“ಸಾಲು ಮರಗಳ ತಾಯಿ ತಿಮ್ಮಕ್ಕ ನಾಟಕ”

ಥಿಯೇಟರ್ ಥೆರಪಿ (1)-1ನೆನ್ನೆ (13/ಜೂಲೈ/2019) ಹೊಸಕೋಟೆ ನಿಂಬೆಕಾಯಿಪುರದ ಜನಪದರು ಪ್ರೇಕ್ಷಾಗೃಹದಲ್ಲಿ “ಸಾಲು ಮರಗಳ ತಾಯಿ ತಿಮ್ಮಕ್ಕ ನಾಟಕ” ಅತ್ಯಂತ ಯಸಸ್ವಿಯಾಗಿ ಪ್ರದರ್ಶನ ಕಂಡಿತು.
‘ಥಿಯೇಟರ್ ಥೆರಪಿ’ ಅರ್ಪಿಸಿದ ಈ ನಾಟಕವನ್ನು ಸ್ವತಃ ತಿಮ್ಮಕ್ಕನವರು ನೋಡಿ ಭಾವುಕರಾದರು ಹಾಗೂ ನಾಟಕದ ಬಗ್ಗೆ ಖುಷಿ ವ್ಯಕ್ತಪಡಿಸಿದರು. ಜೊತೆಗೆ ಸುಮಾರು 1000 ಪ್ರೇಕ್ಷಕರು ನಾಟಕಕ್ಕೆ ವ್ಯಥೆಯಾಗದೆ ವೀಕ್ಷಿಸಿದ್ದು ವಿಶೇಷವೆನಿಸಿತು !

ತಿಮ್ಮಕ್ಕನವರ ಸಾಕು ಮಗ ಡಾ. ವನಸಿರಿ ಉಮೇಶ್ ರವರು ಸೇರಿದಂತೆ ಪೇಕ್ಷಕರೆಲ್ಲರೂ ನಾಟಕದ ರಚನೆ,ವಿನ್ಯಾಸ, ನಿರ್ದೇಶನ, ಸಂಗೀತ ಹಾಗೂ ಅಭಿನಯದ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.

ರಾಮಕೃಷ್ಣ ಬೆಳ್ತೂರು ಅವರ ನಿರ್ದೇಶನಕ್ಕೆ ಹಾಗು ಬೇಲೂರ್ ರಘುನಂದನ್ ಅವರ ಸಂಭಾಷಣೆ ಮತ್ತು ಹಾಡುಗಳ ರಚನೆಗೆ ಅಪಾರ ಮೆಚ್ಚುಗೆ ಸಿಕ್ಕಿತು.

ನಾಟಕಕ್ಕೆ ರಾಜಪ್ಪ ಕೋಲಾರ್ ಅವರ ಸಂಗೀತ ಹಾಗು ಅವರ ಮೇಳದ ತಂಡ, ಪ್ರೇಕ್ಷಕರಿಗೆ ಮನೋಲ್ಲಾಸ ನೀಡಿತು.

ಈ ಎಲ್ಲಾ ಕ್ಷಣಗಳನ್ನು ತಾಯಿ ಲೋಕೇಶ್ ಅವರು ತಮ್ಮ ಫೋಟೋಗಳಲ್ಲಿ ಸೆರೆ ಹಿಡಿದಿದ್ದಾರೆ, ದಯವಿಟ್ಟು ನೋಡಿ .

ಹಾಗೂ 30 ಸದಸ್ಯರ ಈ ತಂಡದಲ್ಲಿ ಒಂದೇ ಕುಟುಂಬವೇನೋ ಅನ್ನುವಷ್ಟು ಒಗ್ಗಟ್ಟು ಕೆಲವರನ್ನು ಆಶ್ಚರ್ಯ ಗೊಳಿಸಿತು. ಬಹುಷಃ ಈ ತಂಡದ ಶ್ರಮೆವೇ ಈ ಯಶಸ್ಸಿಗೆ ಮೂಲವೆಂದು ಥಿಯೇಟರ್ ಥೆರಪಿಯ ಸಂಘಟಕನಾಗಿ ಈ ಯಶಸ್ಸನ್ನು ಇಡೀ ತಂಡಕ್ಕೆ, ನಮ್ಮನ್ನು ಪ್ರೋತ್ಸಾಹಿಸಿದ ಪ್ರೇಕ್ಷಕರಿಗೆ ಹಾಗೂ ಕಥಾನಾಯಕಿ ತಿಮ್ಮಕ್ಕನವರಿಗೆ ಸಮರ್ಪಿಸುತ್ತೇವೆ.

ಪ್ರತಿ ಬಾರಿ ನಮ್ಮ ನಾಟಕ ನೋಡಲು ಬರುತ್ತಿರುವ ಯುವಶಕ್ತಿ ತಂಡದ ಸದಸ್ಯರಿಗೆ ವಿಶೇಷ ಧನ್ಯವಾದಗಳು.

ನಾಳೆ (16 ಜುಲೈ 2019 ) ಕೋಲಾರದ ಆದಿಮದಲ್ಲಿ ಮತ್ತೊಂದು ಪ್ರದರ್ಶನವಿದೆ ದಯವಿಟ್ಟು ಬಂದು ಹರಸಿ…

ಇಂತಿ ,
ನವೀನ್ ಕೃಷಿ
ಸಂಘಟಕರು
ಥಿಯೇಟರ್ ಥೆರಪಿ
8722939462

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