ಬೆಂಗಳೂರು, ಜು.6- ರಾಜ್ಯ ರಾಜಕಾರಣದ ಹೈಡ್ರಾಮ
ರಾಜಭನದ ಮೆಟ್ಟಿಲೇರುವ ಮೂಲಕ ಸಮ್ಮಿಶ್ರ ಸರ್ಕಾರದ ಭವಿಷ್ಯ ಅಂತಿಮ ಘಟ್ಟ ತಲುಪಿದೆ.
ಈವರೆಗಿ ರಾಜಕೀಯ ಬೆಳವಣಿಗೆಯಲ್ಲಿ ಒಟ್ಟು 13 ಮಂದಿ ಶಾಸಕರು ರಾಜೀನಾಮೆ ನೀಡದಂತಾಗಿದ್ದು, ವಿಧಾನಸಭೆಯ ಸಂಖ್ಯಾಬಲ 224 ರಿಂದ 211ಕ್ಕೆ ಕುಸಿದಂತಾಗಿದೆ.
ರಾಜೀನಾಮೆ ಪರ್ವದಲ್ಲಿ ಈ ಮೊದಲು ಶಾಸಕರಾದ ಆನಂದ್ಸಿಂಗ್ ಮೊದಲು ರಾಜೀನಾಮೆ ನೀಡಿದ್ದರು. ರಮೇಶ್ಜಾರಕಿಹೊಳಿ ಅದೇ ದಿನ ಪ್ಯಾಕ್ಸ್ ಮೂಲಕ ರಾಜೀನಾಮೆ ನೀಡಿದ್ದರಾದರೂ ಮಾನ್ಯಮಾಡುವಂತಿರಲಿಲ್ಲ.
ಈ ದಿನದ ದಿಢೀರ್ ಬೆಳವಣಿಗೆಯಲ್ಲಿ ಖುದ್ದಾಗಿ ಸ್ಪೀಕರ್ ಕಚೇರಿಗೆ ಆಗಮಿಸಿದ ರಮೇಶ್ಜಾರಕಿಹೊಳಿ, ಪ್ರತಾಪ್ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಮಹೇಶ್ ಕುಮಟಳ್ಳಿ, ಜೆಡಿಎಸ್ ಶಾಸಕರಾದ ಗೋಪಾಲಯ್ಯ, ಎಚ್.ವಿಶ್ವನಾಥ್, ನಾರಾಯಣಗೌಡ ಅವರುಗಳು ರಾಜೀನಾಮೆ ನೀಡಿದ್ದು, ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆಯ ಮಾಹಿತಿ ನೀಡಿದ್ದು, ಒಂದು ವೇಳೆ ಸ್ಪೀಕರ್ ಅವರು ರಾಜೀನಾಮೆ ಅಂಗೀಕರಿಸದೇ ಇದ್ದರೆ ಸಮ್ಮಿಶ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ನ ಇತರೆ ಶಾಸಕರಾದ ಬೈರತಿ ಬಸವರಾಜ್, ಮುನಿರತ್ನ, ಎಸ್.ಟಿ.ಸೋಮಶೇಖರ್ ಅವರು ಅತೃಪ್ತರನ್ನು ಕರೆದುಕೊಂಡು ಹೋಗಲು ಬಂದಿರುವುದಾಗಿ ಹೇಳಿ ಆಗಮಿಸಿದರಾದರೂ ಅವರೂ ಕೂಡ ವಿಧಾನಸಭೆ ಕಾರ್ಯದರ್ಶಿಯವರಿಗೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ ಕೂಡ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡುವವರ ಪಟ್ಟಿಯಲ್ಲಿ ರಾಮಲಿಂಗಾರೆಡ್ಡ ಅವರ ಪುತ್ರಿಯಾಗಿರುವ ಶಾಸಕ ಸೌಮ್ಯಾರೆಡ್ಡಿ, ಅಂಜಲಿ ನಿಂಬಾಳ್ಕರ್, ಬಂಗಾರಪೇಟೆಯ ನಾರಾಯಣಸ್ವಾಮಿ, ಕೋಲಾರದ ಶ್ರೀನಿವಾಸ್ಗೌಡ ಅವರೂ ಸೇರಿದ್ದಾರೆ.
