![jadhav](http://kannada.vartamitra.com/wp-content/uploads/2019/07/jadhav-599x381.jpg)
ನವದೆಹಲಿ, ಜು.18 – ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಬಂಧನದಲ್ಲಿರುವ ಭಾರತೀಯ ನಿವೃತ್ತ ನೌಕಾಧಿಕಾರಿ ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ(ಐಸಿಜೆ) ತಡೆ ಒಡ್ಡಿದ ಮರುದಿನವೇ ಜಾಧವ್ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಇಸ್ಲಾಮಾಬಾದ್ನನ್ನು ಭಾರತ ಆಗ್ರಹಿಸಿದೆ.
ರಾಜ್ಯ ಸಭೆಯಲ್ಲಿಂದು ಈ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್, ಪಾಕಿಸ್ತಾನದಲ್ಲಿ ಕುಲಭೂಷನ್ ಜಾಧವ್ ಅವರನ್ನು ಸುಳ್ಳು ಆರೋಪಗಳ ಮೇಲೆ ಬಂಧನದಲ್ಲಿಟ್ಟಿರುವುದು ಅಕ್ರಮ ಮತ್ತು ಕಾನೂನು ಬಾಹಿರ ಎಂದು ಬಣ್ಣಿಸಿದರು.
ಅಂತಾರಾಷ್ಟ್ರೀಯ ನ್ಯಾಯಾಲಯ ನಿನ್ನೆ ನೀಡಿರುವ ಮಹತ್ವದ ತೀರ್ಪು, ಕೇವಲ ಕುಲಭೂಷಣ್ ಅವರಿಗೆ ಮಾತ್ರವಲ್ಲದೇ ಕಾನೂನು ಮತ್ತು ನ್ಯಾಯದಲ್ಲಿ ನಂಬಿಕೆ ಇಟ್ಟಿರುವ ಎಲ್ಲರಿಗೂ ಸಂದ ಜಯವಾಗಿದೆ ಎಂದು ವ್ಯಾಖ್ಯಾನಿಸಿದರು.