* ದೇಶದ ಪ್ರಥಮ ಮಹಿಳಾ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಪೂರ್ಣ ಪ್ರಮಾಣದ ಬಜೆಟ್ ಮಂಡನೆ
* ಬಜೆಟ್ ಸೂಟ್ಕೇಸ್ ಸಂಸ್ಕøತಿಗೆ ತಿಲಾಂಜಲಿ
* ಸಂಪ್ರದಾಯ ಬದಿಗೊತ್ತಿ ಕೆಂಪು ಚೀಲದಲ್ಲಿ ಬಜೆಟ್ ದಾಖಲೆಪತ್ರಗಳನ್ನು ಸಂಸತ್ಗೆ ಒಯ್ದ ವಿತ್ತ ಸಚಿವರು.
* ಲೋಕಸಭಾ ಚುನಾವಣಾ ಫಲಿತಾಂಶವು ಉಜ್ವಲ ಮತ್ತು ಸದೃಢ ಭಾರತದ ಭರವಸೆಯ ಪ್ರತೀಕ
* ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಥಮ ಅವಧಿಯು ಸಾಧನೆಯ ಸರ್ಕಾರ ಎಂಬುದು ಸಾಬೀತಾಗಿದೆ
* ಸುಧಾರಣೆ, ಸಾಮಥ್ರ್ಯ ಸಾಬೀತು ಮತ್ತು ಪರಿವರ್ತನೆ ಕೇಂದ್ರ ಸರ್ಕಾರದ ಗುರಿ
* ಐದು ವರ್ಷದಲ್ಲಿ ಆಹಾರ ಭದ್ರತೆ ವೆಚ್ಚವನ್ನು ದುಪ್ಪಟ್ಟುಗೊಳಿಸಲಾಗಿದೆ.
* ದೇಶದ ಆರ್ಥಿಕ ಬೆಳವಣಿಗೆ ಹಾಗೂ ಭದ್ರತೆ ಮತ್ತು ಸುರಕ್ಷತೆಗೆ ಪ್ರಥಮಾಧ್ಯತೆ
* ಜನರ ಹಿತರಕ್ಷಣೆಗೆ ಬದ್ದ, ಅಧಿಕಾರಶಾಹಿಗಳಿಗೆ ಕಡಿವಾಣ.
* ಮುಂದಿನ ಕೆಲವು ವರ್ಷಗಳಲ್ಲಿ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆ ಸಾಧಿಸುವ ಹೆಗ್ಗುರಿ.
* ಮೂಲ ಸೌಕರ್ಯಾಭಿವೃದ್ದಿ ಮತ್ತು ಡಿಜಿಟಲ್ ಆರ್ಥಿಕ ಪ್ರಗತಿಗೆ ಬಂಡವಾಳ.
* ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಲ್ಲಿ ಉದ್ಯೋಗಿ ಸೃಷ್ಟಿಗೆ ಆದ್ಯತೆ.
* ವಿಶೇಷ ಉದ್ದೇಶ ವಾಹನಗಳ (ಎಸ್ಪಿಗಳು) ಮೂಲಕ ಸಬ್ಅರ್ಬನ್ ರೈಲುಗಳಲ್ಲಿ ಬಂಡವಾಳ ಹೂಡಿಕೆಗೆ ಉತ್ತೇಜನ.
* ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದೊಂದಿಗೆ ಮೆಟ್ರೋ ರೈಲುಗಳ ಜಾಲ ವಿಸ್ತರಣೆಗೆ ಕ್ರಮ.
* ದೇಶದ ಎಲ್ಲ ರೈಲು ನಿಲ್ದಾಣಗಳ ಆಧುನೀಕರಣ ಮತ್ತು ಮೇಲ್ದರ್ಜೆ ಕಾರ್ಯಕ್ರಮಗಳಿಗೆ ಈ ವರ್ಷ ಚಾಲನೆ.
