂತ್ರಿಗಳು ಸಂವಿಧಾನ ಮತ್ತು ಸಂವಿಧಾನ ಸಂಸ್ಥೆಗಳಿಗೆ ಯಾವುದೇ ಬೆಲೆ ಕೊಡದ ರೀತಿ ವರ್ತಿಸುತ್ತಿದ್ದಾರೆ ಎಂದು ಸಚಿವ ಪ್ರಲ್ಹಾದ್ ಜೋಶಿ ಕುಟುಕಿದ್ದಾರೆ.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದಲ್ಲಿ ಬಹುಮತ ಇದ್ದರೆ ಸಾಬೀತು ಮಾಡಬೇಕು.ಇಲ್ಲದೇ ಹೋದರೆ ಆ ಸ್ಥಾನದಿಂದ ಹೊರಗೆ ಬರಬೇಕು.ಅದನ್ನು ಬಿಟ್ಟು ಸಂವಿಧಾನದೊಂದಿಗೆ ಆಟವಾಡುವುದು ಸರಿ ಅಲ್ಲ. ಕುಮಾರಸ್ವಾಮಿ ವಿಶ್ವಾಸಮತಯಾಚನೆಯನ್ನು ಬೇಕಂತಲೇ ಮುಂದುವರೆಸುತ್ತಿದ್ದು, ಈ ಮೂಲಕ ಕುದುರೆ ವ್ಯಾಪಾರದ ಮುನ್ಸೂಚನೆ ನೀಡಿದ್ದಾರೆ.ಈ ಹಿಂದೆ ಶ್ರೀಮಂತ ಪಾಟೀಲ ವಿಚಾರದಲ್ಲಿ ಅವರನ್ನು ಅಪಹರಣ ಮಾಡಲಾಗಿದೆ ಎಂದು ಹೇಳಿದ್ದರು.ಆಗ ಪೆÇೀಲಿಸರು ಖುದ್ದಾಗಿ ಅವರ ಹೇಳಿಕೆ ಪಡೆದಾಗ ತಾವಾಗಿಯೇ ಹೋಗಿದ್ದಾಗಿ ತಿಳಿದುಬಂದಿದೆ ಬೇಕು ಅಂತಾನೆ ಈ ರೀತಿ ಮೈತ್ರಿಯವರು ಮಾಡುತ್ತಿದ್ದಾರೆ ಎಂದರು.

ಸ್ವೀಕರ್ ರಮೇಶಕುಮಾರ ಮೇಲೆ ಎಲ್ಲರು ನಂಬಿಕೆ ಇಟ್ಟಿದ್ದರು. ಅವರು ತತ್ವ ಸಿದ್ದಾಂತಕ್ಕೆ ಬದ್ದರಾಗಿ ನಡೆದುಕೊಳ್ಳುತ್ತಾರೆ ಎಂದು ನಂಬಲಾಗಿತ್ತು. ಆದರೆ ಅವರ ವರ್ತನೆಯಿಂದ ತುಂಬಾ ಆಘಾತ ತಂದಿದೆ.ಇನ್ನೂ ರಾಜ್ಯಪಾಲರು ಕ್ರಮ ತೆಗೆದುಕೊಳ್ಳಬೇಕೆಂದರೇ ಮೊದಲ ದಿನವೇ ತೆಗೆದುಕೊಳ್ಳಬಹುದಿತ್ತು.ಆದರೆ ಹಾಗೇ ಮಾಡದೇ ಎಲ್ಲ ದೃಷ್ಟಿಯಿಂದ ಅನುಕೂಲ ಮಾಡಿಕೊಟ್ಟಿದ್ದಾರೆ.ಅವರ ವಿರುದ್ಧವೇ ಘೋಷಣೆ ಕೂಗುವುದು ಎಷ್ಟರಮಟ್ಟಿಗೆ ಸರಿ.ಈ ರೀತಿ ಮಾಡಲು ಮೈತ್ರಿಯಲ್ಲಿ ಬಹುಮತ ಇಲ್ಲದಿರುವುದು.ಈ ಕಾರಣದಿಂದ ರಾಜ್ಯಪಾಲರು ಏನೇ ಹೇಳಿದರು ಅದನ್ನು ವಿರೋಧಿಸುವ ಕೆಲಸ ಮಾಡಲಾಗುತ್ತಿದೆ.ಈ ಪ್ರವೃತ್ತಿ ಖಂಡನೀಯವಾಗಿದೆ ಎಂದರು.

ಕೇಂದ್ರದಿಂದ ರಾಜ್ಯದ ರಾಜಕಾರಣದಲ್ಲಿ ಸದ್ಯದ ಮಟ್ಟಿಗೆ ಹಸ್ತಕ್ಷೇಪ ಮಾಡುವುದಿಲ್ಲ, ಸದನದಲ್ಲಿ ಬಹುಮತ ಸಾಬೀತು ಮಾಡಬೇಕು. ಅದಕ್ಕೆ ರಾಜ್ಯಪಾಲರು ಅನುವು ಮಾಡಿಕೊಟ್ಟಿದ್ದಾರೆ ಇದನ್ನು ಕೇಂದ್ರ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಇದರಲ್ಲಿ ಮಧ್ಯ ಪ್ರವೇಶ ಮಾಡಲಾಗುವುದಿಲ್ಲ. ಬಿಜೆಪಿ ಯಾವುದೇ ರೀತಿಯ ಆಪರೇಷನ್ ಕಮಲ ಮಾಡಿಲ್ಲ. ಈ ಬಗ್ಗೆ ಎಲ್ಲ ಶಾಸಕರು ಮಾಧ್ಯಮಗಳ ಮೂಲಕ ಸ್ಪಷ್ಟಪಡಿಸಿದ್ದಾರೆ.ಇನ್ನೂ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಯಲ್ಲಿ ಕೇಂದ್ರದ ಸೂಚನೆ ಏನು ಇಲ್ಲ. ರಾಜ್ಯದ ಬಿಜೆಪಿ ಘಟಕದ ಸೂಚನೆಯಂತೆಯೇ ಬೆಳವಣಿಗೆಗಳು ನಡೆಯುತ್ತಿವೆ. ಕೇಂದ್ರದಿಂದ ಯಾವುದೇ ಸೂಚನೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