ವಿಶ್ವ ಯುದ್ಧ ಬಳಿಕ ಟೀಮ್ ಇಂಡಿಯಾದಲ್ಲಿ ಅಂತರ್ಯುದ್ಧ : ಕ್ಯಾಪ್ಟನ್ ಕೊಹ್ಲಿ, ರೋಹಿತ್ ಬಣಗಳ ನಡುವೆ ಗ್ಯಾಂಗ್ ವಾರ್

ಆಂಗ್ಲರ ನಾಡಲ್ಲಿ ಮೊನ್ನೆ ವಿಶ್ವಕಪ್ ಟೂರ್ನಿ ಮುಗಿದಿದ್ದೆ ತಡ ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಒಂದೊಂದೆ ಬೆಳೆಕಿಗೆ ಬರ್ತಿವೆ.. ಮೇಲೆ ನೋತಿಔಕೆ ತಂಡದಲ್ಲಿ ಸರಿಯಿದೆ ಅನಿಸಿದ್ರು.. ಒಳಗೆ ಮಾತ್ರ ಅಂತರ್ಯುದ್ಧ ಜೋರಾಗಿದೆ ಎಂಬ ಅನುಮಾನ ಮೂಡಿಸಿದೆ.. ಕಿವೀಸ್ ವಿರುದ್ಧದ ಸೆಮಿಫೈನಲ್ನಲ್ಲಿ ಆದ ಯಡವಟ್ಟುಗಳಿಂದಾಗಿ ಟೀಮ್ ಇಂಡಿಯಾ 18 ರನ್ಗಳ ಅಂತರದಿಂದ ವಿರೋಚಿತ ಸೋಲು ಸೋಲು ಅನುಭವಿಸಿ ಟೂರ್ನಿಯಿಂದಲೇ ಹೊರ ಬೀಳಬೇಕಾಯಿತು.

ಇದೀಗ ಕೊಹ್ಲಿ ಮತ್ತು ರೋಹಿತ್ ಬಣಗಳ ನಡುವೆ ಗ್ಯಾಂಗ್ ವಾರ್ ಶುರುವಾಗಿದ್ದು. ಅಸಲಿಗೆ ಟೀಮ್ ಇಂಡಿಯಾದಲ್ಲಿರುವ ಆ ಎರಡು ಬಣಗಳು ಯಾವುವು.. ಆ ಆಂತರ್ಯುದ್ಧ ನಡೆಯೋಕೆ ಕಾರಣವಾದ್ರು ಏನು.. ನೋಡುಸ್ತೀವಿ ನೋಡಿ…

 

 

 

 

 

 

 

 

 

 

 

 

ಕ್ಯಾಪ್ಟನ್ ಕೊಹ್ಲಿ ವರ್ಸಸ್ ಕೂಲ್ ರೋಹಿತ್ ಶರ್ಮಾ..!
ಯೆಸ್.. ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್ ಕೊಹ್ಲಿ ವರ್ಸಸ್ ವೈಸ್ ಕ್ಯಾಪ್ಟನ್ ರೋಹಿತ್ ಶರ್ಮಾ ಗುಂಪುಗಳಿವೆ ಎಂಬ ಅನುಮಾನ ಈ ಹಿಂದಿನಿಂದಲೂ ಇತ್ತು.

