ಆಂಗ್ಲರ ನಾಡಲ್ಲಿ ನಡೆದ ವಿಶ್ವಕಪ್ ಟೂರ್ನಿ ಮುಗಿದು ಹೋಯ್ತು. ಈ ಬಾರಿಯ ವಿಶ್ವಕಪ್ ಎತ್ತಿಹಿಡಿಯಬೇಕೆಂಬ ಟೀಮ್ ಇಂಡಿಯಾದ ಕನಸು ಭಗ್ನಗೊಂಡಿದೆ.
ಧೋನಿಗಾಗಿ ಈ ಬಾರಿಯ ವಿಶ್ವಕಪ್ ಗೆಲ್ಲಬೇಕೆಂದು ಆಂಗ್ಲರ ನಾಡಿಗೆ ಹೋಗಿದ್ದ ಕೊಹ್ಲಿ ಸೈನ್ಯ ನಿರ್ಣಾಯಕ ಸೆಮಿಫೈನಲ್ ನ್ಯೂಜಿಲೆಂಡ್ ವಿರುದ್ಧ ಸೋತು ಟೂರ್ನಿಯಿಂದಲೇ ಹೊರಬಿತ್ತು. 2011ರಲ್ಲಿ ಕ್ರಿಕೆಟ್ ದೇವರು ಸಚಿನ್ಗಾಗಿ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದಿತ್ತು. ಅದೇ ಈ ಕೊನೆಯ ವಿಶ್ವಕಪ್ ಆಡುತ್ತಿರುವ ಧೋನಿಗೆ ವಿಶ್ವಕಪ್ ಉಡುಗೊರೆ ಕೊಡಲು ಕೊಹ್ಲಿ ಸೈನ್ಯ ಹೋರಾಟ ಮಾಡಿತ್ತು. ಆದರೆ ಕೊಹ್ಲಿ ಸೈನ್ಯ ಧೋನಿಗೆ ಸೋಲಿನ ಉಡುಗೊರೆ ಕೊಟ್ಟಿತ್ತು.
ಚಾಂಪಿಯನ್ ಪ್ಲೇಯರ್ ಧೋನಿಗೆ ವಿದಾಯದ ಅವಿಸ್ಮರಣೀಯ ಕ್ಷಣವಾಗಿಸಬೇಕೆಂಬ ಕನಸು ಭಗ್ನಗೊಂಡಿತು.. ಲಾರ್ಡ್ಸ್ ಅಂಗಳದಲ್ಲಿ ಧೋನಿಯ ಉತ್ಸವದ ಟೀಮ್ ಇಂಡಿಯಾ ಆಟಗಾರರ ಆಸೆಯೂ ಈಡೇರದೇ ಹೋಯ್ತು.. ವಿಶ್ವಕಪ್ ಬಳಿಕ ಧೋನಿ ಕ್ರಿಕೆಟ್ಗೆ ಈಗ ನಿವೃತ್ತಿ ಘೋಷಿಸುತ್ತಾರೆ ಆಮೇಲೆ ಘೋಷಿಸುತ್ತಾರೆ ಅಂತ ಅಭಿಮಾನಿಗಳು ಕಾದಿದ್ದೆ ಆಯ್ತು. ಧೋನಿಯನ್ನ ದ್ವೇಷಿಸುವವರು ಧೋನಿ ಬೇಗ ನಿವೃತ್ತಿಯಾಗಲಿ ಅಂತಾ ಹೇಳಿದ್ರೆ ಇನ್ನು ಧೋನಿಯ ಕಟ್ಟಾಭಿಮಾನಿಗಳು ಧೋನಿ ಇನ್ನು ಆಡಲಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಖ್ಯಾತ ಗಾಯಕಿ ಲತಾ ಮಾಂಗೆಶ್ಕರ್ ಕೂಡ ಧೋನಿಗೆ ಈಗಲೇ ನಿವೃತ್ತಿ ಆಗೋದು ಬೇಡ ಎಂದು ಮನವಿ ಮಾಡಿದ್ದಾರೆ ಇದರಲ್ಲೆ ಗೊತ್ತಾಗುತ್ತೆ ಮಹೇಂದ್ರ ಮಹಿಮೆ ಏನು ಅನ್ನೋದು. ಆದರೆ ಅಭಿಮಾನ ಏನೇ ಇದ್ರು. ಧೋನಿ ನಿವೃತ್ತಿ ಘೋಷಿಸುವ ಅನಿವಾರ್ಯತೆ ಎದುರಿಸುತ್ತದ್ದಾರೆ ಅನ್ನೊದೆ ಕಹಿ ಸತ್ಯ ಆಗಿದೆ.
