
ಗಂಗಾವತಿ: ಐತಿಹಾಸಿಕ ಪ್ರಸಿದ್ಧ ನವಬೃಂದಾವನವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ನಿಧಿಯಾಸೆಗಾಗಿ ರಾತ್ರೋರಾತ್ರಿ ಬೃಂದಾವನವನ್ನು ಹಾಳುಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಆನೆಗೊಂದಿ ಗ್ರಾಮದಲ್ಲಿ ವ್ಯಾಸರಾಯರ ಬೃಂದಾವನ ಸೇರಿ ಒಟ್ಟು ಒಂಭತ್ತು ಮಧ್ವ ಸಂತರ ಬೃಂದಾವನಗಳು ಇವೆ. ಈ ನವಬೃಂದಾವನವನ್ನು ತುಂಗಭದ್ರಾ ನದಿ ಸುತ್ತುವರಿದಿದೆ. ಹಂಪಿಯಿಂದ ಸುಮಾರು 20 ಕಿಮೀ ದೂರದಲ್ಲಿರುವ ನವಬೃಂದಾವನದಲ್ಲಿ ರಾತ್ರೋರಾತ್ರಿ ಕಂಬಗಳನ್ನು ಕಿತ್ತು ಹಾಕಲಾಗಿದೆ. ಆಳವಾದ ಗುಂಡಿಗಳನ್ನೂ ತೋಡಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.