ಇದೀಗ ವಿಶ್ವಕಪ್ ಸೋಲಿನ ಬಳಕ ಇಬ್ಬರ ನಡುವೆ ತಪ್ಪು , ಸರಿ ಬಗ್ಗೆ ಚರ್ಚೆ ಆರಂಭವಾಗಿದೆ. ಕೆಲವರು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಸರ್ವಾಧಿಕಾರಿ ಧೋರಣೆ ಮತ್ತು ತಪ್ಪು ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಅಸಮಾಧಾನಗೊಂಡಿದ್ದಾರೆ.. ಹೀಗಾಗಿ ಉಪ ನಾಯಕ ರೋಹಿತ್ ಶರ್ಮಾಗೆ ಕ್ಯಾಪ್ಟನ್ ಆದ್ರೆ, ಒಳಿತು ಅನ್ನೋದು ತಂಡದಲ್ಲಿನ ಹಲವರ ಅಭಿಪ್ರಾಯವಾಗಿದೆ. ಅಲ್ಲದೆ ತಂಡದಲ್ಲಿ ಕೊಹ್ಲಿ ಬಣದಲ್ಲಿ ಇರೋ ಆಟಗಾರರಿಗೆ ಮಾತ್ರ ಹೆಚ್ಚು ಅವಕಾಶ ನೀಡ್ತಾರೆ. ರೋಹಿತ್ ಆಪ್ತರಿಗೆ ಹೆಚ್ಚು ಅವಕಾಶ ನೀಡಲ್ಲ ಎಂಬ ಆರೋಪಗಳು ಕೇಳಿಬರ್ತಿವೆ. ಹೀಗಾಗಿಯೇ ಕ್ಯಾಪ್ಟನ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಅನ್ನೋ ವಿಚಾರ ಕೇಳಿ ಬರ್ತಿದೆ.

ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್ ಕೊಹ್ಲಿಯೇ ಸರ್ವಾಧಿಕಾರಿ..!
ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್ ಕೊಹ್ಲಿಯ ನಿರ್ಧಾರವೇ ಅಂತಿಮ.. ಟೀಮ್ ಇಂಡಿಯಾದ ಕೋಚ್ ಆಯ್ಕೆಯಿಂದ ಹಿಡಿದು, ತಂಡದ ಆಯ್ಕೆ ಸೇರಿದಂತೆ ಪ್ಲೇಯಿಂಗ್ ಇಲೆವನ್ ಆಯ್ಕೆ ಮಾಡೋದು ಸಹ ವಿರಾಟ್ ಕೊಹ್ಲಿಯೇ.. ಇದನ್ನ ವಿಶ್ವಕಪ್ ಟೂರ್ನಿಯ ಕೆಲ ಘಟನೆಗಳನ್ನ ನಾವು ಮೆಲುಕು ಹಾಕಿದ್ರೆ ಸ್ಪಷ್ಟವಾಗಿ ತಿಳಿಯುತ್ತೆ. ಶಿಖರ್ ಧವನ್ ಗಾಯಗೊಂಡಿದ್ದಾಗ ರಿಷಭ್ ಪಂತ್ಗೆ ಅಯ್ಕೆ ಮಾಡಿದ್ದು, ವಿಜಯ್ ಶಂಕರ್ ಗಾಯಗೊಂಡಿದ್ದಾಗ ಕನ್ನಡಿಗ ಅಗರ್ವಾಲ್ಗೆ ಬುಲವ್ ಹಿಂದೆ ಕೊಹ್ಲಿಯ ಕೈವಾಡ ಇದೆ.. ನಾಲ್ಕನೇ ಕ್ರಮಾಂಕಕ್ಕೆ ರಾಯುಡು ಸೂಕ್ತ ಆಯ್ಕೆ ಆಗಿದ್ರು.. ಇನ್ನು ಏಕದಿನ ಪಂದ್ಯ ಆಡಿದ ಅನುಭವ ಇಲ್ಲದ. ಆರ್ಸಿಬಿ ತಂಡದಲ್ಲಿ ಅಡಿದ್ದ ಅಗರ್ವಾಲ್ಗೆ ಸ್ಥಾನ ನೀಡಿದ್ರು ಅಚ್ಚರಿ ಉಂಟು ಮಾಡಿತ್ತು.. ಅಲ್ಲದೆ ಟೀಮ್ ಇಂಡಿಯಾದಲ್ಲಿ ಕುಲ್ದೀಪ್ ಯಾದವ್ಗಿಂತ ಆರ್ಸಿಬಿಯಲ್ಲಿದ್ದ ಚಹಾಲ್ಗೆ ಕ್ಯಾಪ್ಟನ್ ಕೊಹ್ಲಿ ಹೆಚ್ಚು ಅವಕಾಶ ನೀಡುತ್ತದ್ದು ಞoಹ್ಲಿಯ ಸರ್ವಾಧಿಕಾರಿ ಧೋರಣೆಗೆ ಉದಾಹರಣೆ…

