ಬೆಂಗಳೂರು, ಜು.4- ಮತ್ತೆ ಚುನಾವಣೆಗೆ ನಾವು ನಿಲ್ಲುವುದಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇವೇಗೌಡರು ಸೋತಿರುವುದು ಪಕ್ಷ ಸಂಘಟನೆ ಮಾಡುವುದಕ್ಕೆ, ಲೋಕಸಭೆ ಚುನಾವಣೆ ಸೋಲಿನಿಂದ ನಾನು ದೃತಿಗೆಟ್ಟಿಲ್ಲ. ಪ್ರಾದೇಶಿಕ ಪಕ್ಷ ಕಟ್ಟಿ ಬೆಳೆಸುವುದು ಅಷ್ಟು ಸುಲಭವಲ್ಲ. ದೇವೇಗೌಡರು ಇನ್ನೊಂದು ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಆಸೆ ಬಿಟ್ಟು ಬಿಡಿ ಎಂದರು.
ಮೈತ್ರಿ ಪಕ್ಷಕ್ಕೆ ಧಕ್ಕೆ ಬರದಂತೆ, ಅಪಾಯ ಬರದಂತೆ ಪಕ್ಷ ಸಂಘಟನೆ ಮಾಡಲಾಗುವುದು. ಇದಕ್ಕೆ ಕಾಂಗ್ರೆಸ್ನವರ ಜವಾಬ್ದಾರಿ ಇದೆ. ಗೊಂದಲವನ್ನು ನಿವಾರಿಸಿಕೊಂಡು ಮುಂದೆ ಹೋಗುತ್ತೇವೆ ಎಂದರು.
ಶೀಘ್ರದಲ್ಲೇ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಕಾರ್ಮಿಕ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದರು.
ಈಗ ರಾಜ್ಯಾಧ್ಯಕ್ಷ ಸ್ಥಾನದ ಗೊಂದಲವನ್ನು ಬಗೆಹರಿಸಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಲಾಗಿದೆ. ಯುವ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ನೂತನ ಕಾರ್ಯಾಧ್ಯಕ್ಷರಾದ ಮಧುಬಂಗಾರಪ್ಪನವರಿಗೆ ಇದೆ. ಶರಣಗೌಡ ಪಾಟೀಲ್ ಅವರು ಹಠ ಮಾಡಿ ನಿಖಿಲ್ ಕುಮಾರಸ್ವಾಮಿ ಅವರನ್ನು ಯುವ ಘಟಕದ ಅಧ್ಯಕ್ಷರನ್ನಾಗಿಸಿದರು.
ನಿಖಿಲ್ ಕುಮಾರಸ್ವಾಮಿ ಅವರು ಸಾಮಾಜಿಕ ನ್ಯಾಯದಡಿ ಪದಾಧಿಕಾರಿಗಳ ನೇಮಕವಾಗಲಿ, ಅಲ್ಪಸಂಖ್ಯಾತ ಘಟಕದ ಭಗವಾನ್ ಅವರು ಆ ಸ್ಥಾನವನ್ನು ನಿರೀಕ್ಷೆ ಮಾಡಿರಲಿಲ್ಲ. ನಾವು ಹೇಳಿದ ತಕ್ಷಣ ಅವರು ಒಪ್ಪಿಕೊಂಡಿದ್ದಾರೆ ಎಂದರು.