ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕದ ಪೂರ್ಣ ಕಾಲೀನ ಸ್ವಯಂಸೇವಕರು ಮತ್ತು ಸಂಘಟನಾ ಕಾರ್ಯದರ್ಶಿ ಡಾ ಶ್ರೀನಿವಾಸ ರಾವ್ ಅವರು ಇನ್ನಿಲ್ಲ.

ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕದ ಪೂರ್ಣ ಕಾಲೀನ ಸ್ವಯಂಸೇವಕರು ಮತ್ತು ಸಂಘಟಿಸುವ ಕಾರ್ಯದರ್ಶಿ ಡಾ ಶ್ರೀನಿವಾಸ ರಾವ್ ಅವರು ಇನ್ನಿಲ್ಲ. ಅವರಿಗೆ 56 ವರ್ಷ ವಾಯಸ್ಸಾಗಿತ್ತು. ಶ್ರೀಯುತರು ಕ್ಯಾನ್ಸರ್ ಕಾಯಿಲೆ ಯಿಂದ ಬಳಲುತ್ತಿದ್ದರು. ಮಾರ್ಚ್ ೧೯ ರಂದು ಅವರಿಗೆ ಕಾಯಿಲೆ ಇದ್ದದ್ದು ಪತ್ತೆಯಾಗಿತ್ತು.

ಶ್ರೀಯುತರು ಪತ್ನಿ ಹಾಗೂ ಇಬ್ಬರು ಮಕ್ಕಳು ಹಾಗೂ ಅಪಾರ ಕಾರ್ಯಕರ್ತರನ್ನು ಅಗಲಿದ್ದಾರೆ.

ಅವರು ಹರಿಹರಪುರದ ಗುರುಕುಲದಲ್ಲಿ ೭ ವರ್ಷಗಳ ಕಾಲ ಆಚಾರ್ಯ ರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಭಾರತೀಯ ಸಂಕಲನ ಸಮಿತಿ, ಕರ್ನಾಟಕ ದಲ್ಲಿ ೧೧ ವರ್ಷಗಳ ಕಾಲ ವಾಲoಟೆರ್ ಆಗಿ ಸೇವೆ ಸಲ್ಲಿಸಿ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಅನೇಕ ಭೈಟಕಗಳನ್ನು ನಡೆಸಿದ್ದರು ಹಾಗೂ ಅನೇಕ ಇತಿಹಾಸದ ವಿದ್ವಾಂಸರ ಹಾಗೂ ವಿಶ್ವವಿದ್ಯಾಲಯದ ಉಪಕುಲಪತಿ ಗಳ ಸಂಪರ್ಕವನ್ನೂ ಹೊಂದಿದ್ದರು.

ನಮಗೆ ಇವರ ಅಕಾಲಿಕ ಮರಣ ಭರಿಸಲಾಗದ ನಷ್ಟವನ್ನು ಉಂಟುಮಾಡಿದೆ. ಅವರ ಸ್ಥಳವನ್ನು ಮತ್ತೊಬ್ಬರಿಂದ ತುಂಬಲು ಕಷ್ಟ ಸಾಧ್ಯ.
ನಾವು ಅವರ ಆತ್ಮಕ್ಕೆ ಶಾಂತಿಯನ್ನು ಕೋರಿ ಮೋಕ್ಷ ಪ್ರಾಪ್ತಿಯಾಗಲಿ ಯೆಂದು ಪ್ರಾರ್ಥಿಸೋಣ.

ವಂದನೆಗಳು,
ಭಾರತೀಯ ಸಂಕಲನ ಸಮಿತಿ, ಕರ್ನಾಟಕ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