* ಭಾರತ ಉನ್ನತ ಶಿಕ್ಷಣ ಆಯೋಗ ರಚನೆಗಾಗಿ ಕರಡು ಶಾಸನ ಮಂಡನೆ.
* ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗಾಗಿ 400 ಕೋಟಿ ರೂ.ಗಳು ಮೀಸಲು.
* ಭಾರತಕ್ಕೆ ಅಂತಾರಾಷ್ಟ್ರೀಯ ಶೈಕ್ಷಣಿಕ ತಾಣವಾಗುವ ಅಗಾದ ಸಾಮಥ್ರ್ಯವಿದ್ದು, ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿ ವ್ಯಾಸಂಗ ಮಾಡಲು ಉತ್ತೇಜನ.
* ಖೆಲೋ ಇಂಡಿಯಾ ಯೋಜನೆ ಅಡಿ ರಾಷ್ಟ್ರೀಯ ಮಂಡಳಿ ಸ್ಥಾಪನೆ ಪ್ರಸ್ತಾಪ.
* ಪ್ರಧಾನಮಂತ್ರಿ ಕರ್ಮಯೋಗಿ ಮನ್ಧನ್ ಯೋಜನೆ ಅಡಿ ವಾರ್ಷಿಕ 1.5 ಕೋಟಿ ರೂ.ಗಳಿಗಿಂತಲೂ ಕಡಿಮೆ ವಹಿವಾಟು ಹೊಂದಿರುವ ಸುಮಾರು 3 ಕೋಟಿ ಚಿಲ್ಲರೆ ವರ್ತಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ ಯೋಜನೆ ವಿಸ್ತರಣೆ.
* ನವೋದ್ಯಮಿಗಳಿಗಾಗಿ ವಿಶೇಷವಾಗಿ ಟೆಲಿಷನ್ ಚಾನೆಲ್ ಆರಂಭಿಸಲು ಸರ್ಕಾರ ಪ್ರಸ್ತಾವನೆ.
*ಕಾರ್ಮಿಕರ ಕೊರತೆ ನಿಭಾಯಿಸಲು ಕೇಂದ್ರ ಸರ್ಕಾರ ಅನ್ವೇಷಣಾತ್ಮಕ ಯೋಜನೆ.
* ಕೃತಕ ಬುದ್ದಿಮತ್ತೆ(ಎಐ), ರೋಬೊಟಿಕ್ಸ್ ಮತ್ತು 3-ಡಿ ಪ್ರಿಂಟಿಂಗ್ ಕ್ಷೇತ್ರದಲ್ಲಿ ಹೊಸ ತಲೆಮಾರಿನ ಕೌಶಲ್ಯ ತರಬೇತಿ.
* ಕೇಂದ್ರ ಸರ್ಕಾರದ ನವೋದ್ಯಮ ಯೋಜನೆಯಿಂದಾಗಿ ಎರಡು ವರ್ಷಗಳಲ್ಲಿ 300ಕ್ಕೂ ಹೆಚ್ಚು ಯಶಸ್ವಿ ಉದ್ಯಮಿಗಳ ಹೊರಹೊಮ್ಮಿದ್ದಾರೆ.
* 35 ಕೋಟಿ ಎಲ್ಇಡಿ ಬಲ್ಬ್ಗಳ ವಿತರಣೆಯಿಂದಾಗಿ ಸರ್ಕಾರಕ್ಕೆ ವಾರ್ಷಿಕವಾಗಿ 18,341 ಕೋಟಿ ರೂ.ಗಳ ಉಳಿತಾಯ.
* ದೇಶದ ಅಭಿವೃದ್ದಿಯಲ್ಲಿ ಮಹಿಳೆಯರ ಸಹಭಾಗಿತ್ವಕ್ಕೆ ಉತ್ತೇಜನ ನೀಡಲು ಮತ್ತು ಅನುವು ಮಾಡಿಕೊಡಲು ಮೌಲ್ಯಮಾಪನ ಮತ್ತು ಸಲಹೆಗಳಿಗಾಗಿ ಸಮಿತಿ ರಚನೆ ಪ್ರಸ್ತಾವನೆ.
* ದೇಶದಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಮತ್ತು ಹಣಕಾಸು ನೆರವು ಪೂರೈಸಲು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸಲು ಪ್ರಸ್ತಾವನೆ.
*ಭಾರತಕ್ಕೆ ಬಂದ ನಂತರ ಸರಳ ವಿಧಾನಗಳ ಮೂಲಕ ಅನಿವಾಸಿ ಭಾರತೀಯರಿಗೆ ಆಧಾರ್ ಕಾರ್ಡ್ಗಳ ವಿತರಣೆ.
* ದೇಶದ ಎಲ್ಲ ಜಿಲ್ಲೆಗಳಲ್ಲೂ ಸ್ವ-ಸಹಾಯ ಗುಂಪುಗಳ(ಎಸ್ಎಚ್ಜಿ) ವಿಸ್ತರಣೆ.
* ಮುದ್ರಾ ಯೋಜನೆ ಅಡಿ ಪ್ರತಿ ಎಸ್ಎಚ್ಜಿಯಲ್ಲಿನ ಓರ್ವ ಮಹಿಳೆಗೆ 1 ಲಕ್ಷ ರೂ.ಗಳವರೆಗೆ ಸಾಲ ನೀಡಿಕೆ.
* ಜಾಗತಿಕ ಮಾರುಕಟ್ಟೆಯಲ್ಲಿ ಸಂಪ್ರದಾಯಿಕ ಕುಶಲಕರ್ಮಿಗಲೂ ಮತ್ತು ಸೃಜತಾತ್ಮಕ ವ್ಯಕ್ತಿಗಳಿಗಾಗಿ ನೆರವು ನೀಡಲು ಹೊಸ ಅಭಿಯಾನ ಯೋಜನೆ ಆರಂಭ.
* ಭಾರತದಲ್ಲಿ ದೇಶ ವಿದೇಶಗಳ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸಲು ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು 17 ಹೆಗ್ಗುರುತು ತಾಣಗಳ ನಿರ್ಮಾಣ.
* ಬ್ಯಾಂಕ್ಗಳಲ್ಲಿ ಸಾಲ ವಸೂಲಾತಿಯನ್ನು ಚುರುಕುಗೊಳಿಸಲಾಗಿದ್ದು, ಕಳೆದ ವರ್ಷ ಎನ್ಪಿಎ (ವಸೂಲಾಗದ ಸಾಲ) 1 ಲಕ್ಷ ಕೋಟಿ ರೂ.ಗಳಷ್ಟು ಇಳಿಕೆಯಾಗಿದೆ.
* ಸಾಲ ವಿಸ್ತರಣೆಗೆ ಉತ್ತೇಜನ ನೀಡಲು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 70,000 ಕೋಟಿ ರೂ. ಬಂಡವಾಳ ಒದಗಿಸಲಾಗುವುದು.
* ಬ್ಯಾಂಕ್ ಅಕೌಂಟ್ದಾರರ ಗಮನಕ್ಕೆ ಬರದಂತೆ ನಗದು ಠೇವಣಿ ಇಡುವ ಅಕ್ರಮಗಳನ್ನು ತಡೆಗಟ್ಟಲು ಕಠಿಣ ಕ್ರಮ.
* ಮೂಲಸೌಕರ್ಯಾಭಿವೃದ್ದಿಗಾಗಿ ಹಣಕಾಸು ನೀಡಿಕೆ ಕುರಿತು ಶಿಫಾರಸುಗಳನ್ನು ಮಾಡಲು ತಜ್ಞರ ಸಮಿತಿ ರಚನೆ.
* ಪ್ರಮುಖ ಖಾಸಗಿ ಸಂಸ್ಥೆಗಳ ಷೇರು ಕ್ರಯಕ್ಕೆ ಕ್ರಮ.
* ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಖಾಸಗೀಕರಣಕ್ಕೆ ಕ್ರಮ.
* ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 1.05 ಕೋಟಿ ರೂ.ಗಳ ಷೇರು ಕ್ರಯ ಗುರಿ.
* ತೆರಿಗೆ ಆಡಳಿತ ಸರಳೀಕರಣ ಮತ್ತು ಪಾರದರ್ಶಕತೆಗೆ ಒತ್ತು.
* ಭಾರತದಲ್ಲಿ ತಯಾರಾಗದ ರಕ್ಷಣಾ ಸಾಮಗ್ರಿಗಳು ಹೊರ ದೇಶದಿಂದ ಆಮದು.
* ಆಟೋಮೊಬೈಲ್ ಬಿಡಿಭಾಗಗಳು, ಆಪ್ಟಿಕಲ್ ಫೈಬರ್, ಡಿಜಿಟಲ್ ಕ್ಯಾಮೆರಾ, ಗೋಡಂಬಿ, ಕೃತಕ ರಬ್ಬರ್ ಮತ್ತು ಫೆÇ್ರೀ ಕಸ್ಟಮ್ ಸುಂಕ ಹೆಚ್ಚಳ.
* ನಿರ್ದಿಷ್ಟ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಆಮದು ಸುಂಕಕ್ಕೆ ವಿನಾಯಿತಿ.
* ವಿದ್ಯುತ್ ವಾಹನಗಳ ಕೆಲವು ಬಿಡಿ ಭಾಗಗಳ ಸೀಮಾಸುಂಕ ರದ್ದು.
* ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸೆಸ್ ದರ 1 ರೂ. ಹೆಚ್ಚಳ.
*ಚಿನ್ನದ ಮೇಲಿನ ಕಸ್ಟಮ್ ಡ್ಯೂಟಿ ಶೇ.3.5ರಷ್ಟು ಹೆಚ್ಚಳ.
* ತಂಬಾಕು ಉತ್ಪನ್ನಗಳ ಮೇಲೆ ಅಧಿಕ ತೆರಿಗೆ.
* ಕಳೆದ ವರ್ಷ ವಿತ್ತೀಯ ಕೊರತೆ ಶೇ.1ರಷ್ಟು ಕಡಿಮೆಯಾಗಿದೆ.
* ಬಿಲ್ಗಳ ಪಾವತಿಗಾಗಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ(ಎಂಎಸ್ಎಂಇ) ಅನುಕೂಲಕ್ಕಾಗಿ ಪಾವತಿ ವೇದಿಕೆ ಸೃಷ್ಟಿ.
* ಪ್ರಸಕ್ತ ಹಣಕಾಸು ವರ್ಷಕ್ಕಾಗಿ ಎಂಎಸ್ಎಂಇಗಳಿಗಾಗಿ 350 ಕೋಟಿ ರೂ.ಗಳ ಬಡ್ಡಿ ಆರ್ಥಿಕ ನೆರವು.
* ವಿದ್ಯುತ್ ವಾಹನಗಳ ತ್ವರಿತ ಅಳವಡಿಕೆಗೆ ಉತ್ತೇಜನ ನೀಡಲು ಏಪ್ರಿಲ್ 1, 2019ರವರೆಗೆ ಕೇಂದ್ರ ಸರ್ಕಾರದಿಂದ 10,000 ಕೋಟಿ ರೂ.ಗಳ ಮಂಜೂರು.
* ಅಪೇಕ್ಷಿತ ಸಾಮಥ್ರ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಗ್ರಿಡ್ ಸೃಷ್ಟಿಗಾಗಿ ರಾಷ್ಟ್ರೀಯ ಹೆದ್ದಾರಿಗಳ ಕಾರ್ಯಕ್ರಮಗಳ ಸಮಗ್ರ ಪುನ್ರಚನೆ.
