ಬೆಂಗಳೂರು, ಜು.13-ಎಂಟಿಬಿ ನಾಗರಾಜ್ ಅವರ ಮನವೊಲಿಕೆ ಮಾಡಿದ್ದೇವೆ. ಅವರು ರಾಜೀನಾಮೆಯನ್ನು ಹಿಂಪಡೆಯಲಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟಿಬಿ ಅವರ ಮನವೊಲಿಸಿದ್ದು, ಅವರನ್ನು ಈಗ ಸಿದ್ದರಾಮಯ್ಯ ನಿವಾಸಕ್ಕೆ ಕರೆತಂದಿದ್ದೇವೆ. ಇವರನ್ನು ಸಿದ್ದರಾಮಯ್ಯ ಅವರು ಕರೆ ತರುವಂತೆ ತಿಳಿಸಿದ್ದರು. ಹಾಗಾಗಿ ಕರೆದುಕೊಂಡು ಬಂದಿದ್ದೇವೆ ಎಂದರು.
ಎಲ್ಲರ ಮನವೊಲಿಕೆ ಮಾಡಲೆಂದೇ ನಾವು ಬಂದಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.