ಟೀಮ್ ಇಂಡಿಯಾ ಮೇಲೆ ಸರ್ಜರಿ ಮಾಡಲು ಮುಂದಾದ ಬಿಸಿಸಿಐ: ಹೊಸ ಕೋಚ್ ಹುಡುಕಾಟದಲ್ಲಿ ಬಿಸಿಸಿಐ

ಲಂಡನ್ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುವ ಮೂಲಕ ಅಭಿಯಾನ ಮುಗಿಸಿದೆ. ಇದೀಗ ಬಿಸಿಸಿಐ, ತಂಡದ ಜತೆಗೆ ಮುಖ್ಯ ಕೋಚ್ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ.

 

 

 

 

 

 

 

 

 

 

 

 

 

 

ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಹಾಗೂ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರ ಅವಧಿ ಮುಕ್ತಾಯಗೊಂಡಿದ್ದು, ವಿಶ್ವಕಪ್ ದೃಷ್ಠಿಯಿಂದ 45 ದಿನಗಳ ಕಾಲ ಹುದ್ದೆಯ ಅವಧಿ ವಿಸ್ತರಣೆ ಮಾಡಲಾಗಿತ್ತು. ಅದು ಮುಕ್ತಾಯಗೊಳ್ಳಲು ಕೆಲ ದಿನಗಳು ಮಾತ್ರ ಬಾಕಿ ಇರುವ ಕಾರಣ ಬಿಸಿಸಿಐ ವಿವಿಧ ಹುದ್ದೆಗಳಿಗೆ ಹೊಸದಾಗಿ ಅರ್ಜಿ ಆಹ್ವಾನ ಮಾಡಲು ಮುಂದಾಗಿದೆ.

ಆಗಸ್ಟ್ 3ರಿಂದ ಸೆಪ್ಟೆಂಬರ್ 3ರವರೆಗೆ ವೆಸ್ಟ್ ಇಂಡೀಸ್ ಟೂರ್ ಮಾಡಲಿರುವ ಟೀಂ ಇಂಡಿಯಾ, ತದನಂತರ ಸೆಪ್ಟೆಂಬರ್ 15ರಿಂದ ಭಾರತದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಟ ನಡೆಸಲಿದೆ. ಈ ವೇಳೆಗೆ ತಂಡದ ಕೋಚ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಹುದ್ದೆಗಾಗಿ ಅರ್ಜಿ ಆಹ್ವಾನ ಮಾಡಲು ಬಿಸಿಸಿಐ ನಿರ್ಧರಿಸಿದೆ.

ಇನ್ನು ರವಿಶಾಸ್ತ್ರಿ, ಭರತ್ ಅರುಣ್, ಸಂಜಯ್ ಬಂಗಾರ್ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಬೇಕಾಗಿದೆ. ಟೀಂ ಮ್ಯಾನೇಜರ್ ಹಾಗೂ ಫಿಸಿಯೋ ಹುದ್ದೆಗೆ ಬಿಸಿಸಿಐ ಹೊಸದಾಗಿ ಅರ್ಜಿ ಆಹ್ವಾನ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. 2017ರಲ್ಲಿ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ರವಿಶಾಸ್ತ್ರಿ ಆಯ್ಕೆಯಾಗಿದ್ದು, ಅವರ ನೇತೃತ್ವದಲ್ಲಿ ತಂಡ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲ್ಲುವಲ್ಲಿ ಮಾತ್ರ ತಂಡ ಯಶಸ್ವಿಯಾಗಿದೆ.

ಹೊಸ ಕೋಚ್ಗೆ ಆಹ್ವಾನ ನೀಡಿದ ಬಿಸಿಸಿಐ

 

 

 

 

 

 

 

 

 

 

 

ಟೀಮ್ ಇಂಡಿಯಾ ಕ್ರಿಕೆಟ್ ಬೋರ್ಡ್ ನಿನ್ನೆ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಟೀಮ್ ಇಂಡಿಯಾಗೆ ಕೋಚ್ ಆಗಲು ಬಯಸುವವರು 60 ವರ್ಷಕ್ಕಿಂತ ಕೆಳಗಿನವರಾಗಿರಬೇಕು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಎರಡು ವರ್ಷದ ಅನುಭವ ಹೊಂದಿರಬೇಕೆಂದು ಹೇಳಿದೆ.