* ಬಂಡವಾಳ ಹೂಡಿಕೆಗಾಗಿ ಭಾರತಕ್ಕೆ ಪ್ರತಿ ವರ್ಷ 20 ಲಕ್ಷ ಕೋಟಿ ರೂ.ಗಳ ಅಗತ್ಯವಿದೆ.
* 2018ರಲ್ಲಿ ಭಾರತದ ವಿದೇಶಿ ನೇರ ಬಂಡವಾಳ(ಎಫ್ಡಿಐ) 64/37 ಶತಕೋಟಿ ಡಾಲರ್ಗಳಷ್ಟು ಸದೃಢ.
* ವಿಮಾನಯಾನ, ಮಾಧ್ಯಮ, ಅನಿಮೇಷನ್ ಮತ್ತು ವಿಮಾ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಉದಾರೀಕರಣ ನೀತಿ ಅನುಸರಣೆ
* ಹೊಸ ಮತ್ತು ಪ್ರೇರಕ ಸಾಲಗಳ ಮೇಲೆ ಜಿಎಸ್ಟಿ ಅಡಿ ನೋಂದಣಿಯಾದ ಎಲ್ಲ ಎಂಎಸ್ಎಂಇಗಳಿಗೆ ಶೇಕಡ 2ರಷ್ಟು ಬಡ್ಡಿ ವಿನಾಯಿತಿಗಾಗಿ 350 ಕೋಟಿ ರೂ.ಗಳು ಮೀಸಲು.
* ಜಾಗತಿಕ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜನೆ.
* ಪ್ರಸಕ್ತ ಸಾಲಿನಲ್ಲಿ ಸಾಲ ಖಾತರಿ ವರ್ಧನೆ ನಿಗಮ ಸ್ಥಾಪನೆ.
* ಉಚಿತ ಎಲ್ಪಿಜಿ ಯೋಜನೆ ಮತ್ತು ವಿದ್ಯುತ್ ಸಂಪರ್ಕ ಗ್ರಾಮಾಂತರ ಪ್ರದೇಶಗಳಿಗೆ ವರ್ಗಾವಣೆ
* 2022ರ ವೇಳೆಗೆ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೆ ಉಚಿತ ಅಡುಗೆ ಅನಿಲ ಮತ್ತು ವಿದ್ಯುತ್ ಸಂಪರ್ಕ
* ವಿಭಾಗೀಯ ಎಫ್ಡಿಐ ಮಿತಿಯನ್ನು ಶೇ.24ರಷ್ಟು ಹೆಚ್ಚಿಸಲಾಗಿದೆ.
* ಜಾಗತಿಕ ಆರ್ಥಿಕ ಹಿನ್ನಡೆಗಳ ನಡುವೆಯೇ ವಿದೇಶಿ ನೇರ ಬಂಡವಾಳ ಒಳ ಹರಿವು ಹೆಚ್ಚಳ.
* ಸರ್ಕಾರದ ಪ್ರತಿ ಕಾರ್ಯಕ್ರಮದಲ್ಲೂ ಗ್ರಾಮಸ್ಥರು, ಬಡವರು ಮತ್ತು ಕೃಷಿಕರನ್ನು ಕೇಂದ್ರೀಕರಿಸಲಾಗಿದೆ.
* ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಮನೆಗಳ ನಿರ್ಮಾಣ ಅವಧಿ 314 ದಿನಗಳಿಂದ 114 ದಿನಗಳಿಗೆ ಇಳಿಕೆ.
* ಪಿಎಂಎವೈ(ಗ್ರಾಮೀಣ) ಯೋಜನೆ ಅಡಿ 1.95 ಕೋಟಿ ಮನೆಗಳ ನಿರ್ಮಾಣ ಗುರಿ.
* ಮೀನುಗಾರಿಕೆ ವಲಯದ ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಜಾರಿಗೆ ಕ್ರಮ.
