ದಶಕದ ದೂರದೃಷ್ಟಿ ಚಿಂತನೆ

ದಶಕದ ದೂರದೃಷ್ಟಿ ಚಿಂತನೆ:ನಮ್ಮ ಆರ್ಥಿಕತೆ 2014ರಲ್ಲಿ 1.85 ಟ್ರಿಲಿಯನ್ ಡಾಲರ್‍ನಷ್ಟಿತ್ತು. ಮುಂದಿನ ಐದು ವರ್ಷಗಳಲ್ಲಿ 2.7 ಟ್ರಿಲಿಯನ್ ಡಾಲರ್‍ನಷ್ಟಾಗಿದೆ, ಸಧ್ಯದಲ್ಲಿ ಐದು ಟ್ರಿಲಿಯನ್ ಡಾಲರ್ ಗುರಿ ಸಾಧನೆಗೆ ಒಂದು ದಶಕದ 10 ಅಂಶಗಳ ಕಾರ್ಯಸೂಚಿ ತಯಾರಿಸಲಾಗಿದೆ.

1)ಭೌತಿಕ ಮತ್ತು ಸಮಾಜಿಕ ವಲಯಗಳಲ್ಲಿ ಮೂಲಭೂತ ಸೌಕರ್ಯ ನಿರ್ಮಾಣ
2)ಆರ್ಥಿಕ ವಲಯದ ಎಲ್ಲಾ ಭಾಗಗಳಲ್ಲಿ ಡಿಜಿಟಲ್ ಇಂಡಿಯಾ ಬಳಕೆ
3)ಮಾಲಿನ್ಯ ಮುಕ್ತ ಭಾರತಕ್ಕಾಗಿ ಹಸಿರು ಮಾತೃ ಭೂಮಿ ಮತ್ತು ನೀಲಾಂಬರ ಯೋಜನೆ
4)ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಸಣ್ಣ ಕೈಗಾರಿಕೆ, ರಕ್ಷಣೆ, ವೈದ್ಯಕೀಯ ಉಪಕರಣಗಳು ಸೇರಿದಂತೆ ನಿರ್ಧಿಷ್ಟ ವಲಯಕ್ಕೆ ಆಧ್ಯತೆ
5)ನೀರು,ನೀರಿನ ನಿರ್ವಹಣೆ ಮತ್ತು ನದಿಗಳ ಸ್ವಚ್ಚತೆ
6)ನೀಲಿ ಆರ್ಥಿಕತೆ
7)ಅಂತರಿಕ್ಷ ಕಾರ್ಯಕ್ರಮಗಳು, ಗಗನಯಾನ, ಚಂದ್ರಯಾನ ಮತ್ತು ಉಪಗ್ರಹ ಕಾರ್ಯಕ್ರಮಗಳು
8)ಸ್ವಯಂ ಪೂರ್ಣತೆ (ಸ್ವಾವಲಂಬನೆ) ಮತ್ತು ಆಹಾರ ಪದಾರ್ಥಗಳ ರಫ್ತು
9)ಆರೋಗ್ಯ ಪೂರ್ಣ ಸಮಾಜ, ಆಯುಷ್ಯಮಾನ್ ಭಾರತ, ಮಹಿಳೆ-ಮಕ್ಕಳಿಗೆ ಪೋಷಕಾಂಶಗಳ ನಾಗರಿಕ ಸುರಕ್ಷತೆ
10)ಜನಭಾಗೀಧಾರಿ ಉದ್ದೇಶದೊಂದಿಗೆ ರಾಷ್ಟ್ರೀಯ ಸಹಭಾಗಿತ್ವ, ಕನಿಷ್ಟ ಸರ್ಕಾರ, ಪ್ರಭಾವಿ ಆಡಳಿತ—-ಎಂಬ ವಿಶೇಷ ಕಾರ್ಯಸೂಚಿಯೊಂದಿಗೆ ಎನ್‍ಡಿಎ-2 ಬಿರುಸಾಗಿಯೇ ರಂಗಕ್ಕೆ ಇಳಿದಿರುವುದು ಈ ಬಜೆಟ್‍ನಲ್ಲಿ ಕಂಡುಬರುತ್ತಿದೆ.

ಗ್ರಾಮ್ ಸಡಕ್‍ನಿಂದ ಭಾರತ್ ಮಾಲವರೆಗೂ ಸಂಪರ್ಕಜಾಲ:
ಆರ್ಥಿಕತೆಯ ಜೀವಜಲ ಎಂದರೆ ಸಂಪರ್ಕ ಮತ್ತು ಸಾಧನೆಗಳು. ಸಂಪರ್ಕ ಜಾಲವನ್ನು ವಿಸ್ತರಿಸುವದಷ್ಟೇ ಅಲ್ಲ, ಪ್ರಭಾವಿಯಾಗಿಸುವ ಹಿನ್ನಲೆಯಲ್ಲಿ ಗ್ರಾಮ್ ಸಡಕ್ ಯೋಜನಾ, ಕೈಗಾರಿಕಾ ಕಾರಿಡಾರ್, ವೈಮಾನಿಕ ಕಾರಿಡಾರ್,ಭಾರತ್ ಮಾಲ, ಸಾಗರ ಮಾಲ, ಜಲಮಾರ್ಗ ವಿಕಾಸ ಮತ್ತು ಉಡಾನ್ ಯೋಜನೆಗಳನ್ನು ಒಂದಕ್ಕೊಂದು ಪೂರಕವಾಗಿರುವಂತೆ ರೂಪಿಸಲಾಗುತ್ತಿದೆ. ಇದು ಸಂಪರ್ಕ ಮತ್ತು ಸಾಗಾಣಿಕೆಗೆ ನಿರಂತರ ಆವಕಾಶ ನೀಡುವದರೊಂದಿಗೆ ಜೀರೋ ಟ್ರಾಫಿಕ್ ರೂಪಿಸಿ ಆಗತ್ಯಕ್ಕನುಗುಣವಾಗಿ ವೇಗ ವರ್ಧಿಸಬಹುದಾಗಿದೆ.

ಗಾಂವ್, ಗರೀಬ್, ಕಿಸಾನ್:
ಎನ್‍ಡಿಎ-2 ವಿಶೇಷ ರೈತರಿಗೆ ವಿಶೇಷ ಬೆಂಬಲ ನೀಡಲು ನಿರ್ಧರಿಸಿದೆ. ಕೃಷಿ ವಲಯದಲ್ಲಿ ಮೂಲಭೂತ ಸೌಕರ್ಯಗಳಿಗಾಗಿ ವ್ಯಾಪಕ ಹೂಡಿಕೆ ಮಾಡಲು ಪ್ರಸ್ತಾಪ ಮಾಡಲಾಗಿದೆ. ಈ ಮೂಲಕ ಅನ್ನದಾತ ರೈತ ಊರ್ಜದಾತನು ಆಗಲು ಆವಕಾಶ ಕಲ್ಪಿಸಲಿದೆ. ಇದಕ್ಕಾಗಿ ಖಾಸಗಿ ವಲಯಕ್ಕೆ ಆವಕಾಶ ನೀಡಲಿದೆ. ಇದರಿಂದ ಮೌಲ್ಯವರ್ಧಿತ ರೈತನನ್ನು ರೂಪಿಸಲು ಚಿಂ
ತಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