ಬೆಂಗಳೂರು, ಜು. 15- ಮೈತ್ರಿ ಸರ್ಕಾರದ ಅಳಿವು-ಉಳಿವಿನ ಅಂತಿಮ ಘಟ್ಟದ ಹೋರಾಟ ಮುಂದುವರೆದಿರುವ ಬೆನ್ನಲ್ಲೆ ಕಾಂಗ್ರೆಸ್ನ ಹಿರಿಯ ಮುಖಂಡ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ನಡೆ ಇನ್ನೂ ನಿಗೂಢವಾಗಿರುವುದು ಕಾಂಗ್ರೆಸ್ ಪಾಳೆಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ನಿನ್ನೆ ಕಾಂಗ್ರೆಸ್ ಹಿರಿಯ ಮುಖಂಡರು ಸೇರಿದಂತೆ ಅನೇಕರು ರಾಮಲಿಂಗಾರೆಡ್ಡಿಯವರ ಮನವೊಲಿಕೆಗೆ ಶತಪ್ರಯತ್ನ ನಡೆಸಿದರಾದರೂ ಎಲ್ಲರ ಮಾತುಗಳನ್ನು ಆಲಿಸಿದ ರಾಮಲಿಂಗಾರೆಡ್ಡಿ ಯಾವುದೇ ನಿರ್ಧಾರವನ್ನು ತಿಳಿಸದೆ ಸಾಗ ಹಾಕಿದರು.
ಇಂದು ಕಾಂಗ್ರೆಸ್ ಶಾಸಕಾಂಗ ಸಭೆಗೂ ಹಾಜರಾಗದೆ ತಮ್ಮ ಅಸಮಾಧಾನ ಇನ್ನೂ ತಣಿಯದಿರುವುದನ್ನು ಬಿಂಬಿಸಿದ ರಾಮಲಿಂಗಾರೆಡ್ಡಿಯವರು ಎಚ್ಎಎಲ್ ಕಡೆ ಪ್ರಯಾಣ ಬೆಳೆಸಿದ್ದು ಕಾಂಗ್ರೆಸ್ ಪಾಳಯಕ್ಕೆ ದೊಡ್ಡ ಶಾಕ್ ನೀಡಿದೆ.