* ಸರ್ವಋತು ರಸ್ತೆ ಸಂಪರ್ಕವು ದೇಶದ ಶೇ.97ರಷ್ಟು ವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಯಶಸ್ವಿ.
* ಹಸಿರು ಸಾಮಗ್ರಿಗಳನ್ನು ಬಳಸಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ 30,000 ಕಿ.ಮೀ. ರಸ್ತೆ ನಿರ್ಮಿಸಲಾಗಿದೆ.
* ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯ ಎರಡನೇ ಹಂತದಲ್ಲಿ 80,250 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 1.25 ಲಕ್ಷ ಕಿ.ಮೀ. ರಸ್ತೆ ಮೇಲ್ಡರ್ಜೆಗೇರಿಸಲು ಉದ್ದೇಶಿಸಲಾಗಿದೆ.
* ಆರ್ಥಿಕ ಮೌಲ್ಯ ಸರಪಳಿಗೆ ಒಳಪಡಲು 50,000ಕ್ಕೂ ಹೆಚ್ಚು ಕುಶಲ ಕರ್ಮಿಗಳಿಗಾಗಿ ಪ್ರಸಕ್ತ ಸಾಲಿನಲ್ಲಿ 100 ಹೊಸ ಕ್ಲಸ್ಟರ್ಗಳ ಸ್ಥಾಪನೆಗೆ ಕ್ರಮ
* ಬೆಳೆಕಾಳುಗಳು ಮತ್ತು ದವಸ ಧಾನ್ಯಗಳಲ್ಲಿ ಭಾರತ ಸ್ವಾವಲಂಬನೆಗಾಗಿ ಕೃಷಿಕರಿಗೆ ಹಣಕಾಸು ಸಚಿವರ ಪ್ರಶಂಸೆ. ತೈಲ ಬೀಜಗಳಲ್ಲೂ ಸ್ವಯಂ ಸಾಧನೆಯ ಆಶಾಭಾವನೆ.
* ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ) ಸೌಲಭ್ಯಗಳ ಸದುಪಯೋಗಕ್ಕಾಗಿ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್(ಎನ್ಎಸ್ಐಎಸ್) ಸಂಸ್ಥೆ ನೆರವು.
* ಸ್ವಚ್ಛ ಭಾರತ ಅಭಿಯಾನದ ಅಡಿ ಈವರೆಗೆ 9.6 ಕೋಟಿ ಶೌಚಾಲಯಗಳ ನಿರ್ಮಾಣ.
* ಪ್ರತಿ ಗ್ರಾಮದಲ್ಲೂ ಘನ ತ್ಯಾಜ್ಯ ನಿರ್ವಹಣೆಗಾಗಿ ಸ್ವಚ್ಛಭಾರತ್ ಯೋಜನೆ ವಿಸ್ತರಣೆಗೆ ಕ್ರಮ.
* ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸುರಕ್ಷಿತ ಕುಡಿಯುವ ನೀರು ಒದಗಿಸಲು ಸರ್ಕಾರ ಬದ್ಧ.
* 2024ರ ವೇಳೆಗೆ ಹರ್ ಘರ್ ಜಲ್ ಯೋಜನೆ ಸಾಕಾರಗೊಳಿಸಲು ಆದ್ಯತೆ
* 10,000 ಹೊಸ ಕೃಷಿ ಉತ್ಪಾದಕರ ಸಂಘಗಳ ಸ್ಥಾಪನೆ
* ಗ್ರಾಮೀಣ ನಗರೀಕರಣ ಒಂದು ಸವಾಲು ಅಲ್ಲ, ಬದಲಿಗೆ ಒಂದು ಅವಕಾಶ, ನಗರ ಮತ್ತು ಗ್ರಾಮೀಣ ಜನಜೀವನ ಉತ್ತಮಗೊಳಿಸಲು ಸರ್ಕಾರದ ಆದ್ಯತೆ.
