ಘಟನಾ ಸ್ಥಳಕ್ಕೆ ಆಹಾರ ಸ್ವೀಕರಿಸದೇ ಹೊರಟ್ಟಿದ್ದೇವೆ-ಶ್ರೀಸುಬುಧೇಂದ್ರ ತೀರ್ಥರು, ಪೀಠಾಧಿಪತಿ, ಶ್ರೀರಾಘವೇಂದ್ರ ಮಠ

ರಾಯಚೂರು: ಕೊಪ್ಪಳ ಜಿಲ್ಲೆಯ ವ್ಯಾಸರಾಯರ ನವ ವೃಂದಾವನ ಧ್ವಂಸಗೊಳಿಸಿರುವ ಕೃತ್ಯದಿಂದ ನಮ್ಮ ರಕ್ತ ಕುದಿಯುತ್ತಿದೆ ಎಂದು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದ್ದಾರೆ.

ಶ್ರೀಸುಬುಧೇಂದ್ರ ತೀರ್ಥರು, ಪೀಠಾಧಿಪತಿ, ಶ್ರೀರಾಘವೇಂದ್ರ ಮಠ

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕೃತ್ಯದಿಂದ ನಮ್ಮ ಮನಸಿಗೆ ತುಂಬಾ ನೋವುಂಟಾಗಿದೆ. ಇದನ್ನ ತೀವ್ರವಾಗಿ ಖಂಡಿಸುತ್ತೇವೆ. ಈ ಘಟನೆಯಿಂದ ಹಿಂದೂ ಸಮಾಜ ಹಾಗೂ ಮಧ್ವರ ಅನುಯಾಯಿಗಳಿಗೆ ಕರಾಳ ದಿನವಾಗಿದೆ. ದುಷ್ಕರ್ಮಿಗಳು ನವ ವೃಂದಾವನ್ನು ಸಂಪೂರ್ಣವಾಗಿ ನಾಶ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದನ್ನು ಎಲ್ಲರೂ ಖಂಡಿಸಬೇಕು ಎಂದಿದ್ದಾರೆ.

ಈ ಪ್ರಕರಣವನ್ನ ರಾಜ್ಯ ಸರಕಾರ ಹಾಗೂ ಕೊಪ್ಪಳ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ, ಕೃತ್ಯವೆಸಗಿದ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸಬೇಕು. ವ್ಯಾಸರಾಯರ ನವ ವೃಂದಾವವನ್ನ ಪುನಃ ಸಂಪ್ರದಾಯ ಬದ್ದವಾಗಿ ಪುನರ್​​ ನಿರ್ಮಾಣ ಮಾಡಿ, ಸೂಕ್ತ ಭದ್ರತೆ ಒದಗಿಸಬೇಕು ಎಂದರು. ಇಂತಹ ಕೃತ್ಯಗಳು ಇಂದಿಗೆ ಕೊನೆಯಾಗಬೇಕು.

ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುವ ಮೂಲಕ ಭದ್ರತೆ ಒದಗಿಸಬೇಕು. ಘಟನಾ ಸ್ಥಳಕ್ಕೆ ಆಹಾರ ಸ್ವೀಕರಿಸದೇ ಹೊರಟ್ಟಿದ್ದೇವೆ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