ಎಂ.ಎಸ್.ಧೋನಿ ನಮ್ಮ ಆಯ್ಕೆ ಅಲ್ಲವೆಂದ ಎಂಎಸ್ಕೆ..!
ವಿಶ್ವಕಪ್ ಬಳಿಕ ಧೋನಿ ರಿಟೈಡ್ ಆಗ್ತಾರೆ ಅಂತ ಎಲ್ರೂ ಹೇಳ್ತಿದ್ರು.. ಆದ್ರೆ, ಈ ಬೆನ್ನಲ್ಲೆ ಟೀಮ್ ಇಂಡಿಯಾದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಮಾತನಾಡಿದ್ದಾರೆ.
ಧೋನಿ ತನ್ಮ ಕ್ರಿಕೆಟ್ ಜೀವನದ ಬಗ್ಗೆ ತಮ್ಮ ಅಂತಿಮ ನಿರ್ಧಾರ ತಿಳಿಸಬೇಕಿದೆ. ನಾನು ಆದಷ್ಟು ಬೇಗ ಎಂಎಸ್ ಧೋನಿ ಜೊತೆ ಮಾತನಾಡಿ, ನಿಮ್ಮ ಅಂತಿಮ ನಿರ್ಧಾರ ತಿಳಿಸಿ ಎಂದು ಕೇಳುವೆ.
ಟೀಮ್ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಎಮ್.ಎಸ್.ಕೆ ಪ್ರಸಾದ್ ಮಾತನಾಡಿದ್ದಾರೆ.
ಆಯ್ಕೆ ಸಮಿತಿ ಮುಖ್ಯಸ್ಥ ಎಮ್ಎಸ್ಕೆ ಪ್ರಸಾದ್ ಮಾತು ಕೇಳ್ತಿದ್ರೆ ಧೋನಿ ಮೇಲೆ ಇವರೇ ನಿವೃತ್ತಿಗೆ ಒತ್ತಡ ಹಾಕುತ್ತಿದ್ದಾರೆ ಅನಿಸುತ್ತೆ. ಸಹಜವಾಗಿ ಧೋನಿ ಅಭಿಮಾನಿಗಳಿಗೆ ಆಕ್ರೋಶ ಬರುವಂತೆ ಮಾಡುತ್ತೆ.
ಕ್ರಿಕೆಟ್ ನಿವೃತ್ತಿ ಬಳಿಕ ಮಿಸ್ಟರ್ ಕೂಲ್ ನಿರ್ಧಾರ ಏನು..?