* ಭಾರತದ ಎಲ್ಲ ನಗರ ಮತ್ತು ಪಟ್ಟಣಗಳು ಶೇ.85ರಷ್ಟು ಬಯಲು ಶೌಚಾಲಯದಿಂದ ಮುಕ್ತವಾಗಿವೆ.
* ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ತತ್ವಾದರ್ಶಗಳನ್ನು ಯುವಜನತೆಗೆ ತಿಳಿಸಲು ಗಾಂಧಿ ಪಿಡಿಯಾ ಸ್ಥಾಪನೆ.
* ನೂತನ ರಾಷ್ಟ್ರೀಯ ಶೈಕ್ಷಣಿಕ ನೀತಿ ಜಾರಿಗೆ ಸರ್ಕಾರದ ಹೊಸ ಪ್ರಸ್ತಾವನೆ.
* ನವ ಭಾರತ ಸೃಷ್ಟಿಯತ್ತ ಕೇಂದ್ರ ಸರ್ಕಾರ ದಾಪುಗಾಲು
* ವಾಯುಯಾನ ಮಾರುಕಟ್ಟೆಯಲ್ಲಿ ಭಾರತಕ್ಕೆ ವಿಶ್ವದಲ್ಲಿ 3ನೇ ಸ್ಥಾನ
* ದೇಶಾದ್ಯಂತ 657 ಮೆಟ್ರೋ ರೈಲು ಜಾಲ ಯಶಸ್ವಿ ಕಾರ್ಯನಿರ್ವಹಣೆ
* ರೈಲ್ವೆ ಮೂಲಸೌಕರ್ಯಭಿವೃದ್ಧಿಗಾಗಿ 2030ರವರೆಗೆ 50ಲಕ್ಷ ಕೋಟಿ ರೂ.ಗಳ ಅಗತ್ಯ
* ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ
* ಭಾರತ್ ಮಾಲಾ, ಸಾರರ ಮಾಲಾ ಹಾಗೂ ಉಡಾನ್ನಂಥ ಯೋಜನೆಗಳು ನಗರ-ಗ್ರಾಮೀಣ ಪ್ರದೇಶಗಳ ನಡುವೆ ಸಂಪರ್ಕ ಕಲ್ಪಿಸಿ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿ ಸುಧಾರಣೆಗೆ ನೆರವಾಗಿದೆ.
* ರಾಷ್ಟ್ರೀಯ ಗ್ಯಾಸ್ ಗ್ರಿಡ್, ವಾಟರ್ ಗ್ರಿಡ್, ಐ-ವೇಗಗಳು ಮತ್ತು ಏರ್ಪೆÇೀರ್ಟ್ಗಳಿಗಾಗಿ ನೀಲನಕ್ಷೆ ಸಿದ್ಧ
* ಗಂಗಾ ನದಿಯಲ್ಲಿ ಸರಕು ಸಾಗಣೆ ನೌಕೆಗಳ ಸಂಚಾರ 4 ವರ್ಷಗಳಲ್ಲಿ 4 ಪಟ್ಟು ಹೆಚ್ಚಿಸುವ ಗುರಿ
* ಇಂಧನ ಕ್ಷೇತ್ರ ಸುಂಕ ಪ್ಯಾಕೆಜ್ ಮತ್ತು ರಚನಾತ್ಮಕ ಸುಧಾರಣೆಗಳು ಶೀಘ್ರ ಪ್ರಕಟ
* ಮಾದರಿ ಬಾಡಿಗೆ ಕಾನೂನು ಶೀಘ್ರ ಜಾರಿ ಮತ್ತು ಎಲ್ಲ ರಾಜ್ಯಗಳಲ್ಲೂ ಅನುಷ್ಠಾನ
* ವಿದ್ಯುತ್ ಕ್ಷೇತ್ರಕ್ಕಾಗಿ ಹೊಸ ಪ್ಯಾಕೆಜ್ ಶೀಘ್ರ ಪ್ರಕಟ