ಕೋಲ್ಕತ್ತಾ, ಜು.7- ಪಶ್ಚಿಮ ಬಂಗಾಳ ಸಾಧಿಪುರದಲ್ಲಿ ಸಂಭವಿಸುತ್ತಿದ್ದ ಅನಾಹುತವೊಂದು ತಪ್ಪಿದಂತಾಗಿದೆ.
ಕಂಟೇನರ್ವೊಂದರಲ್ಲಿ ದುಷ್ಕರ್ಮಿಗಳು ಬಚ್ಚಿಟ್ಟಿದ್ದ 27 ನಾಡಬಾಂಬ್ಗಳನ್ನು ಬಾಂಬ್ ನಿಷ್ಕ್ರಿಯ ದಳದಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಾಧಿಪುರದ ಜಾಮ್ ಥೋಲಿಯಾ ಎಂಬಲ್ಲಿ ಬಿಜೆಪಿ (ಭಾರತೀಯ ಜನತಾ ಪಾರ್ಟಿ) ಕಾರ್ಯಾಲಯದ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ ಬೆನ್ನಲ್ಲೆ ನಾಡಬಾಂಬ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 10 ಜನರನ್ನು ಬಂಧಿಸಲಾಗಿದೆ.
ವಿಚಾರಣೆ ವೇಳೆ ಲಭಿಸಿದ ಮಾಹಿತಿ ಮೇರೆಗೆ ಇನ್ನೂ ಕೆಲವು ಸ್ಥಳಗಳಲ್ಲಿದ್ದ ನಾಡಬಾಂಬ್ಗಳನ್ನು ವಶಪಡಿಸಿಕೊಳ್ಳಲಾಗಿದೆ.