ಬಹುಮತ ಸಾಭೀತಿಗೆ ಸ್ವಪ್ರೇರಣೆಯಿಂದ ಸಮಯ ಕೋರಿದ ಸಿಎಂ; ಬಿಜೆಪಿ ಸೇರಿದಂತೆ ಎಲ್ಲರಿಗೂ ಶಾಕ್ ನೀಡಿದ ಹೆಚ್​ಡಿಕೆ

ಬೆಂಗಳೂರು: ಮಳೆಗಾಲದ ಮೊದಲ ವಿಧಾನಮಂಡಲ ಅಧಿವೇಶನ ಇಂದು ಆರಂಭವಾಗಿದೆ. ಅಧಿವೇಶನದಲ್ಲಿ ಮೊದಲು ಮಾತು ಆರಂಭಿಸಿದ್ದ ಸಿಎಂ ಕುಮಾರಸ್ವಾಮಿ ಸಭಾಧ್ಯಕ್ಷರು ನನಗೆ ಬಹುಮತ ಸಾಬೀತಿಗೆ ಸಮಯ ಕೊಡಬೇಕು ಎಂದು ಸ್ವತಃ ಕೇಳುವ ಮೂಲಕ ವಿರೋಧ ಪಕ್ಷಕ್ಕೆ ಶಾಕ್ ನೀಡಿದ್ದಾರೆ.

ರಾಜ್ಯ ರಾಜಕೀಯ ಪ್ರಸ್ತುತ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂದು ಸುಪ್ರೀಂ ಕೋರ್ಟ್ ಯತಾಸ್ಥಿತಿ ಕಾಪಾಡುವಂತೆ ಸೂಚನೆ ನೀಡಿದ ಹಿನ್ನೆಲೆ ವಿಪ್ ತೂಗುಗತ್ತಿಯಿಂದ ಅತೃಪ್ತರು ಬಚಾವಾಗಿದ್ದಾರೆ. ಹೀಗಾಗಿ ಬಿಜೆಪಿ ಆಡಳಿತ ಪಕ್ಷದ ಬಹುಮತ ಸಾಬೀತುಪಡಿಸಲು ಆಗ್ರಹಿಸಲಿದ್ದಾರೆ ಎಂದು ಊಹಿಸಲಾಗಿತ್ತು. ಆದರೆ, ಬಿಜೆಪಿ ನಿರೀಕ್ಷೆಗೂ ಮೀರಿ ಸಿಎಂ ಕುಮಾರಸ್ವಾಮಿ ಇಂದು ಎಲ್ಲರಿಗೂ ಅಚ್ಚರಿಗೆ ಮೂಡಿಸಿದ್ದಾರೆ.

ಸದನದಲ್ಲಿ ಸಭಾಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, “ರಾಜ್ಯದಲ್ಲಿ ಕೆಲವು ಶಾಸಕರು ರಾಜೀನಾಮೆ ನೀಡುವ ಮೂಲಕ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಈ ಸ್ಥಾನವನ್ನು ದುರುಪಯೋಗ ಪಡಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಸದನದ ಬೆಂಬಲ ಇದ್ದಾಗ ಮಾತ್ರ ನಾನು ಈ ಸ್ಥಾನದಲ್ಲಿ ಮುಂದುವರೆಯಲು ಸಾಧ್ಯ. ಹೀಗಾಗಿ ನಾನು ಸ್ವಪ್ರೇರಣೆಯಿಂದ ಬಹುಮತ ಸಾಬೀತು ಪಡಿಸಲು ಇಚ್ಚಿಸುತ್ತೇನೆ. ಹೀಗಾಗಿ ಸಭಾಧ್ಯಕ್ಷರು ಇದಕ್ಕೆ ಒಂದು ಸಮಯವನ್ನು ನಿಗದಿಪಡಿಸಬೇಕು,” ಎಂದು ಕೇಳಿಕೊಂಡಿದ್ದಾರೆ.
ಸಿಎಂ ಕುಮಾರಸ್ವಾಮಿಯವರ ಈ ನಡೆ ಸಾಮಾನ್ಯವಾಗಿ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಆದರೆ, ಸಿಎಂ ಅವರ ಈ ಮಾತು ಮೈತ್ರಿ ನಾಯಕರು ಬೇರೆ ರಣತಂತ್ರಕ್ಕೆ ಮುಂದಾಗಿದ್ದಾರಾ? ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

ಸರ್ಕಾರ ಹಾಗೂ ಅತೃಪ್ತರ ರಾಜೀನಾಮೆ ವಿಚಾರಣೆಯನ್ನು 16ನೇ ತಾರೀಖಿನವರೆಗೆ ಸುಪ್ರೀಂ ಕೋರ್ಟ್ ಯತಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ. ಹೀಗಾಗಿ ಆ ನಂತರ ಬಹುಮತಕ್ಕೆ ಅವಕಾಶ ಕೊಡುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಮೈತ್ರಿ ನಾಯಕರು ಅತೃಪ್ತರ ಮನವೊಲಿಕೆ ಮಾಡುವ ಸಾಧ್ಯತೆ ಇದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