ಕೊಹ್ಲಿ, ರೋಹಿತ್ಗೆ ನಾಯಕತ್ವ ಹಂಚಲು ಬಿಸಿಸಿಐ ಪ್ಲಾನ್ ?
ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಹೊರಬಿದ್ದಿದ್ದೆ ತಡ, ಕ್ರಿಕೆಟ್ ದಿಗ್ಗಜರು ಸೇರಿದಂತೆ ಹಲವರು ರೋಹಿತ್ ಶರ್ಮಾಗೆ ಕ್ಯಾಪ್ಟನ್ ಶಿಫ್ ನೀಡಿ ಎಂಬ ಸಲಹೆ ನೀಡಿದ್ರು.. ಮುಖ್ಯವಾಗಿ ಮುಂದಿನ 2023ರ ವಿಶ್ವಕಪ್ ದೃಷ್ಟಿಯಿಂದ ನಿಗದಿತ ಓವರ್ಗಳ ಫಾರ್ಮೆಟ್ಗೆ ರೋಹಿತ್ ಶರ್ಮಾಗೆ ನಾಯಕನಾಗಿ ನೇಮಿಸಿದ್ರೆ ಒಳಿತು ಎಂಬ ಸಲಹೆಗಳನ್ನಿ ನೀಡುತ್ತಿದ್ದು, ಏಕದಿನ ಹಾಗೂ ಟಿ20 ಪಂದ್ಯಗಳನ್ನ ಮುನ್ನಡೆಸಿ ರೋಹಿತ್ ಯಶಸ್ವಿಯಾಗಿದ್ದಾರೆ. ಹೀಗಾಗಿ ಏಕದಿನ ಹಾಗೂ ಟಿ20 ಮಾದರಿಗೆ ರೋಹಿತ್ ಶರ್ಮಾಗೆ ಕ್ಯಾಪ್ಟೆನ್ಸಿ ನೀಡೋದು ಬೆಸ್ಟ್ ಅಂದಿದ್ದಾರೆ.. ಟೆಸ್ಟ್ ಫಾರ್ಮೆಟ್ಗೆ ವಿರಾಟ್ ಕೊಹ್ಲಿಯನ್ನ ನಾಯಕನಾಗಿ ಮಾಡುವಂತೆ ಬಿಸಿಸಿಐಗೆ ಸಲಹೆ ನೀಡ್ತಿದ್ದಾರೆ. ಅಲ್ಲದೆ ತಂಡದಲ್ಲಿ ವಿರಾಟ್ ಕೊಹ್ಲಿಯ ಧೋರಣೆಗೆ ಬೇಸತ್ತ ಅಟಗಾರರು ರೋಹಿತ್ ಶರ್ಮಾಗೆ ನಾಯಕತ್ವಕ್ಕೆ ಒಲವು ವ್ಯಕ್ತಪಡಿಸುತ್ತಿದ್ದಾರೆ.

ವಿರಾಟ್ ಕೊಹ್ಲಿಯ ವ್ಯಕ್ತಿಗತ ಧೋರಣೆ.. ರೋಹಿತ್ ಶರ್ಮಾರ ಮೃದು ಸ್ವಭಾವದ ಧೋರಣೆಗೆ ತಂಡದಲ್ಲೇ ಪರ ವಿರೋಧ ಚರ್ಚೆ ನಡೀತಿದ್ದು, ಇದೇ ಈಗ ವಿರಾಟ್ ಹಾಗೂ ರೋಹಿತ್ ಶರ್ಮಾರ ಗುಂಪುಗಳ ನಡುವೆ ಅಂತರ್ಯದ್ಧಕ್ಕೆ ಕಾರಣವಾಗಿದೆ. ಅದೇನೇ ಆಗಲಿ ಎಲ್ಲವನ್ನು ಗೊಂದಲಗಳನ್ನ ಶೀಘ್ರವೇ ಬಗೆಹರಿಸಿಕೊಂಡು ಉತ್ತಮ ಪ್ರದರ್ಶನ ನೀಡುವತ್ತ ಟೀಮ್ ಇಂಡಿಯಾ ಗಮನ ಹರಿಸಬೇಕಿದೆ..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