149 ವರ್ಷಗಳ ಬಳಿಕ ಗೋಚರವಾಗುತ್ತಿದೆ ಪಾರ್ಶ್ವ ಚಂದ್ರಗ್ರಹಣ; ಮಧ್ಯರಾತ್ರಿ ಗೋಚರ

ನವದೆಹಲಿ: 149 ವರ್ಷಗಳ ಬಳಿಕ ಇಂದು ಪಾರ್ಶ್ವ ಚಂದ್ರಗ್ರಹಣ ಸಂಭವಿಸುತ್ತಿದ್ದು, ಭಾರತ ಸೇರಿ ವಿಶ್ವದ ಬಹುತೇಕ ರಾಷ್ಟ್ರಗಳು ಇದನ್ನು ಕಣ್ತುಂಬಿಕೊಳ್ಳಬಹುದು.

ಈ ವರ್ಷದ ಆರಂಭದಲ್ಲಿ ಅಂದರೆ ಜ.20-21ರಂದು ಸೂಪರ್​ ಬ್ಲಡ್​​ ವೂಲ್ಫ್​ ಮೂನ್​ ಕಾಣಿಸಿತ್ತು. ಈಗ ಈ ವರ್ಷದ ಎರಡನೇ ಚಂದ್ರಗ್ರಹಣ ಇಂದು ಸಂಭವಿಸುತ್ತಿದೆ. ಇದು ಈ ವರ್ಷದ ಕೊನೆಯ ಚಂದ್ರಗ್ರಹಣವಾಗಿದೆ. ಈ ಚಂದ್ರಗ್ರಹಣ ಕೂಡ ಸೂಪರ್​ ಬ್ಲಡ್​ ವೂಲ್ಫ್​ ಮೂನ್​ ಮಾದರಿಯಲ್ಲೇ ಗೋಚರವಾಗಲಿದೆ.

ತಡರಾತ್ರಿ 1.30ಕ್ಕೆ ಗ್ರಹಣ ಆರಂಭವಾಗಲಿದೆ.  4.30ಕ್ಕೆ ಚಂದ್ರಗ್ರಹಣ ಪೂರ್ಣಗೊಳ್ಳಲಿದೆ. ಭಾರತ ಸೇರಿ ಏಷ್ಯಾ ಖಂಡ, ಯುರೋಪ್​, ಆಸ್ಟ್ರೇಲಿಯಾ ದಕ್ಷಿಣ ಅಮೆರಿಕ ಹಾಗೂ ಆಫ್ರಿಕಾ ಖಂಡದಲ್ಲಿ ಚಂದ್ರಗ್ರಹಣ ಕಾಣಿಸಲಿದೆ.

149 ವರ್ಷಗಳ ಹಿಂದೆ ಪಾರ್ಶ್ವ ಚಂದ್ರಗ್ರಹಣ ಕಾಣಿಸಿತ್ತು. ಈಗ ಮತ್ತೆ ಈ ಚಂದ್ರಗ್ರಹಣವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ದೇಶದಲ್ಲಿ ಅರುಣಾಚಲ ಪ್ರದೇಶದ ದುರ್ಗಮ ಪ್ರದೇಶಗಳಲ್ಲಿ ಮಾತ್ರ ಚಂದ್ರಗ್ರಹಣ ಕಾಣಿಸುವುದಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