ಈಗಾಲೇ 13 ಮಂದಿ ಶಾಸಕರು ರಾಜೀನಾಮೆ ನೀಡಿದ್ದು, ಇನ್ನೂ ಮೂರು ಮಂದಿ ರಾಜೀನಾಮೆ ಕೊಟ್ಟಿದ್ದೇ ಆದರೆ ವಿಧಾನಸಭೆಯ ಸಂಖ್ಯಾಬಲ 208ಕ್ಕೆ ಕುಸಿಯಲಿದೆ.
ಈ ಲೆಕ್ಕಾಚಾರವೇ ಪಕ್ಕ ಆದರೆ ಹೊಸ ಸರ್ಕಾರ ರಚಿಸಲು 105 ಮಂದಿ ಶಾಸಕರ ಸಂಖ್ಯೆ ಸಾಕಾಗಲಿದೆ. ಈಗಾಗಲೇ ಬಿಜೆಪಿ 105 ಮಂದಿ ಶಾಸಕರನ್ನು ಹೊಂದಿದ್ದು, ಪಕ್ಷೇತರರಾದ ಮುಳಬಾಗಿಲಿನ ನಾಗೇಶ್ ಮತ್ತು ರಾಣೆಬೆನ್ನೂರಿನ ಶಂಕರ್ ಅವರು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ.
ಕೊಳ್ಳೆಗಾಲದ ಬಿಎಸ್ಪಿಯ ಮಹೇಶ್ ಕೂಡ ಅಂತಿಮ ಕ್ಷಣದಲ್ಲಿ ಬಿಜೆಪಿ ನೀಡಿದರೂ ಆಶ್ಚರ್ಯ ಪಡಬೇಕಿಲ್ಲ. ಅಂತಹ ಸನ್ನಿವೇಶದಲ್ಲಿ ಬಿಜೆಪಿಯ ಸಂಖ್ಯಾ ಬಲ 108ರಷ್ಟಾಗಲಿದ್ದು, ಸುಲಲಿತವಾದ ಸರ್ಕಾರ ರಚಿಸಲು ಸರಳ ಬಹುಮತ ಲಭಿಸಿದಂತಾಗುತ್ತದೆ.
ಇಂದಿನ ಬೆಳವಣಿಗೆಯಲ್ಲಿ ರಾಮಲಿಂಗಾರೆಡ್ಡಿ, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಮುನಿರತ್ನ ಅವರನ್ನು ಸಚಿವ ಡಿ.ಕೆ.ಶಿವಕುಮಾರ್ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ. 13 ಮಂದಿ ಶಾಸಕರ ಪೈಕಿ ಈ ನಾಲ್ಕು ಮಂದಿ ಮರಳಿ ಕಾಂಗ್ರೆಸ್ ವಾಪಸಾದರೂ ಇನ್ನೂ 9 ಮಂದಿ ರಾಜೀನಾಮೆಯಿಂದ ರಾಜಕೀಯ ಗೊಂದಲ ಗೂಡಾಗಲಿದೆ.
ರಾಜ್ಯಪಾಲರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಹುಮತ ಸಾಬೀತು ಪಡಿಸಲು ಸೂಚಿಸಿದರೆ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಲಿದೆ. ಈ ಎಲ್ಲದಂಕ್ಕಿಂತ ಅಪಾಯಕಾರಿ ಸನ್ನಿವೇಶ ಎಂದರೆ ರಾಜಕೀಯ ಮೇಳಾಟಗಳು, ಕುದುರೆ ವ್ಯಾಪಾರ ಎಲ್ಲವನ್ನೂ ಪರಿಗಣಿಸಿ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆ ಶಿಫಾರಸು ಮಾಡುವ ಅವಕಾಶಗಳಿವೆ.
ಬೆಂಗಳೂರು, ಜು.6- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದುಹೇಳುತ್ತಲೇ ಕಾಂಗ್ರೆಸ್ನ ನಾಯಕರು, ಸಚಿವರು ಕುಂಭಕರ್ಣ ನಿದ್ರೆಯಲ್ಲೇ ಕಾಲ ಕಳೆಯುತ್ತಿರುವುದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.
