ನವದೆಹಲಿ: ಲೋಕಸಭೆ ಸಮರದ ಬಳಿಕ ದೇಶ ಮತ್ತೊಂದು ಬಜೆಟ್ ಗೆ ಸಾಕ್ಷಿ ಆಗಲಿದೆ. ಇಂದು ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ಬಜೆಟ್ ಮಂಡನೆ ಆಗಲಿದೆ. ಮೊದಲ ಬಾರಿಗೆ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸುತ್ತಿದ್ದಾರೆ. ಇಡೀ ದೇಶದ ಜನರು ಆಸೆಗಣ್ಣುಗಳಲ್ಲಿ ಬಜೆಟ್ ನಲ್ಲಿ ಏನಿರಬಹುದು ಎಂದು ನಿರೀಕ್ಷೆ ಮಾಡುತ್ತಿದ್ದಾರೆ.
ಒಂದು ಕಡೆ ಐತಿಹಾಸಿಕ ಉದ್ಯೋಗ ನಷ್ಟವಾಗಿದೆ, ಕೃಷಿ ವಲಯ ಪಾತಾಳಕ್ಕೆ ಸಿಲುಕಿದೆ. ಬೆಳೆ ಹಾನಿ, ಬೆಂಬಲ ಬೆಲೆ ಇಲ್ಲದೆ ರೈತ ರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದು ಕಡೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲೂ ಆರ್ಥಿಕ ಹಿನ್ನಡೆ ಆಗಿದೆ. ಹೀಗೆ ಸಾಲು ಸಾಲು ಸವಾಲುಗಳ ನಡುವೆ ಇಂದು ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸುತ್ತಿದ್ದಾರೆ.
ಕಳೆದ ಫೆಬ್ರವರಿ 1 ರಂದು ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ರೈಲ್ವೆ ಸಚಿವರಾಗಿದ್ದ ಪಿಯೂಷ್ ಗೊಯೇಲ್ ಬಜೆಟ್ ಮಂಡಿಸಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಬಜೆಟ್ ಆಗದೆ ಕೇವಲ ಲೇಖಾನುದಾನ ಪಡೆಯಲಾಗಿತ್ತು. ಈಗ ಮೋದಿ ನೇತೃತ್ವದ ಸರ್ಕಾರ ವಾಪಸ್ ಬಂದಿದ್ದ ಇಂದು ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಆಗಲಿದೆ.
ಚುನಾವಣಾ ಪೂರ್ವ ಬಜೆಟ್ ನಲ್ಲಿ ರೈತರನ್ನು ಟಾರ್ಗೆಟ್ ಮಾಡಲಾಗಿತ್ತು. ರೈತರ ಖಾತೆಗೆ 6 ಸಾವಿರ ಹಣ ಸೇರಿದಂತೆ ನೌಕರರ ವರ್ಗಕ್ಕೆ 5 ಲಕ್ಷಕ್ಕೆ ಆದಾಯ ಮಿತಿ ಹೆಚ್ಚಳ ಮಾಡುವ ಘೋಷಣೆ ಮಾಡಲಾಗಿತ್ತು. ಚುನಾವಣೆಯ ಹೊಸ್ತಿಲಲ್ಲಿ ಈ ಮೂಲಕ ಜನಪ್ರೀಯತೆ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ಈಗ ಚುನಾವಣೆಯಲ್ಲಿ ಭರ್ಜರಿಯಾಗಿ ಜಯಗಳಿಸಿದ್ದು ರಾಷ್ಟ್ರೀಯತೆ ಸೇನೆ ಭದ್ರತೆ, ಯುವಕರು ಮಹಿಳೆಯರ ಮೇಲೆ ಹೆಚ್ಚು ಕೇಂದ್ರಿಕರಿಸಲಾಗಿತ್ತು. ಹಾಗಾಗಿ ಈ ಬಜೆಟ್ ನಲ್ಲಿ ಏನಿರಬಹುದು ಅನ್ನೊ ನೀರಿಕ್ಷೆ ಹೆಚ್ಚುವಂತೆ ಮಾಡಿದೆ.