ಎರಡು ವರ್ಷಗಳ ಹಿಂದೆ ರವಿ ಶಾಸ್ತ್ರಿ ಕೋಚ್ ಆಗುವ ಮುನ್ನ ಬಿಸಿಸಿಐ ಕೋಚ್ ಆಗುವವರಿಗೆ 9 ಷರತ್ತುಗಳನ್ನ ವಿಧಿಸಿತ್ತು. ಆದರೆ ಈ ಷರತ್ತುಗಳು ದೂರದೃಷ್ಟಿ ಮತ್ತು ಸ್ಪಷ್ಟೆತೆ ಇರಲಿಲ್ಲ. ಈ ಬಾರಿಯೂ ಕೇವಲ ಮೂರು ಷರತ್ತುಗಳನ್ನ ವಿಧಿಸಿದೆ. ಆದರೆ ಸಹಾಯಕ ಹುದ್ದೆಗಳಿಗೆ ನೇರವಾಗಿ ಆಯ್ಕೆ ಮಾಡಿಕೊಳ್ಳುವುದಾಗಿ ಬಿಸಿಸಿಐ ಹೇಳಿದೆ.

ಸಹಾಯಕ ಕೋಚ್ಗಳಿಗೆ ನೇರ ಆಯ್ಕೆ
ಆಯ್ಕೆ ಪ್ರಕ್ರಿಯೆ ವೇಳೆ ತಂಡದ ಈಗಿನ ಸಹಾಯಕ ತರಬೇತುದಾರರನ್ನ ನೇರವಾಗಿ ಆಯ್ಕೆ ಮಾಡಿಕೊಳ್ಳುತ್ತೇವೆ.

ಬಿಸಿಸಿಐ
ಟೀಮ್ ಇಂಡಿಯಾಗೆ ಮುಖ್ಯ ಕೋಚ್ ಹುದ್ದೆ ಅಲಂಕರಿಸುವವರಿಗೆ ಟೆಸ್ಟ್ ಆಡುವ ತಂಡವನ್ನ ಕನಿಷ್ಟ ಪಕ್ಷ ಎರಡು ಅಥವಾ ಮೂರು ವರ್ಷಗಳ ಕಾಲ ಪ್ರತಿನಿಧಿಸಿರಬೇಕು. ಜೊತೆಗೆ ಸಹಾಯಕ ಹುದ್ದದೆಗಳಾದ ಎಗ್ರೇಡ್ ಅಥವಾ ಐಪಿಎಲ್ ತಂಡವೂ ಆಗಬಹುದು. ಕೋಚ್ ಆಗಿ ಬರುವವರು ಕಡಿಮೆ ಅಂದ್ರೆ 30 ಟೆಸ್ಟ್ ಮತ್ತು 50 ಏಕದಿನ ಪಂದ್ಯಗಳನ್ನ ಆಡಿರಬೇಕು.

ವಿಂಡೀಸ್ ಸರಣಿ ಶಾಸ್ತ್ರಿಗೆ ಕೊನೆಯ ಸರಣಿ
ವಿಶ್ವಕಪ್ ಗೆಲ್ಲಿಸುವಲ್ಲಿ ವಿಫಲರಾಗಿರುವ ಕೋಚ್ ಶಾಸ್ತ್ರಿ ಮುಂದಿನ ತಿಂಗಳು ಆತಿಥೇಯ ವಿಂಡೀಸ್ ವಿರುದ್ಧಧ ಸರಣಿ ಕೊನೆಯ ಸರಣಿ ಆಗಲಿದೆ. ಎರಡು ವರ್ಷಗಳ ಹಿಮದೆ ಟೀಮ್ ಇಂಡಿಯಾ ಕೋಚ್ ಆಗಿ ಬಂದ ಶಾಸ್ತ್ರಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲಿಸಿಕೊಟ್ಟಿದ್ದು ಬಿಟ್ಟರೇ ಯಾವ ಐಸಿಸಿ ಟ್ರೋಫಿಗಳನ್ನ ಗೆಲ್ಲಿಸಿ ಕೊಡಲು ಆಗಲಿಲ್ಲ.

ಒಟ್ಟಾರೆ ವಿಶ್ವಕಪ್ ಸೋತ ಬಳಿಕ ಟೀಮ್ ಇಂಡಿಯಾ ಮೇಲೆ ಮೇಜರ್ ಸರ್ಜರಿ ಮಾಡಲು ಹೊರಟಿರುವ ಬಿಸಿಸಿಐ ಒಳ್ಳೆಯ ಕೋಚ್ನ್ನ ನೇಮಕ ಮಾಡಲಿ ಅನ್ನೋದೇ ಕೋಟಿ ಕೋಟಿ ಅಭಿಮಾನಿಗಳ ಆಶಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