ಒಟ್ಟು 12 ಮಂದಿ ಶಾಸಕರು ರಾಜೀನಾಮೆ ಸಲುವಾಗಿ ಸ್ಪೀಕರ್ ಕಚೇರಿ ಆಗಮಿಸಿದರೂ ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಳ್ಳಲಿಲ್ಲ. ಸಚಿವ ಡಿ.ಕೆ.ಶಿವಕುಮಾರ್ ಮಾತ್ರ ಧೈರ್ಯ ಮಾಡಿ ಸ್ಪೀಕರ್ Pಚೇರಿಗೆ ಆಗಮಿಸಿ ಅತೃಪ್ತರ ಮನವೊಲಿಸಲು ಪ್ರಯತ್ನ ಪಟ್ಟರು. ಉಳಿದಂತೆ ಉಪಮುಖ್ಯಮಂತ್ರಿ ಪರಮೇಶ್ವರಾಗಲಿ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯರಾಗಲಿ, ಜೆಡಿಎಸ್, ಕಾಂಗ್ರೆಸ್ನ ಯಾವ ಸಚಿವರೂ ಕೂಡ ವಿಧಾನಸೌಧದತ್ತ ತಲೆ ಹಾಕಲಿಲ್ಲ.
ಈ ಮೊದಲೇ ಸರ್ಕಾರ ಇದ್ದರೆ ಇರಲಿ ಹೋಗಲಿ ಎಂಬ ಧೋರಣೆ ಅಂಟಿಕೊಂಡಿದ್ದ ಕಾಂಗ್ರೆಸ್ಗೆ ಈ ಹೊಸ ಬೆಳವಣಿಗೆಯಿಂದ ಮತ್ತಷ್ಟು ಗೊಂದಲ ಸೃಷ್ಟಿಯಾದಂತಾಗಿದೆ.
ಬಿಜೆಪಿ ತೆರೆಮರೆಯಲ್ಲಿ ಆಪರೇಷನ್ ಕಮಲ ನಡೆಸುತ್ತ ಸರ್ಕಾರ ಪತನಕ್ಕೆ ಮುಹೂರ್ತ ನಿಗದಿಪಡಿಸಿದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಆಮೇರಿಕ ಪ್ರವಾಸದಲ್ಲಿದ್ದರೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಜ್ಞಾತ ಸ್ಥಳಕ್ಕೆ ತೆರಳಿ ತಟಸ್ಥ ಧೊರಣೆ ಅನುಸರಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಕಾಂಗ್ರೆಸ್ ನಾಯಕರು ಸರ್ಕಾರ ಪತನವಾಗಲೇ ಎಂದು ಕಾಯುವಂತಿರುವಂತಿದೆ.
ಬೆಂಗಳೂರು, ಜು.6- ಜೆಡಿಎಸ್-ಕಾಂಗ್ರೆಸ್ನ 11 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಸ್ಪೀಕರ್ ರಾಜೀನಾಮೆ ಕೊಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡಿದ ಅಷ್ಟೂ ಮಂದಿ ಶಾಸಕರಿಗೆ ಅಕ್ಲಾಜ್ಮೆಂಟ್ (ರಶೀದಿ) ಕೊಡುವಂತೆ ನಮ್ಮ ಕಚೇರಿ ಸಿಬ್ಬಂದಿಗೆ ತಿಳಿಸಿದ್ದೇನೆ ಎಂದರು.
ನನ್ನನ್ನು ಭೇಟಿ ಮಾಡಲು ಯಾರೂ ಪೂರ್ವಾನುಮತಿ ಪಡೆದಿರಲಿಲ್ಲ. ರಾಜೀನಾಮೆ ಕೊಡುವುದಾಗಿಯೂ ಹೇಳಿರಲಿಲ್ಲ. ನನ್ನ ಮಗಳು ಇಂದು ಬೆಳಗ್ಗೆ ಅಮೆರಿಕಾದಿಂದ ಬರುವುದಿತ್ತು. ಆಕೆಯನ್ನು ರಿಸೀವ್ಮಾಡಿಕೊಳ್ಳು ನಾನು ತೆರಳಿದ್ದೆ ಎಂದು ಹೇಳಿದರು.
ನಾನು ಮಂಗಳವಾರದವೆಗೂ ಕಚೇರಿಗೆ ಹೋಗುವುದಿಲ್ಲ ಎಂದು ಸ್ಪೀಕರ್ ಇದೇ ವೇಳೆ ಸ್ಪಷ್ಟಪಡಿಸಿದರು.