ಬೆಂಗಳೂರು, ಜು.14- ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಸಂಸ್ಕøತಿ, ಮೌಲ್ಯಗಳು ಮತ್ತು ಪ್ರತಿಯೊಬ್ಬ ನಾಗರಿಕನ ಕರ್ತವ್ಯಗಳ ಕುರಿತು ನಿವೃತ್ತ ನ್ಯಾಯಮೂರ್ತಿ ಕರ್ನಾಟಕ ಉಚ್ಛ ನ್ಯಾಯಾಲಯ ಜಸ್ಟಿಸ್ ಎನ್.ಕುಮಾರ್ ಅರಿವು ಮೂಡಿಸಿದರು.
ಉಲ್ಲಾಳ ಉಪನಗರದ ವಿದ್ಯಾನಿಕೇತನ ಪಬ್ಲಿಕ್ಶಾಲೆಯಲ್ಲಿ ಹಮ್ಮಿಕೊಂಡಿದ್ದ 10 ನೇ ತರಗತಿ, 12 ನೇ ತರಗತಿ – ಸಿ.ಬಿ.ಎಸ್.ಇ, ಎಸ್.ಎಸ್.ಎಲ್.ಸಿ , ಮತ್ತು ಪದವಿ ಪೂರ್ವ ವಿಭಾಗದಲ್ಲಿ ಶ್ರೇಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು ಮಾತನಾಡಿದರು.
ಅಂತಿಮವಾಗಿ ಜ್ಞಾನ, ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಇವನ್ನು ಸಮ್ಮಿಲನಗೊಳಿಸಿ ತಮಗಾಗಿ ಸರ್ವವನ್ನೂ ನೀಡಿದ ಪೋಷಕರ ತ್ಯಾಗವನ್ನು ಮರೆಯದೆ ಅವರಿಗೆ ಇಳಿ ವಯಸ್ಸಿನಲ್ಲಿ ಬೇಕಾದ ಪ್ರೀತಿ, ವಾತ್ಸಲ್ಯವನ್ನು ನೀಡುವಂತೆ ಅವರು ಪ್ರೇರಣೆ ನೀಡಿದರು.
ಭಾರತೀಯ ಸಂಸ್ಕøತಿ ಹಾಗೂ ಇತಿಹಾಸದ ಮೇಲೆ ಬೆಳಕು ಚೆಲ್ಲುವುದರ ಮೂಲಕ, ಪುರಾತನ ಭಾರತದ ಪ್ರಸಿದ್ಧ ನಳಂದ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯಗಳಿಗೆ ಉನ್ನತ ಶಿಕ್ಷಣಕ್ಕಾಗಿ ಪ್ರಪಂಚದ ಮೂಲೆಮೂಲೆಗಳಿಂದ ವಿದ್ಯಾರ್ಥಿಗಳು ವಿದ್ಯೆಯನ್ನು ಅರಸುತ್ತಾ ಬರುತ್ತಿದ್ದಾರೆ ಎಂದ ಅವರು, ತಮ್ಮ ಭಾಷಣದಲ್ಲಿ ಭಾರತೀಯ ಶಿಕ್ಷಣದ ಗುಣಮಟ್ಟವನ್ನು ಕುರಿತು ಮಾತನಾಡಿದರು.
ಪುರಾತನ ಧರ್ಮ ಹಾಗೂ ಇಂದಿನ ಶಿಕ್ಷಣ ಎರಡನ್ನೂ ಸಮ ಪ್ರಮಾಣದಲ್ಲಿ ಮೌಲ್ಯಗಳ ಸಹಿತ ಜೀವನದಲ್ಲಿ ಅಳವಡಿಸಿಕೊಂಡರೆ ತಾವೂ ಸಂತೋಷವನ್ನು ಹೊಂದುವ ಮೂಲಕ ಉನ್ನತ ಸಮಾಜ ನಿರ್ಮಾಣ ಮಾಡಬಹುದು ಎಂಬ ಕಿವಿ ಮಾತು ಹೇಳಿದರು.
ನಮ್ಮ ಹೆಮ್ಮೆಯ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯ ಬಗ್ಗೆ ಅರಿವು ಮೂಡಿಸಿದ ಅವರು, ಈ ಲಾಂಛನಗಳು ನಮ್ಮದೇ ಪ್ರತಿಬಿಂಬ ಎಂಬ ಅಂಶವನ್ನು ತಿಳಿಸಿದರು. ಇವುಗಳು ನಮ್ಮ ಗೌರವದ ಪ್ರತೀಕವಾಗಿದ್ದು ನಾವು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಇದನ್ನು ಗೌರವಿಸಬೇಕೆಂದು ತಿಳಿಸಿದರು.
ಶಾಲೆಯ ಅಧ್ಯಕ್ಷ ರಾಜಗೋಪಾಲ್, ಪ್ರಾಂಶುಪಾಲ ವಿಜಯಕೃಷ್ಣ ರಾಜಗೋಪಾಲ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ವಿದ್ಯಾರ್ಥಿನಿ ಪೃಥ್ವಿ ಪಿ.ಶಣೈ ಅವರು 10 ನೇ ತರಗತಿ , ಸಿ.ಬಿ.ಎಸ್.ಇ ವಿಭಾಗದಲ್ಲಿ ಬೆಂಗಳೂರು ವಲಯದಲ್ಲಿ ಪ್ರಥಮ ರ್ಯಾಂಕ್ ಹಾಗೂ ರಾಷ್ಟ್ರಮಟ್ಟದಲ್ಲಿ ಮೂರನೇ ರ್ಯಾಂಕ್ ಪಡೆದು ಶಾಲೆಗೆ, ಪೋಷಕರಿಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.