ಬೆಂಗಳೂರು, ಜು.9- ವ್ಯಾಕರಣ ಮೇಷ್ಟ್ರು ದಾರಿ ತಪ್ಪುತ್ತಿದ್ದಾರೆ. ಬೇರೆಯವರಿಗೂ ಸ್ವಲ್ಪ ಕಾನೂನು ಗೊತ್ತಿದೆ….. ಹೀಗೆ ಸಿದ್ದು ಎಚ್ಚರಿಕೆಯನ್ನು ಬಿಜೆಪಿ ಮುಖಂಡ ಹಾಗೂ ಶಾಸಕ ಸುರೇಶ್ಕುಮಾರ್ ಇಂದಿಲ್ಲಿ ಟೀಕಿಸಿದ್ದಾರೆ.
ಸಾಮಾಜಿಕ ಜಾಲ ತಾಣದಲ್ಲಿ ಕಾಂಗ್ರೆಸ್ನ ಶಾಸಕಾಂಗ ಸಭೆ ಹಾಗೂ ನಂತರ ನಡೆದ ಸುದ್ದಿಗೋಷ್ಠಿಯ ಕುರಿತು ಪ್ರತಿಕ್ರಿಯೆ ನೀಡಿರುವ ಸುರೇಶ್ಕುಮಾರ್ 15 ಮಂದಿ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಹೊರತು ಪಕ್ಷಕ್ಕಲ್ಲ.
ಯಾವುದೇ ಕಾರಣಕ್ಕೂ ಪಕ್ಷಾಂತರ ನಿಷೇಧ ಕಾಯಿದೆ ಉಲ್ಲಂಘನೆಯಾಗುವುದಿಲ್ಲ. ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಮಾಜಿ ಕಾನೂನು ಸಚಿವರು ಹಾಗೂ ವಕೀಲರೂ ಆಗಿರುವ ಸುರೇಶ್ಕುಮಾರ್ ತಿಳಿಸಿದ್ದಾರೆ.