ಧೋನಿಯ ಭವಿಷ್ಯದ ವಿಚಾರ ಇಷ್ಟೆಲ್ಲಾ ಥ್ರಿಲ್ಲಿಂಗ್ ಸಸ್ಪೆನ್ಸ್ಗೆ ಕಾರಣವಾಗಿದ್ದು.. ಎರಡು ಹೇಳಿಕೆಗಳು.. ಒಂದು ಬಿಜೆಪಿ ಮುಖಂಡನ ರಾಜಕೀಯ ಹೇಳಿಕೆ.. ಇನ್ನೊಂದು ಧೋನಿ ಮ್ಯಾನೇಜರ್ ಅರಣ್ ಪಾಂಡೆ ಹೇಳಿಕೆ.. ಹೌದು.. ನಿಜಾ ನಾಲ್ಕು ದಿನಗಳ ಹಿಂದೆ ಬಿಜೆಪಿ ಮುಖಂಡ ಸಂಜಯ್ ಪಾಸ್ವಾನ್, ಧೋನಿ ನಿವೃತ್ತಿಯ ಬಳಿಕ ಬಿಜೆಪಿ ಸೇರಲಿದ್ದಾರೆ. ಜಾರ್ಖಂಡ್ ಸಿಎಂ ಫೇಮ್ ಇರೋ ವ್ಯಕ್ತಿ ಎಂದಿದ್ದ ಹೇಳಿಕೆ ಸಂಚಲನ ಮೂಡಿಸಿತ್ತು.. ಆದ್ರೆ, ಈ ಬೆನ್ನಲ್ಲೆ ಮಿಸ್ಟರ್ ಕೂಲ್ ಧೋನಿ ಮ್ಯಾನೇಜರ್ ಅರುಣ್ ಪಾಂಡೆ, ಧೋನಿ ಸೇನೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಆಗಿದ್ದು. ನಿವೃತ್ತಿಯ ಬಳಿಕ ಧೋನಿ ಭಾರತೀಯ ಸೇನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದಾರೆಂದು ಸ್ಟಷ್ಟಪಡಿಸಿದ್ದಾರೆ..
ಸಸ್ಪೆನ್ಸ್ ಥ್ರಿಲ್ಲರ್ ಆದ ಧೋನಿಯ ಭವಿಷ್ಯ..!
ವಿಂಡೀಸ್ ಸರಣಿಯು ಆಗಸ್ಟ್ 3ರಿಂದ ಆರಂಭವಾಗಲಿದೆ. 3 ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ-20 ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಭಾಗವಹಿಸಲಿದೆ ಇದರಂತೆ ಸಭೆ ಸೇರಲಿರುವ ಬಿಸಿಸಿಐ ಆಯ್ಕೆ ಸಮಿತಿಯು ಜುಲೈ 19ರಂದು ತಂಡವನ್ನ ಪ್ರಕಟಿಸಲಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಿದ್ದು, ಟೆಸ್ಟ್ ಸರಣಿ ವೇಳೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಹಾಗಾಗಿ ಸೀಮಿತ ಓವರ್‌ಗಳ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ವೆಸ್ಟ್ಇಂಡೀಸ್ ಪ್ರವಾಸಕ್ಕೆ ತಂಡದ ಆಯ್ಕೆಯು ನಡೆಯಲಿದೆ. ಎಂಎಸ್ಕೆ ಪ್ರಸಾದ್ ಹೇಳಿಕೆಯಿಂದ ಮಹೇಂದ್ರ ಸಿಂಗ್ ಧೋನಿ ಆಯ್ಕೆ ಆಗುವರಾ ಎಂಬ ವಿಚಾರ ಬಹಳಷ್ಟು ಕುತೂಹಲ ಮೂಡಿಸಿದೆ..
ಒಟ್ಟಾರೆ ಧೋನಿ ನಿವೃತ್ತಿಯ ಸನಿಹ ಬಂದಿದೆ ಅನ್ನೋದು ನಿಜ. ಆದರೆ ತಂಡಕ್ಕೆ ಮೂರು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಕೊಟ್ಟ ಚಾಂಪಿಯನ್ ಪ್ಲೇಯರ್ಗೆ ನಿವೃತ್ತಿ ನಿರ್ಧಾರವನ್ನ ಬಿಟ್ಟು ಕೊಟ್ಟು ಗೌರವದಿಂದ ಕಳುಹಿಸಲಿ ಅನ್ನೋದೇ ಅಭಿಮಾನಿಗ ಆಶಯವಾಗಿದೆ.