ಬೆಂಗಳೂರು, ಜು.20-ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅಳಿವು-ಉಳಿವಿನ ಚರ್ಚೆ ನಡೆಯುತ್ತಿದ್ದರೂ ಸರ್ಕಾರದ ವಿವಿಧ ಇಲಾಖೆಗಳ ವರ್ಗಾವಣೆ ಪ್ರಕ್ರಿಯೆ ಮಾತ್ರ ನಿಂತಿಲ್ಲ. ಪ್ರತಿದಿನವೂ ಒಂದಲ್ಲ ಒಂದು ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯ ವರ್ಗಾವಣೆ ಆದೇಶಗಳು ಹೊರಬೀಳುತ್ತಲೇ ಇವೆ.
ಮೈತ್ರಿ ಸರ್ಕಾರದ ವಿಶ್ವಾಸಮತಯಾಚನೆಯ ನಿರ್ಣಯದ ಮೇಲೆ ವಿಧಾನಸಭೆಯಲ್ಲಿ ಈಗಾಗಲೇ ಚರ್ಚೆ ಆರಂಭವಾಗಿದ್ದು, ಸರ್ಕಾರದ ವರ್ಗಾವಣೆ ವಿಚಾರವೂ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ರಾಜ್ಯಸರ್ಕಾರ ಅಸ್ತಿತ್ವದಲ್ಲಿರುವುದರಿಂದ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ನಿನ್ನೆ ಕಂದಾಯ ಇಲಾಖೆಯ ಗ್ರೇಡ್-1 ಮತ್ತು ಗ್ರೇಡ್-2ರ ತಹಶೀಲ್ದಾರ್ ಹುದ್ದೆಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.ಒಟ್ಟು 17 ಮಂದಿ ತಹಶೀಲ್ದಾರ್ಗಳನ್ನು ವರ್ಗಾವಣೆ ಮಾಡಲಾಗಿದೆ.
ಮೂಡಬಿದರೆ ತಾಲೂಕು ತಹಶೀಲ್ದಾರ್ ಹುದ್ದೆಗೆ ಅನಿತಾಲಕ್ಷ್ಮಿ, ಚಿಕ್ಕಮಗಳೂರು ತಹಶೀಲ್ದಾರ್ ಆಗಿ ಜೆ.ಬಿ.ಮಾರುತಿ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಕಚೇರಿ ತಹಶೀಲ್ದಾರ್ ನಂದಕುಮಾರ್, ಬಾದಾಮಿ ತಾಲೂಕಿನ ತಹಶೀಲ್ದಾರ್ ಆಗಿ ಮಲ್ಲಿಕಾರ್ಜುನ್ ಹೆಗ್ಗಣ್ಣನವರ್ ಹಾಗೂ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ತಹಶೀಲ್ದಾರ್ ಹುದ್ದೆಗೆ ಕೀರ್ತಿ ಚಾಲಕ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ಕ್ರೆಡೆಲ್ ತಹಶೀಲ್ದಾರ್ ಹುದ್ದೆಗೆ ಎಚ್.ವಿಶ್ವನಾಥ್, ಹಾಸನ ತಾಲೂಕು ತಹಶೀಲ್ದಾರ್ ಹುದ್ದೆಗೆ ಮೇಘನಾ, ಬೀದರ್ ಪುರಸಭೆಗೆ ಮನೋಹರ್ಸ್ವಾಮಿ, ಬೆಂಗಳೂರು ಬಿಡಿಎ ತಹಶೀಲ್ದಾರ್ ಹುದ್ದೆಗೆ ಕುಂಯಿ ಅಹಮ್ಮದ್, ಧಾರವಾಡ ಉಪವಿಭಾಗಾಧಿಕಾರಿಗಳ ಕಚೇರಿಗೆ ಎಸ್.ಎಸ್.ಇಂಗಳೆ, ತೀರ್ಥಹಳ್ಳಿ ತಹಶೀಲ್ದಾರ್ ಆಗಿ ಭಾಗ್ಯ ಹಾಗೂ ಹಿರಿಯೂರು ತಾಲೂಕು ತಹಶೀಲ್ದಾರ್ ಆಗಿ ಟಿ.ಸಿ.ಕಾಂತರಾಜ್ ಅವರನ್ನು ವರ್ಗಾಯಿಸಲಾಗಿದೆ.
ಚಿತ್ರದುರ್ಗ ತಾಲೂಕು ತಹಸೀಲ್ದಾರ್ ಹುದ್ದೆಗೆ ಜೆ.ಸಿ.ವೆಂಕಟೇಶಯ್ಯ, ರಾಮನಗರ ತಾಲ್ಲೂಕು ತಹಶೀಲ್ದಾರ್ ಹುದ್ದೆಗೆ ನರಸಿಂಹಮೂರ್ತಿ ಟಿ.ಎನ್., ಕಡೂರು ತಾಲೂಕು ತಹಶೀಲ್ದಾರ್ ಆಗಿ ಕಾಂತರಾಜು, ಹಾಗೂ ಚನ್ನರಾಯಪಟ್ಟಣ ತಹಶೀಲ್ದಾರ್ ಹುದ್ದೆಗೆ ಉಮೇಶ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಮುಖ್ಯಮಂತ್ರಿಯವರ ಅನುಮೋದನೆಯೊಂದಿಗೆ ಕಂದಾಯ ಇಲಾಖೆ ವರ್ಗಾವಣೆ ಮಾಡಿ ಆದೇಶಿಸಿದೆ.